Saturday, November 23, 2024
Saturday, November 23, 2024

VISL Bhadravati ಭದ್ರಾವತಿ ವಿಐಎಸ್ ಎಲ್ ನಿಂದ ಪರಿಸರ ನಡಿಗೆ ಕಾರ್ಯಕ್ರಮ

Date:

VISL Bhadravati ವಿಐಎಸ್‌ಎಲ್ ಸಂಸ್ಥೆಯ ಆವರಣದಲ್ಲಿರುವ ಇಸ್ಪಾತ್ ಭವನದ ಮುಂಭಾಗ ಕಾರ್ಯಪಾಲಕ ನಿರ್ದೇಶಕ ಶ್ರೀ ಬಿ.ಎಲ್.ಚಂದ್ವಾನಿರವರು ಪರಿಸರ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇವರೊಂದಿಗೆ ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಜೆ. ಜಗದೀಶ್, ಅಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ ಮತ್ತು ಶ್ರೀ ಪಾರ್ಥಸಾರಥಿ ಮಿಶ್ರಾ, ಅಧ್ಯಕ್ಷರು, ವಿಐಎಸ್‌ಎಲ್ ಅಧಿಕಾರಿಗಳ ಸಂಘ ಉಪಸ್ಥಿತರಿದ್ದರು. ಶ್ರೀ ಹರಿಶಂಕರ್, ಮಹಾಪ್ರಬಂಧಕರು (ಸುರಕ್ಷತೆ) ಪರಿಸರ ನೀತಿಯನ್ನು ಓದಿದರು ಹಾಗೂ ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಾರ್ವಜನಿಕ ಸಂಪರ್ಕ), ಶ್ರೀಮತಿ ಶೋಭಾ ಶಿವಶಂಕರನ್, ಮಹಾಪ್ರಬಂಧಕರು (ಹಣಕಾಸು ಮತ್ತು ಲೆಖ್ಖ) ಮತ್ತು ಶ್ರೀ ಎಲ್. ಕುಥಲನಾಥನ್, ಸಹಾಯಕ ಮಹಾಪ್ರಬಂಧಕರು (ವಿಜಿಲೆನ್ಸ್) ಪರಿಸರ ಪ್ರತಿಜ್ಞೆಗಳನ್ನು ಕ್ರಮವಾಗಿ ಕನ್ನಡ, ಹಿಂದಿ ಮತ್ತು ಆಂಗ್ಲಭಾಷೆಯಲ್ಲಿ ಬೋಧಿಸಿದರು. ಪರಿಸರ ಕಾಳಜಿ ಮೂಡಿಸುವ ಸಲುವಾಗಿ ಪರಿಸರ ನಡಿಗೆಯನ್ನು ಕೈಗೊಳ್ಳಲಾಗಿತ್ತು. ಶ್ರೀ ಉನ್ನೀಕೃಷ್ಣನ್, ಸಹಾಯಕ ಮಹಾಪ್ರಬಂಧಕರು (ಹಣಕಾಸು) ಪ್ರಾರ್ಥಿಸಿದರು, ಶ್ರೀ ವಿಕಾಸ ಬಸೇರ್, ಸಹಾಯಕ ಮಹಾಪ್ರಬಂಧಕರು (ನೀರು ಸರಬರಾಜು ಮತ್ತು ಪರಿಸರ ನಿರ್ವಹಣೆ) ಸ್ವಾಗತಿಸಿ ಶ್ರೀ ನಂದನ, ಕಿರಿಯ ಪ್ರಬಂಧಕರು ವಂದಿಸಿದರು.

ಪರಿಸರ ಮಾಸಾಚರಣೆ-೨೦೨೪ ನವೆಂಬರ್ ೧೯ ರಿಂದ ಡಿಸೆಂಬರ್ ೧೮, ೨೦೨೪ರ ವರೆಗಿದ್ದು ಅದರ ಅಂಗವಾಗಿ ಪರಿಸರದ ಬಗ್ಗೆ ಕಾಳಜಿಯನ್ನು ಮೂಡಿಸುವ ಉದ್ದೇಶದಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ, ಪರಿಸರ ರಸಪ್ರಶ್ನೆ ಮತ್ತು ಘೋಷವಾಕ್ಯ ಬರೆಯುವ ಸ್ಪರ್ಧೆಗಳನ್ನ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದೆ.
ಭದ್ರಾವತಿಯ ಶಾಲಾ ವಿಧ್ಯಾರ್ಥಿಗಳಿಗಾಗಿ ಆಯೋಜಿಸಿರುವ ಸ್ಪರ್ಧೆಗಳ ವಿವರ ಈ ಕೆಳಕಂಡAತಿದೆ.

