Kannada Sahitya Parishath ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಮೇ 5 ರಂದು ಕಸಾಪ 109 ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಹ್ಯಾದ್ರಿ ವಿಜ್ಞಾನ ಕಾಲೇಜು ಪ್ರಿನ್ಸಿಪಾಲರಾದ ಪ್ರೊ. ಎನ್. ರಾಜೇಶ್ವರಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತು ನಡೆದುಬಂದ ದಾರಿ, ಮುಂದಿರುವ ಸವಾಲುಗಳು. ಕನ್ನಡದ ಮನಸ್ಥಿತಿ ಕುರಿತು ಮಾತನಾಡಿದರು. ಗಾಯಕಿಯರಾದ ಲಕ್ಷ್ಮೀ ಮಹೇಶ್, ನಳಿನಾಕ್ಷಿ, ದೀಪ್ತಿ ಶಿವಕುಮಾರ್, ಸುಶೀಲಾ ಷಣ್ಮುಗಂ ಕನ್ನಡ ಗೀತೆಗಳನ್ನು ಹಾಡಿದರು. ಮತದಾನ ಜಾಗೃತಿ ಕುರಿತು ಕವಿಗಳಾದ ಡಾ. ಕೆ. ಎನ್. ಗುರುದತ್ತ, ಬಿ. ಟಿ. ಅಂಬಿಕಾ, ಡಿ. ಗಣೇಶ್ ಕವನ ವಾಚಿಸಿದರು.
Kannada Sahitya Parishath ಕಸಾಪ ಹಿರಿಯ ಸದಸ್ಯರಾದ ಸೊಪ್ಪುಗುಡ್ಡೆ ಲೋಕಯ್ಯ, ನಿವೃತ್ತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಿ. ಎಂ. ಚಂದ್ರಶೇಖರ, ಆರ್. ಹನುಮಂತಪ್ಪ, ನಳಿನಾಕ್ಷಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರಿಗೆ ಷಾಲು, ಹಾರ, ಹಣ್ಣು ಸಮರ್ಪಿಸಲಾಯಿತು. ಕೋಲಿಂ ಎಂಬ ಕೌತುಕ ಕೃತಿ ಅತಿಥಿಗಳು, ಗಾಯಕರು, ಕವಿಗಳಿಗೆ ವಿತರಿಸಲಾಯಿತು.
ಸನ್ಮಾನಿತರ ಪರವಾಗಿ ಚಂದ್ರಶೇಖರ್ ಮತ್ತು ಲೋಕಯ್ಯ ಅವರು ಮಾತನಾಡಿದರು. ನಾಡಗೀತೆಯನ್ನು ಲಕ್ಷ್ಮೀ ಮಹೇಶ್ ತಂಡ ಹಾಡಿದರು. ಎಂ. ಎಂ. ಸ್ವಾಮಿ ಸ್ವಾಗತಿಸಿದರು. ಕೆ. ಎಸ್. ಮಂಜಪ್ಪ ನಿರೂಪಿಸಿದರು. ಮಹಾದೇವಿ ವಂದಿಸಿದರು. ಕಾರ್ಯಕ್ರಮಕ್ಕೆ ಮೊದಲು ಮಂಡಕ್ಕಿ ಉಸ್ಲಿ, ಬಿಸಿ ಮೆಣಸಿನಕಾಯಿ ಬೋಂಡಾ, ಬಾದಾಮಿ ಹಾಲು ಸೇವಿಸಿ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿದೆವು
Kannada Sahitya Parishath ಕಸಾಪ ಸಂಸ್ಥಾಪನಾ ದಿನ ಆತ್ಮಾವಲೋಕನಾ ಕ್ಷಣವಾಗಲಿ- ಡಿ.ಮಂಜುನಾಥ್
Date: