B.Y.Raghavendra ಶಿಕಾರಿಪುರ ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿದೆ ಆದರೆ ತಾಲೂಕಿನಲ್ಲಿ ಕಾಂಗ್ರೆಸ್ಗೆ ಹೆಚ್ಚು ಮತ ಬಂದಿದೆ ಅದಕ್ಕೆ ಪಕ್ಷದ ಕಾರ್ಯಕರ್ತರು ಪರಾಮರ್ಶೆ ಮಾಡಿಕೊಂಡು ಮುಂದೆ ಈ ತಪ್ಪು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿಕಾರಿಪುರ ಪಟ್ಟಣದಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ತಾಲೂಕಿನಲ್ಲಿಯೇ ಹೆಚ್ಚು ಮತ ಬಂದಿದ್ದರೆ, ಬಿಜೆಪಿಗೆ ಕಡಿಮೆ ಲೀಡ್ ಬಂದಿದೆ. ಆದರೂ ೧೯೮೩ರಿಂದ ೨೦೨೪ರವರೆಗೆ ಜಿಲ್ಲೆ, ತಾಲೂಕಿನಲ್ಲಿ ನಡೆದಿರುವ ೧೧ವಿಧಾನಸಭೆ, ೬ಲೋಕಸಭೆ ಚುನಾವಣೆಯಲ್ಲಿ ತಾಲೂಕಿನಲ್ಲಿ ಈ ಬಾರಿ ಬಿಜೆಪಿಗೆ ಅತಿಹೆಚ್ಚು ೮೭೧೫೩ ಮತ ಬಂದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ೮೫ಸಾವಿರ, ವಿಧಾನಸಭೆ ಚುನಾವಣೆಯಲ್ಲಿ ೮೧ಸಾವಿರ ಮತ ಬಂದಿತ್ತು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಾಲೂಕಿನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಮತ ಪಡೆಯಬೇಕು ಎನ್ನುವ ಆಸೆ ಈಡೇರಿಲ್ಲ ಎಂದರು.
ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಕಾರ್ಯಕರ್ತರ ಹಿತಕ್ಕೆ, ಅಭಿವೃದ್ಧಿಗೆ ಗಮನ ನೀಡಿದ್ದೇವೆ. ಭ್ರಷ್ಟಾಚಾರ ಮಾಡಿದ್ದಕ್ಕಾಗಿ ಬಿಜೆಪಿ ಮನೆಗೆ ಹೋಗಿದೆ ಎನ್ನುವ ಅವರ ಹೇಳಿಕೆ ಹಾಸ್ಯಾಸ್ಪದ. ೧೮೦ಕೋಟಿ ರೂ. ತೆಲಂಗಾಣಕ್ಕೆ ಸಾಗಿಸಿದ್ದು ಅವರದೆ ಪಕ್ಷ ಎನ್ನುವುದು ಅವರು ಮರೆತಿದ್ದಾರೆ.
B.Y.Raghavendra ಏಳು ತಾಲೂಕಿಗೆ ಮಂಜೂರಾಗಿದ್ದ ಜಿಲ್ಲಾಸ್ಪತ್ರೆ ಕಿತ್ತುಕೊಂಡಿದ್ದು ಮಧು ಬಂಗಾರಪ್ಪ, ಪಕ್ಷದ ಕಾರ್ಯಕರ್ತರಿಗೆ ಚೇಲಾಗಳು ಎಂದು ಕರೆದಿದ್ದು ಅವರೆ ಆದರೂ ಅವರಿಗೆ ತಾಲೂಕಿನಲ್ಲಿ ಜಿಲ್ಲೆಯಲ್ಲೆ ಹೆಚ್ಚು ಮತ ಸಿಕ್ಕಿದೆ ಎನ್ನುವುದು ಮರೆಯಬಾರದು ಎಂದು ಹೇಳಿದರು.
ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅರ್ಧದಷ್ಟು ಸೀಟು ಗೆಲ್ಲುವುದಕ್ಕೆ ಆಗದ ಕಾಂಗ್ರೆಸ್ಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.