Rotary Shimoga ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ನಿರಂತರ ಪರಿಶ್ರಮ ಮುಖ್ಯ ಎಂದು ಅಮೃತ್ನೋನಿ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.
ರಾಮೇನಕೊಪ್ಪದ ಅಮೃತ್ನೋನಿ ಫ್ಯಾಕ್ಟರಿ ಆವರಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಹಾಗೂ ರೋಟರಿ ಶಿವಮೊಗ್ಗ ಸೆಂಟ್ರಲ್ ವತಿಯಿಂದ ವೃತ್ತಿ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಕೈಗಾರಿಕಾ ಕ್ಷೇತ್ರದ ಭೇಟಿ ಸಂದರ್ಭದಲ್ಲಿ ಮಾತನಾಡಿದರು.
ಉದ್ಯಮದ ಯಶಸ್ಸಿನಲ್ಲಿ ಕಾರ್ಮಿಕ ವರ್ಗ ಹಾಗೂ ಸಿಬ್ಬಂದಿಯ ಪಾತ್ರ ಬಹುಮುಖ್ಯವಾಗಿರುತ್ತದೆ. ಸಣ್ಣದಾಗಿ ಆರಂಭಗೊಂಡ ಸಂಸ್ಥೆಯು ಬೃಹತ್ ಉದ್ಯಮವಾಗಿ ಬೆಳೆಯುವಲ್ಲಿ ಕುಟುಂಬದ ಸಹಕಾರ ಕೂಡ ಹೆಚ್ಚಿದೆ. ಗುಣಮಟ್ಟ ಕಾಪಾಡಿಕೊಂಡು ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.
Rotary Shimoga ಅಮೃತ್ನೋನಿ ಸಿಇಒ ಇಂಚರಾ ನಾಡಿಗ್ ಮಾತನಾಡಿ, ಅಮೃತ್ನೋನಿ ಸಂಸ್ಥೆ ಬೆಳೆದು ಬಂದ ದಾರಿಯ ಜತೆಗೆ ನೋನಿ ಹಣ್ಣಿನ ಔಷಧಿ ಗುಣಗಳು ಹಾಗೂ ಪರಿಣಾಮಕಾರಿ ಉಪಯೋಗಗಳ ಬಗ್ಗೆ ವಿವರಿಸಿದರು. ರೋಟರಿ ಸದಸ್ಯರು ಅಮೃತ್ ನೋನಿ ಸಂಸ್ಥೆ ಆವರಣವನ್ನು ವೀಕ್ಷಿಸಿದರು.
ವೃತ್ತಿಪರ ಜಂಟಿಸಭೆಯನ್ನು ಉದ್ದೇಶಿಸಿ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ಸಂಸ್ಥೆಯು ಸಾವಿರಾರು ಕುಟುಂಬಗಳಿಗೆ ಉದ್ಯೋಗ ಅವಕಾಶ ನೀಡುವ ಜತೆಯಲ್ಲಿ ಬದುಕು ರೂಪಿಸಿಕೊಳ್ಳಲು ಸಹಾಯಕವಾಗಿದೆ ಎಂದು ತಿಳಿಸಿದರು.
ರೋಟರಿ ಸೆಂಟ್ರಲ್ ಕ್ಲಬ್ ಅಧ್ಯಕ್ಷ ಕಿರಣ್ಕುಮಾರ್ ಮಾತನಾಡಿ, ವೃತ್ತಿ ಮಾಸಾಚರಣೆ ತಿಂಗಳಲ್ಲಿ ರೋಟರಿ ಸದಸ್ಯರು ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ವೃತ್ತಿ ಕ್ಷೇತ್ರದಲ್ಲಿನ ವಿವಿಧ ಸಂಗತಿಗಳನ್ನು ಅರಿತುಕೊಳ್ಳುವ ಪ್ರಯತ್ನ ಎಂದರು.
ಜಿಲ್ಲಾ ಮಾಜಿ ಗವರ್ನರ್ ಜಿ.ಎನ್.ಪ್ರಕಾಶ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ ಹೋಬಳಿದಾರ್, ಸುಬ್ಬೇಗೌಡ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಕಡಿದಾಳ್ ಗೋಪಾಲ್, ಹೊಸತೋಟ ಸೂರ್ಯನಾರಾಯಣ, ಡಾ. ಗುಡದಪ್ಪ ಕಸಬಿ, ಶ್ರೀಕಾಂತ್, ಕೆ.ಆರ್.ನಟರಾಜ್, ಅಮೃತ್ ನೋನಿ ಸಂಸ್ಥೆಯ ಅಂಬುಜಾಕ್ಷಿ, ಶ್ರೀಕಾಂತ್ ನಾಡಿಗ್, ರಾಮಮೂರ್ತಿ, ಹರಿಣಿ, ರೋಟರಿ ಸದಸ್ಯರು ಉಪಸ್ಥಿತರಿದ್ದರು.