Wednesday, November 27, 2024
Wednesday, November 27, 2024

Sagara Police ಮದುವೆಗೆ ಸಂಬಂಧಿಸಿದ ನೆಪದಿಂದ ಮನೆಯ ಪರಿಸರದಲ್ಲಿ ಗಾಂಜಾ ಎಸೆದ ಆರೋಪಿಯ ದಸ್ತಗಿರಿ

Date:

Sagara Police ಮನೆಯ ಕಾಂಪೌಂಡ್ ಒಳಗೆ ಗಾಂಜಾ ಎಸೆದು KPTCL ಇಂಜಿನಿಯರ್ ಪೊಲೀಸರ ಅತಿಥಿಯಾಗಿರುವ ಘಟನೆ ಸಾಗರದಲ್ಲಿ ನಡೆದಿದೆ.

ಶಾಂತಕುಮಾರಸ್ವಾಮಿ ಬಂಧಿತ ಇಂಜಿನಿಯರ್. ಸಾಗರದ ಹುಲ್ಲತ್ತಿಯ ಸಿವಿಲ್ ಇಂಜಿನಿಯರ್ ಜಿತೇಂದ್ರ ಎಂಬುವರ ಮನೆಯ ಕಾಂಪೌಂಡ್ ಒಳಗೆ ಜುಲೈ 13 ರಂದು ವ್ಯಕ್ತಿಯೊಬ್ಬ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ನಲ್ಲಿ ಏನೋ ಎಸೆದು ಹೋಗಿದ್ದರು. ಇದನ್ನು ಗಮನಿಸಿದ ಜಿತೇಂದ್ರ ಕವರ್ನಲ್ಲಿ ಗಾಂಜಾ ಪ್ಯಾಕೆಟ್ ಇರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದರು.

ಬಳಿಕ ಮನೆಯ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಓರ್ವ ಕಾಂಪೌಂಡ್ ಬಳಿ ಬಂದು ಕವರ್ ಎಸೆದು ಹೋಗಿರುವುದು ಕಂಡುಬಂದಿತ್ತು. ಈ ಕುರಿತು ಜಿತೇಂದ್ರ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.

ನಂತರ ಪೊಲೀಸರು ತನಿಖೆ ನಡೆಸಿದಾಗ ಕಪ್ಪು ಕವರ್ ಎಸೆದ ಆರೋಪಿಯ ಪತ್ತೆ ಆಗುತ್ತದೆ. ಈತನನ್ನು ವಿಚಾರಣೆ ನಡೆಸಿದಾಗ ಶಾಂತಕುಮಾರ್ ಎಂಬುವರು ನನಗೆ ಗಾಂಜಾ ಪ್ಯಾಕೆಟ್ ಇರುವ ಕವರ್ ಕೊಟ್ಟು ಜಿತೇಂದ್ರ ಅವರ ಮನೆ ಬಳಿ ಎಸೆದು ಬಾ ಎಂದು ತಿಳಿಸಿದ್ದರು ಎಂದು ಬಾಯ್ಬಿಟ್ಟಿದ್ದಾರೆ.

ಬಳಿಕ ಶಾಂತಕುಮಾರ್ನನ್ನು ವಿಚಾರಣೆ ನಡೆಸಿದಾಗ ಈ ಹಿಂದೆ ಜಿತೇಂದ್ರ ಅವರ ಮಾವನ ಮಗಳು ಮತ್ತು ತನ್ನ(ಶಾಂತಕುಮಾರ್) ಮದುವೆ ವಿಚಾರದಲ್ಲಿ ಹೊಂದಾಣಿಕೆ ಆಗದೇ ಮದುವೆ ಮುರಿದುಬಿದ್ದಿತ್ತು.

Sagara Police ಇದಕ್ಕೆ ಜಿತೇಂದ್ರ ಕಾರಣ ಎಂದು ತಿಳಿದು ಆತನ ಮೇಲೆ ದ್ವೇಷದಿಂದ ಗಾಂಜಾ ಕೇಸನ್ನು ಹಾಕುವ ಉದ್ದೇಶದಿಂದ ಸಾನಾವುಲ್ಲಾ ಎಂಬ ವ್ಯಕ್ತಿಯನ್ನು ಜಿತೇಂದ್ರ ಮನೆ ಕಾಂಪೌಂಡ್ ಒಳಗೆ ಗಾಂಜಾ ಪ್ಯಾಕೆಟ್ಗಳನ್ನು ಎಸೆಯಲು ಹೇಳಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೀಗಾಗಿ ಸಾಗರ ಗ್ರಾಮಾಂತರ ಪೊಲೀಸರು KPTCL ಇಂಜಿನಿಯರ್ ಶಾಂತಕುಮಾರಸ್ವಾಮಿ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಫಿಕ್ ಸಬ್ ಸೆಕ್ಷನ್ 1985ರ (U/s-20(b) (ii) A, 8(c) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾಂತಕುಮಾರಸ್ವಾಮಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ತನಿಖೆಯಲ್ಲಿ ಎ1 ಆರೋಪಿ ಸಾನಾವುಲ್ಲಾ ಹಾಗೂ ಎ2 ಆರೋಪಿ ಶಾಂತಕುಮಾರಸ್ವಾಮಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Constitution Day ಸಂವಿಧಾನ ಪೀಠಿಕೆಯನ್ನು ಪ್ರತಿಷ್ಠಾಪಿಸುವ ಕೆಲಸವನ್ನ ರಾಜ್ಯ ಸರ್ಕಾರ ಮಾಡುತ್ತಿದೆ- ಮಧು ಬಂಗಾರಪ್ಪ

Constitution Day ಭಾರತೀಯರೆಲ್ಲರೂ ಒಂದೇ ಎಂಬ ಐಕ್ಯತೆ, ಸಮಗ್ರತೆ, ಭಾವೈಕ್ಯತೆ...

K.H. Muniyappa ನ.28ರೊಳಗೆ ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ವಿತರಿಸಲು ಅಧಿಕಾರಿಗಳಿಗೆ ಸೂಚನೆ- ಸಚಿವ ಕೆ ಎಚ್. ಮುನಿಯಪ್ಪ

K.H. Muniyappa ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಗಳ ಆದೇಶದಂತೆ...