Dinesh Gundurao ಮಂಗನ ಕಾಯಿಲೆಗೆ ಸಂಭಂದಿಸಿದಂತೆ ನಾಲ್ಕು ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಆರೋಗ್ಯ ಸಚಿವರು
ಮಂಗನ ಕಾಯಿಲೆ ನಿಯಂತ್ರಣ ಮಾಡುವುದು ಹಾಗೂ ಕಾಯಿಲೆ ಹರಡದಂತೆ ಮುಂಜಾಗ್ತತೆಯ ಕ್ರಮ ನಾಲ್ಕು ಜಿಲ್ಲೆಯ ಅಧಿಕಾರಿಗಳು ಮಾಡಬೇಕು.ಕಾಯಿಲೆ ಹೆಚ್ಚು ಉದ್ಭವಿಸುವ ಗ್ರಾಮದಲ್ಲಿ ಜನರಿಗೆ ಅರಿವು ಮೂಡಿಸುವುದು. ಮಂಗಗಳು ಸತ್ತರೆ ಅದರ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಕೊಡಲೆ ರಿಸಲ್ಟ್ ಪಡೆದು ಕಾರ್ಯಪ್ರವೃತ್ತರಾಗಬೇಕು. ಗ್ರಾಮಪಂಚಾಯತ್ ಮಟ್ಟದಲ್ಲಿ ಸಭೆ ನಡೆಸುವುದು. ಈಗಾಗಲೆ ಡಿ.ಎಮ್.ಪಿ ಆಯಿಲ್ ಸರ್ಕಾರದ ಮಟ್ಟದಲ್ಲಿ ಇದೆಯಾದರೂ ನಾಲ್ಕು ಜಿಲ್ಲೆಯ ಅಧಿಕಾರಿಗಳು ತಮ್ನ ವ್ಯಾಪ್ತಿಗೆ ಬೇಕಾದಷ್ಟು ತರಿಸಿಕೊಂಡು ಶಾಲಾ ಮಕ್ಕಳಿಗೆ ಮನೆಗಳಿಗೆ ವಿತರಿಸುವುದು. ಶಿರಸಿಯಲ್ಲಿ ಲ್ಯಾಬ್ ಟೆಸ್ಟ್ ಕೇಂದ್ರ ಮಾಡುವುದು ಶಿವಮೊಗ್ಗ ಲ್ಯಾಬ್ ಟೆಸ್ಟ್ ಕೇಂದ್ರ ಉನ್ನತೀಕರಿಸಿ ಗ್ರೇಡ್ ಮೂರಕ್ಕೆ ಏರಿಸಲಾಗುವುದು ಪೂನಾ ಮಾದರಿಯಲ್ಲಿ ಕರ್ನಾಟಕದಲ್ಲಿ ಲ್ಯಾಬ್ ಟೆಷ್ಟ್ ಕೇಂದ್ರ ಸ್ಥಾಪನೆ Dinesh Gundurao ಶಿವಮೊಗ್ಗದಲ್ಲಿಅಡಲಾಗುವುದು. ನಾಲ್ಕು ಜಿಲ್ಲೆಗಳಾದ ಶಿವಮೊಗ್ಗ ಕಾರವಾರ ಚಿಕ್ಕಮಗಳೂರು ಉಡುಪಿ ಜಿಲ್ಲಗಳಿಗೆ ಕೆ.ಎಪ್.ಡಿ ವಾಹನಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು. ಮಣಿಪಾಲ್ ನಲ್ಲಿ ಮಂಗನಕಾಯಿಲೆಗೆ ಉಚಿತ ಚಿಕಿತ್ಸೆಯನ್ನು ಬಿಪಿಎಲ್ ಕಾರ್ಡ್ ಹಾಗೂ ಎಪಿಎಲ್ ಕಾರ್ಡ್ ಹೊಂದಿದವರಿಗೂ ನೀಡಲು ವಿಶೇಷ ಸೌಲಭ್ಯ ಸರ್ಕಾರದಿಂದ ನೀಡಲಾಗುವುದು. ಮಂಗನಕಾಯಿಲೆ ಲ್ಯಾಬ್ ಟೆಷ್ಟ್ ಸೆಂಟರ್ ಸಾಗರದಲ್ಲಿ ಇರುವುದನ್ನು ಮತ್ತೆ ಪುನರ್ ಆರಂಭಿಸಲಾಗುವುದು. ಮಂಗನ ಕಾಯಿಲೆಯ ಪ್ರಯೋಗಾಲಯ ಬಗ್ಗೆ ಹಾಗೂ ಚಿಕಿತ್ಸೆಯ ಬಗ್ಗೆ ಹೆಚ್ವಿನ ಸಂಶೋಧನೆ ನಡೆಸಲಾಗುವುದು. ಸಾಗರ ಉಪವಿಭಾಗೀಯ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯ ಗ್ರೇಡ್ ಗೆ ಏರಿಸಲು ಕ್ರಮಕ್ಯೆಗೊಳ್ಳಲಾಗುವುದು. ಸಭೆಯಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಉಪಸ್ಥಿತರಿದ್ದರು.
Dinesh Gundurao ಮಂಗನ ಕಾಯಿಲೆ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಯಂತೆ ಮೆಗ್ಗಾನ್ ನಲ್ಲೂ ಡಾಕ್ಟರ್ ನೇಮಸಿಕೊಳ್ಳಿ – ಆರೋಗ್ಯ ಮಂತ್ರಿ ದಿನೇಶ್ ಗುಂಡುರಾವ್
Date: