Dr. H.B.Manjunath ಚಂಚಲ ಮನಸ್ಸು ಸತ್ಯವನ್ನು ಗ್ರಹಿಸಲು ಸಾಧ್ಯವಿಲ್ಲ, ಸತ್ಯವನ್ನು ಗ್ರಹಿಸದೇ ಪರಮಾತ್ಮವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಚಿತ್ತದ ಏಕಾಗ್ರತೆಯೇ ಇದಕ್ಕೆ ಪರಿಹಾರ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಹೇಳಿದರು.
ಅವರು ಸಾಲಿಗ್ರಾಮ ಕೂಟ ಮಹಾ ಜಗತ್ತಿನ ದಾವಣಗೆರೆ ಅಂಗ ಸಂಸ್ಥೆ ವತಿಯಿಂದ ನಗರದ ಶ್ರೀ ಕೃಷ್ಣ ಕಲಾಮಂದಿರದಲ್ಲಿ ಏರ್ಪಾಡಾಗಿದ್ದ ಶ್ರೀ ನರಸಿಂಹ ಜಯಂತಿ ಕಾರ್ಯಕ್ರಮದ ಆಧ್ಯಾತ್ಮಿಕ ಉಪನ್ಯಾಸ ನೀಡುತ್ತಾ ಶಾಸ್ತ್ರಾಧ್ಯಯನ ವಾಗಲಿ, ಭಕ್ತಿ ಸಮರ್ಪಣೆಯೇ ಆಗಲಿ, ಭಗವದ್ ಸಾಕ್ಷಾತ್ಕಾರಕ್ಕಾಗಲಿ, ಸತ್ಯಾನ್ವೇಷಣೆಗಾಗಲಿ ಚಿತ್ತ ಏಕಾಗ್ರತೆ ಅವಶ್ಯ, ಇದು ಉಂಟಾದಾಗ ಯಾವುದೂ ನಮಗೆ ಕಷ್ಟ ಮತ್ತು ದುಸ್ತರ ಎನಿಸುವುದಿಲ್ಲ, ಅಧ್ಯಯನವೇ ಆಗಲಿ, ಧ್ಯಾನವೇ ಆಗಲಿ, ಆರಾಧನೆಯೇ ಆಗಲಿ, ಭಜನೆ, ಶ್ರವಣವೇ ಆಗಲಿ ಏಕಾಗ್ರತೆಯಿಂದ ಮಾತ್ರ ಮನನ ಸಾಧ್ಯ ಎಂಬುದನ್ನು ಸ್ವಾರಸ್ಯಕರ ಉದಾಹರಣೆಗಳ ಸಹಿತ ವಿವರಿಸಿದರು.
Dr. H.B.Manjunath ಕೂಟ ಮಹಾ ಜಗತ್ತು ದಾವಣಗೆರೆ ಅಂಗಸಂಸ್ಥೆಯ ನೂತನ ಅಧ್ಯಕ್ಷರಾದ ಮೋತಿ ಎನ್ ರಾಘವೇಂದ್ರ,ಪದಾಧಿಕಾರಿಗಳಾದ ಕೆ ಶಿವರಾಮ ಕಾರಂತ, ಬಾಲಕೃಷ್ಣ ವೈದ್ಯ, ಸುಬ್ರಹ್ಮಣ್ಯ ಹೊಳ್ಳ, ಶ್ರೀನಿವಾಸ ಕಾರಂತ, ಮೋತಿ ಪಿ ಪರಮೇಶ್ವರ್ ರಾವ್, ಕೇಶವಮೂರ್ತಿ ಕಾರಂತ, ಮೋತಿ ಆರ್ ಸುಬ್ರಮಣ್ಯ ಗುರು ಪ್ರಸಾದ್ ಮುಂತಾದವರು ಭಾಗವಹಿಸಿದ್ದು ರೋಹಿಣಿ ಹೊಳ್ಳ ಮತ್ತು ಸಂಗಡಿಗರು ಭಜನೆ ನೆರವೇರಿಸಿದರೆ ಹರೀಶ್ ಹೊಳ್ಳ ಮುಂತಾದವರು ಪೂಜೆಯನ್ನೂ, ಹರೀಶ್ ಐತಾಳ್ ತಂಡದವರು ಚೆಂಡೆ ಸೇವೆಯನ್ನೂ ನೆರವೇರಿಸಿದರು.