Saturday, November 23, 2024
Saturday, November 23, 2024

International Democracy Day ಡಾ.ಅಂಬೇಡ್ಕರ್ ದೊಡ್ಡ ತತ್ವಜ್ಞಾನಿ.ಅವರಿಲ್ಲದಿದ್ದರೆ ಈ ದೇಶ ಉಳಿಯುತ್ತಿರಲಿಲ್ಲ- ಪ್ರೊ.ಶರತ್ ಅನಂತಮೂರ್ತಿ

Date:

International Democracy Day ಪ್ರಜಾಪ್ರಭುತ್ವ’ ಆದರ್ಶವಾದ ಸಾರ್ವತ್ರಿಕ ಮೌಲ್ಯ – ಪ್ರೊ. ಶರತ್ ಅನಂತಮೂರ್ತಿ
ಮಾನವೀಯ ಮೌಲ್ಯಗಳ ನಿಧಿಯಾದ ಪ್ರಜಾಪ್ರಭುತ್ವ ವ್ಯವಸ್ಥೆ ಮಾನವರೆಲ್ಲರೂ ಒಂದೇ ಎಂಬುದನ್ನು ಸಾರುತ್ತದೆ. ಸರ್ವರೂ ಸಮಾನರು ಎಂಬ ಅರಿವೇ ಪ್ರಜಾಪ್ರಭುತ್ವದ ತಳಹದಿ. ಪ್ರಜಾಪ್ರಭುತ್ವವನ್ನು ವಿಶ್ವಸಂಸ್ಥೆ ಅತ್ಯಂತ ಶ್ರೇಷ್ಠ ಮೌಲ್ಯವೆಂದು ಪರಿಗಣಿಸಿದೆ. ಪ್ರಜಾಪ್ರಭುತ್ವ ಆದರ್ಶವಾದ ಸಾರ್ವತ್ರಿಕ ಮೌಲ್ಯವೆಂದು ಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿ ಅವರು ಅಭಿಪ್ರಾಯಪಟ್ಟರು. ಅವರು ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಏರ್ಪಡಿಸಿದ್ದ ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಬೇಡ್ಕರ್ ಬಹುದೊಡ್ಡ ತತ್ವಜ್ಞಾನಿ. ಅವರು ಇಲ್ಲದಿದ್ದರೆ ಈ ದೇಶ ಉಳಿಯುತ್ತಿರಲಿಲ್ಲ. ಅವರಿಂದ ರಚನೆಯಾದ ಸಂವಿಧಾನವೇ ಒಂದು ಕ್ರಾಂತಿಕಾರಕ ದಾಖಲೆ. ಆಧುನಿಕತೆಯನ್ನು ತಂದುಕೊಟ್ಟ ಮಹಾವ್ಯಕ್ತಿ. ಅಂಬೇಡ್ಕರ್ ಅವರ ‘ಜಾತಿವಿನಾಶ’ ಕೃತಿಯನ್ನು ಎಲ್ಲರೂ ಕಡ್ಡಾಯವಾಗಿ ಓದಬೇಕೆಂದು ತಿಳಿಸಿದರು. ತದನಂತರ ಭಾರತ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದವರಿಗೆಲ್ಲ ನೆನಪಿನ ಕಾಣಿಕೆಯಾಗಿ ‘ಪೆನ್ನು’ಗಳನ್ನು ವಿತರಿಸಿದರು.
International Democracy Day ಶಿಕ್ಷಣ ನಿಕಾಯದ ಡೀನರು, ಶಿಕ್ಷಣ ವಿಭಾಗದ ಮುಖ್ಯಸ್ಥರು ಅದ ಪ್ರೊ. ಜಗನ್ನಾಥ್ ಕೆ. ಡಾಂಗೆ, ಅವರು ಉಪಸ್ಥಿತರಿದ್ದರು. ಡಾ. ಬಿ.ಅರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ‘ಪ್ರಜಾಪ್ರಭುತ್ವ’ ವ್ಯವಸ್ಥೆ ಬೆಳೆದು ಬಂದ ಬಗೆಯನ್ನು ಪರಿಚಯಿಸಿ, ವಂದಿಸಿದರು. ಪಾಂಡುರವರು ಪ್ರಾರ್ಥಿಸಿದರು. ಸಂದೀಪ್ ಸ್ವಾಗತಿಸಿದರು. ಸಂಪತ್‌ಕುಮಾರ್ ಎಂ. ನಿರೂಪಿಸಿದರು. ಡಾ. ಗೋವಿಂದರಾಜ್, ಡಾ. ಎಂ. ರವಿಕುಮಾರ್, ಡಾ. ಎನ್.ಬಿ. ತಿಪ್ಪೇಸ್ವಾಮಿ, ಡಾ. ಅಶೋಕ್ ಲಮಾಣಿ, ಮೊದಲಾದ ಅಧ್ಯಾಪಕರು, ಅಧ್ಯಾಪಕೇತರ ನೌಕರರು, ಸಂಶೋಧಕರು, ವಿದ್ಯಾರ್ಥಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...