Shikaripura News ನಾಡಿನ ಅಹಿಂದ ವರ್ಗಕ್ಕೆ ಸೇರಿದ ಜನರ ಹಿತ ಕಾಯುವ ನಾಯಕ ಮುಖ್ಯಮಂತ್ರಿ ಆಗಿರಬಾರದು ಎನ್ನುವ ಏಕೈಕ ಕಾರಣಕ್ಕೆ ಬಿಜೆಪಿ, ಜೆಡಿಎಸ್ ನಾಯಕರು ಸಿದ್ಧರಾಮಯ್ಯ ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅಹಿಂದ ಯುವ ಘಟಕ ಅಧ್ಯಕ್ಷ ನಗರದ ಮಾಲತೇಶ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ರಾಜ್ಯಪಾಲರ ಕಚೇರಿ ದುರ್ಬಳಕೆ ವಿರೋಧಿಸಿ, ಸಿದ್ಧರಾಮಯ್ಯಗೆ ವಿನಾಕಾರಣ ಕಿರುಕುಳ ನೀಡುತ್ತಿರುವುದು ವಿರೋಧಿಸಿ ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ವೇಳೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸಿದ್ಧರಾಮಯ್ಯ ವಿರುದ್ದ ಪ್ರಕರಣ ತನಿಖೆ ನಡೆಸುವುದಕ್ಕೆ ಕೋರ್ಟ್ ಸೂಚನೆ ನೀಡಿದೆ. ಆದರೆ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ಸೇರಿ ಬಿಜೆಪಿ ಹಲವು ನಾಯಕರ ವಿರುದ್ಧ ಪ್ರಕರಣ ತನಿಖೆ ನಡೆದು ಆರೋಪಿತರು ಎಂದು ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದರೂ ಅವರ ಬಂಧನಕ್ಕೆ, ವಿಚಾರಣೆ ಅನುಮತಿ ನೀಡುವುದಕ್ಕೆ ರಾಜ್ಯಪಾಲರು ಮಿನಾಮೇಷ ಎಣಿಸುತ್ತಿದ್ದಾರೆ ಎಂದರು.
Shikaripura News ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜಗೌಡ ಮಾತನಾಡಿ, ಸಿದ್ಧರಾಮಯ್ಯ ಸರಕಾರಕ್ಕೆ ನಾಡಿನ ಜನತೆ ಸಂಪೂರ್ಣ ಬಹುಮತ ನೀಡಿದ್ದರೂ ರಾಜ್ಯಪಾಲರ ಕಚೇರಿ ಪಕ್ಷದ ಕಚೇರಿಯನ್ನಾಗಿಸಿಕೊಂಡು ಸಿಎಂ ಸ್ಥಾನದಿಂದ ಕೆಳಗಿಳಿಸುವ ಷಡ್ಯಂತ್ರ ನಡೆಯುತ್ತಿದೆ. ಬಿಜೆಪಿ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ನಡೆಸಿರುವ ಬಿ.ವೈ.ವಿಜಯೇಂದ್ರ ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಬೇಕು ಎನ್ನುವ ಕಾರಣಕ್ಕೆ ಕಾನೂನು, ಸಿಬಿಐ, ಇಡಿ ಸಂಸ್ಥೆಯನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ ಈ ಕುರಿತು ಜನತೆ ಎಚ್ಚೆತ್ತುಕೊಳ್ಳಬೇಕು. ಬಿ.ಎಸ್.ಯಡಿಯೂರಪ್ಪ ಕುಟುಂಬ ಸಾವಿರಾರು ಕೋಟಿ ಆಸ್ತಿ ಅಕ್ರಮವಾಗಿ ಸಂಪಾದಿಸಿದ್ದು ಅದರ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪಟ್ಟಣದ ಬಹುತೇಕ ಅಂಗಡಿ ಬಂದ್ ಮಾಡಿ ಬಂದ್‌ಗೆ ಸಹಕರಿಸಿದರು.
Shikaripura News ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ
Date: