Wednesday, November 27, 2024
Wednesday, November 27, 2024

Klive Special Article ಎತ್ತರೆತ್ತರೆತ್ತರಕ್ಕೆ ಹಾರಲೆಮ್ಮ ಬಾವುಟ

Date:

Klive Special Article ಒಂದು ದೇಶಕ್ಕೆ ಅದರ ಇತಿಹಾಸ, ಸಂಪನ್ಮೂಲಗಳು, ಜನಸಂಖ್ಯೆ, ಸರ್ಕಾರ, ಸೈನ್ಯಗಳು ಎಷ್ಟು ಮುಖ್ಯವೂ, ಅದೇ ರೀತಿಯಲ್ಲಿ ರಾಷ್ಟ್ರದ ಗುರು ರಾಷ್ಟ್ರ ಧ್ವಜವು ಅಷ್ಟೇ ಪ್ರಮುಖವಾಗಿರುತ್ತದೆ.

ಜನರಲ್ಲಿ ದೇಶಾಭಿಮಾನ ಸೃಷ್ಠಿಸುವುದು, ಐತಿಹಾಸಿಕ ಸ್ಮರಣಾರ್ಥವಾಗಿ, ಏಕತೆ ಮತ್ತು ಗುರುತಿನ ಸಂಕೇತಕ್ಕೆ, ಶೈಕ್ಷಣಿಕ ಮೌಲ್ಯ, ದೇಶ ಭಕ್ತಿಯ ಹಾಗೂ ನಾವೆಲ್ಲರು ಒಂದೇ ಎಂಬ ಭಾವನೆ ಮೂಡಿಸುವುದಕ್ಕೆ ರಾಷ್ಡ್ರ ಧ್ವಜವು ಸಂಕೇತವಾಗಿರುತ್ತದೆ.
ಜುಲೈ22 ರಾಷ್ಟ್ರೀಯ ಧ್ವಜ ದಿನ.

ಭಾರತೀಯರ ಇತಿಹಾಸದಲ್ಲಿ ಪಾಶ್ಚಿಮಾತ್ಯ ದೇಶಗಳಿಂದ ಸ್ವಾತಂತ್ರ್ಯ ಪಡೆಯಲು ಅನೇಕ ವಿಷಯಗಳು ಪ್ರೇರಣೆಯನ್ನು ನೀಡಿದ್ದು ಅದರಲ್ಲಿ ರಾಷ್ಟ್ರೀಯ ಧ್ವಜ ಎಂಬ ಪರಿಕಲ್ಪನೆಯು ಪ್ರಮುಖ ಪಾತ್ರ ವಹಿಸಿದೆ. ಆದ್ದರಿಂದ 1947 ರಂದು ನಡೆದ ಸಂವಿಧಾನ ಸಭೆಯಲ್ಲಿ ತ್ರಿವರ್ಣ ಧ್ವಜವನ್ನು ಪರಿಚಯಸಲಾಗುತ್ತದೆ.

ಈ ಕಾರಣದಿಂದ ದೇಶದ ಧಜವನ್ನು ಗೌರವಿಸುವ ಉದ್ಧೇಶದಿಂದ ಜುಲೈ 22 ರಂದು ರಾಷ್ಟ್ರೀಯ ಧ್ವಜ ದಿನವಾಗಿ ಆಚರಣೆಯನ್ನು ಮಾಡಲಾಗುತ್ತದೆ.

ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತೀಯ ಗೀತೆಗಳು, ಘೋಷಣೆಗಳು, ಧ್ಯೇಯವಾಕ್ಯಗಳು, ಜೊತೆಗೆ ಹಲವಾರು ಮಾದರಿಗಳ ಜೊತೆಗೆ ದೇಶದಲ್ಲಿ ಬಾವುಟಗಳ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಮಾಡುತ್ತಾ ಬಂದಿದ್ದಾರೆ.

ನಮ್ಮ ರಾಷ್ಡ್ರ ಧ್ವಜವು ಬೆಳೆದು ಬಂದ ಹಾದಿಯನ್ನು ನೋಡುವುದಾದರೆ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ಭಾರತೀಯರಾದ ನಾವೆಲ್ಲ ಒಂದು ಎಂಬ ಭಾವನೆ ಮೂಡಿಸುತ್ತದೆ, ಅಲ್ಲಿಂದ ಭಾರತೀಯ ಧ್ವಜದ ಕಲ್ಪನೆ ರೂಪುಗೊಳ್ಳುತ್ತದೆ.

ನಂತರದ ದಿನಗಳಲ್ಲಿ 1907 ರ ಆಗಸ್ಟ್ 22 ರಂದು ಜರ್ಮನಿಯ ಸ್ಟನ್‍ಗಾರ್ಡ್‍ನಲ್ಲಿ ನಡೆದ ಅಂತರ್‍ರಾಷ್ಟ್ರೀಯ ಸಮಾಜವಾದಿ ಸಮ್ಮೇಳನದಲ್ಲಿ ಭಿಕಾಜಿ ಕಾಮಾ ಅವರು ಗಮನ ಸೆಳೆಯಲು ಹೊಸ ಧ್ವಜವನ್ನು ಹಾರಿಸಿದರು. ಆದರೆ ಅದು ವಿಫಲವಾಯಿತು. 1916 ರಲ್ಲಿ ಪಿಂಗಲಿ ವೆಂಕಯ್ಯ ಅವರು ಮೂವತ್ತು ಹೊಸ ವಿನ್ಯಾಸಗಳನ್ನು ಮದ್ರಾಸ್ ಹೈ ಕೋರ್ಟಿಗೆ ಸಲ್ಲಿಸಿದರು.

Klive Special Article ಅದೇ ವರ್ಷ ಆನಿ ಬೆಸೆಂಟ್ ಮತ್ತು ಬಾಲಗಂಗಾಧರ ತಿಲಕ್ ಅವರು ಹೋಮ್ ರೂಲ್ ಚಳುವಳಿಯ ಭಾಗವಾಗಿ ಹೊಸ ಧ್ವಜವನ್ನು ಅಳವಡಿಸಿಕೊಂಡರು. ಏಪ್ರಿಲ್ 1921 ರಲ್ಲಿ ಮಹಾತ್ಮ ಗಾಂಧಿಯವರು ತಮ್ಮ ಜರ್ನಲ್ ಇಂಡಿಯಾದಲ್ಲಿ ಭಾರತೀಯ ಧ್ವಜದ ಅಗತ್ಯತೆಯ ಬಗ್ಗೆ ಬರೆದರು.

ಗಾಂಧಿಜಿಯವರು ಪಿಂಗಳಿ ವೆಂಕಯ್ಯ ಅವರಿಗೆ ಕೆಂಪು ಮತ್ತು ಹಸಿರು ಬಣ್ಣದಲ್ಲಿ ನೂಲುವ ಚಕ್ರ ಹೊಂದಿದ ಧ್ವಜವನ್ನು ಪ್ರಸ್ತಾಪಿಸಿದರು. ಆದರೆ ಕಾಂಗ್ರೆಸ್ ಅಧಿವೇಶನದಲ್ಲಿ ಬೇರೆ ಬಣ್ಣದ ಧ್ವಜದ ಪ್ರಸ್ತಾಪವಾದ ಕಾರಣ ಗಾಂಧಿಯವರ ಧ್ವಜ ಜಾರಿಗೆ ಬರಲಿಲ್ಲ. 1923 ರ ಏಪ್ರಿಲ್ 13 ರಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಮರಣಾರ್ಥವಾಗಿ ನಾಗ್ಪುರದ ಸ್ಥಳೀಯ ಕಾಂಗ್ರೆಸ್ ಸ್ವಯಂ ಸೇವಕರುಗಳು ನಡೆಸಿದ ಮೆರವಣಿಗೆಯಲ್ಲಿ, ಪಿಂಗಳಿ ವೆಂಕಯ್ಯ ವಿನ್ಯಾಸಗೊಳಿಸಿದ ನೂಲುವ ಚಕ್ರದ ಸ್ವರಾಜ್ ಧ್ವಜವನ್ನು ಹಾರಿಸಲಾಯಿತು. ಈ ಘಟನೆ ಅಂದು ಪೊಲೀಸರ ಮತ್ತು ಕಾಂಗ್ರೆಸಿಗರ ಘರ್ಷಣೆಗೆ ಕಾರಣವಾಯಿತು.

1923ರಲ್ಲಿ ಸಾರ್ವಜನಿಕ ಮೆರವಣಿಗೆಗಳು ಮತ್ತು ಸಾಮಾನ್ಯ ಜನರ ಪ್ರದರ್ಶನದ ಕಲ್ಪನೆಯೊಂದಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಧ್ವಜ ಚಳುವಳಿಯನ್ನು ಪ್ರಾರಂಭಿಸಿದರು. 1931ರ ಸಭೆಯಲ್ಲಿ ಸ್ವರಾಜ್ ಧ್ವಜವು ಅಧಿಕೃತ ಧ್ವಜವಾಯಿತು. ಆ ವೇಳೆಗಾಗಲೇ ಧ್ವಜವು ಸ್ವಾತಂತ್ರ್ಯ ಚಳುವಳಿಯ ಸಂಕೇತವಾಯಿತು.

ಅಂತಿಮವಾಗಿ ಭಾರತ ದೇಶ ಸ್ವಾತಂತ್ರ್ಯ ಪಡೆಯುವ ಕೆಲವು ದಿನಗಳ ಮೊದಲು ಅಂದರೆ 1947 ರ 22 ಜುಲೈ ರಂದು ನಡೆದ ಸಂವಿಧಾನ ಸಭೆಯಲ್ಲಿ ಆಳವಾದ ಕೇಸರಿ, ಬಿಳಿ ಮತ್ತು ಗಾಢ ಹಸಿರು ಸಮ ಪ್ರಮಾಣದ ತ್ರಿವರ್ಣ ಹಾಗೂ ಬಳಿ ಬಣ್ಣದ ಮಧ್ಯದಲ್ಲಿ ನೀಲಿ ಅಶೋಕ ಚಕ್ರವನ್ನು ಹೊಂದಿದ ಧ್ವಜವನ್ನು ಪ್ರಸ್ತಾಪಿಸಿದರು. ಈ ಧ್ವಜವು 1947 ರ ಆಗಸ್ಟ್ 15 ರಂದು ಭಾರತೀಯ ರಾಷ್ಟ್ರೀಯ ಧ್ವಜವಾಗಿ ಹಾರಿಸಲಾಯಿತು.

ರಾಷ್ಟ್ರಧ್ವಜವನ್ನು ಗೌರವಿಸುವುದರಿಂದ ನಾಗರಿಕರಲ್ಲಿ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಮನೋಭಾವ ಹೆಚ್ಚುತ್ತದೆ. ನಮ್ಮ ಧ್ವಜದ ಇತಿಹಾಸ, ಮಹತ್ವ ಮತ್ತು ಸಾಂಕೇತಿಕತೆಯ ಬಗ್ಗೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಬೇಕು.

ರಾಷ್ಟ್ರ ಧ್ವಜವು ಪ್ರತಿನಿಧಿಸುವ ಸ್ವಾತಂತ್ರ್ಯ, ಸಾರ್ವಭೌಮತ್ವ. ದೇಶಭಕ್ತಿ ಮತ್ತು ಗೌರವ ಭಾವವನ್ನು ಹುಟ್ಟು ಹಾಕಲು ಕಾರಣರಾದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಾಯಕರುಗಳು ಮಾಡಿದ ತ್ಯಾಗಗಳನ್ನು ಪ್ರತಿಬಿಂಬಿಸುವ ಸಲುವಾಗಿ. ರಾಷ್ಟ್ರ ಧ್ವಜ ಪ್ರತಿನಿಧಿಸುವ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಮೌಲ್ಯಗಳನ್ನು ಮುಂದಿನ ಪೀಳೀಗೆಗಳಿಗೆ ಪ್ರೇರೆಪಿಸಲು ಹೀಗೆ ಅನೇಕ ಉದ್ಧೇಶದ ಕಾರಣಕ್ಕೆ ಆಚರಣೆ ಮಾಡುವುದು ಅಗತ್ಯವಾಗಿದೆ.

ಸಾರ್ವಜನಿಕರು ತಮ್ಮ ದೇಶಕ್ಕಾಗಿ ಎಷ್ಟು ಗೌರವ ಮತ್ತು ಭಕ್ತಿಯನ್ನು ಹೊಂದಿದ್ದಾರೋ ಅಷ್ಟೇ ಪ್ರಮಾಣದಲ್ಲಿ ರಾಷ್ಟ್ರೀಯ ಧ್ವಜಕ್ಕೂ ಗೌರವನ್ನು ನಿಡಬೇಕು. ಧ್ವಜಕ್ಕೆ ಅಗೌರವನ್ನು ಎಂದಿಗೂ ತೊರಿಸದೆ ಇತತರಿಗೆ ಮಾದರಿಯಾಗಿ ಇರಬೇಕು. ಬೇರೆಯಾದರು ಧ್ವಜಕ್ಕೆ ಚ್ಯುತಿ ಬರುವಂತಹ ಕೆಲಸ ಮಾಡಿದರೆ ಅವರಿಗೆ ಅರಿವು ಮೂಡಿಸೋಣ, ಎಲ್ಲರೂ ರಾಷ್ಟ್ರ ಧ್ವಜವನ್ನು ಗೌರವಿಸೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Constitution Day ಸಂವಿಧಾನದ ಸಂದೇಶವೇ ನಮ್ಮ ಸರ್ಕಾರದ ಸಿದ್ಧಾಂತ- ಸಿದ್ಧರಾಮಯ್ಯ

Constitution Day ಸಂವಿಧಾನ ದಿನಾಚರಣೆಯ ವಿಶೇಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು...

Shivamogga-Bhadravathi Urban Development Authority ಊರುಗಡೂರು ನಿವೇಶನ ಹಂಚಿಕೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಡಿ.5 ಅಂತಿಮ ದಿನಾಂಕ

Shivamogga-Bhadravathi Urban Development Authority ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ...

Shivamogga City Corporation ಒಂದು ತಿಂಗಳಲ್ಲಿ ಏಕರೀತಿಯ ಕರವಸೂಲಾತಿ ಹೊಸ ಕಾಯ್ದೆ ಜಾರಿ- ಸಚಿವ ರಹೀಂ ಖಾನ್

Shivamogga City Corporation ಸ್ಥಳೀಯ ಸಂಸ್ಥೆಗಳಿಗೆ ನಿಯಮಾನುಸಾರವಾಗಿ ಸಾರ್ವಜನಿಕರಿಂದ ಪಾವತಿಯಾಗಬೇಕಾದ ಕರವಸೂಲಿ...