೫ನೇ ತರಗತಿಯಿಂದ ೭ನೇ ತರಗತಿ
ಪ್ರಬಂಧ ಸ್ಪರ್ಧೆ (ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ)
ದಿನಾಂಕ: ೨೩-೧೧-೨೦೨೪,
ಸಮಯ: ಮಧ್ಯಾನ್ಹ ೩.೦೦ ಘಂಟೆ
ಸ್ಥಳ: ವಿಐಎಸ್‌ಎಲ್ ಕ್ರೀಡಾಂಗಣ
೮ನೇ ತರಗತಿಯಿಂದ ೧೦ನೇ ತರಗತಿ
ರಸಪ್ರಶ್ನೆ ಸ್ಪರ್ಧೆ (ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ)

VISL Bhadravati ಪ್ರತಿ ಶಾಲೆಯಿಂದ ಪ್ರತಿ ವಿಭಾಗದಲ್ಲಿ ೫ ವಿದ್ಯಾರ್ಥಿಗಳಿಗೆ ಸೀಮಿತವಾಗಿರಿಸಲಾಗಿದೆ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಅಧಿಕಾರಿಗಳು ಭಾಗವಹಿಸಲು ಅನುಮತಿಸಿರುವ ಅಧೀಕೃತ ಪತ್ರಗಳನ್ನು ತರಬೇಕಾಗಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ: 9480829062 / 9480829202

ನಮ್ಮ ಭೂಮಿ – ಪುನಃಸ್ಥಾಪನೆ, ಮರುಭೂಮಿ ಮತ್ತು ಬರ ಸ್ಥಿತಿಸ್ಥಾಪಕತ್ವವಾಗಿದ್ದು ಈ ವರ್ಷದ ಪರಿಸರ ಮಾಸಾಚರಣೆಯ ಧ್ಯೇಯವಾಗಿರಿಸಲಾಗಿದೆ. ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ತಮ್ಮ ಸಂದೇಶದಲ್ಲಿ ನಾವೆಲ್ಲರೂ ಒಗ್ಗೂಡಿ ಮರುಭೂಮಿಯಾಗುವುದನ್ನು ಬರವನ್ನು ತಡೆಯುವುದು ಹಾಗೂ ಭೂಮಿ ಪುನಃಸ್ಥಾಪನೆಯನ್ನು ಸಹ ಸಂಯುಕ್ತವಾಗಿ ಸಾಧಿಸಬಹುದು ಎಂದು ತಿಳಿಸಿದರು.

ಶ್ರೀ ಬಿ.ಎಲ್. ಚಂದ್ವಾನಿ ತಮ್ಮ ಭಾಷಣದಲ್ಲಿ ಭೂಮಿಯ ಅವನತಿ, ಮರುಭೂಮಿ ಮತ್ತು ಬರಗಾಲದ ಸಮಸ್ಯೆಗಳು ಉಲ್ಬಣಗೊಳ್ಳುವುದರಿಂದ ನೈಸರ್ಗಿಕ ಪರಿಸರ ವ್ಯವಸ್ಥೆಗೆ ಮಾತ್ರವಲ್ಲದೆ ಪ್ರಪಂಚದಾದ್ಯAತ ಸಮುದಾಯಗಳ ಜೀವನೋಪಾಯ, ಆರೋಗ್ಯ ಮತ್ತು ಯೋಗಕ್ಷೇಮಕ್ಕೂ ಸಂಕಷ್ಟ ಉಂಟುಮಾಡಿದೆ ಎಂದರು.

ಈ ಕಾರ್ಯಕ್ರಮವನ್ನು ಸೈಲ್-ವಿಐಎಸ್‌ಎಲ್ ನ ಪರಿಸರ ನಿರ್ವಹಣಾ ವಿಭಾಗವು ಆಯೋಜಿಸಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...