Santosh Lad ಈ ಬಾರಿಯೂ ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಅವರು ಪ್ರಧಾನಿಯಾದರೆೆ ಅವರು ಸರ್ವಾಧಿಕಾರಿ ಆಗುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಇಷ್ಟು ಬೆಳೆಯಲು ಮಾಧ್ಯಮಗಳು ಕಾರಣ. ೨೦೦೪ ರಿಂದ ೨೦೧೪ ರವರೆಗೆ ಆಡಳಿತದ ಬಗ್ಗೆ ಮತ್ತು ೨೦೧೪ ರಿಂದ ೨೦೨೪ ರವರೆಗೆ ಆಡಳಿತದ ಬಗ್ಗೆ ಚರ್ಚಿಸೋಣ. ತಲಾ ಆದಾಯ ವಿಷಯದಲ್ಲಿ ಬಾಂಗ್ಲಾ ದೇಶಕ್ಕೆ ಹೋಲಿಸಿದರೆ ಭಾರತದ ತಲಾ ಆದಾಯ ಕಡಿಮೆ ಇದೆ. ಈ ಬಗ್ಗೆ ಚರ್ಚಿಸುವುದಿಲ್ಲ. ನಾನು ಸವಾಲು ಹಾಕುತ್ತೇನೆ. ಮಾಧ್ಯಮಗಳಿಗೆ ಬಂದು ಅವರು ಮಾತನಾಡಲಿ. ಬಡತನ ನಿರ್ಮೂಲನೆ ಆಗಿದ್ದರೆ ಮತ ಯಾಕೆ ಕೇಳಬೇಕು, ಒಟ್ಟಾರೆ, ಅವರಿಗೆ ಪ್ರಚಾರ ಬೇಕಿದೆ ಅಷ್ಟೇ ಎಂದರು.
Santosh Lad ಪ್ರಧಾನಿ ಮೋದಿ ಮಾಂಗಲ್ಯ ಸರದ ಬಗ್ಗೆ ಮಾತನಾಡುತ್ತಾರೆ. ಅವರು ಹೇಗೆ ಬೇಕಾದರೂ ಮಾತನಾಡಬಹುದು. ರಾಹುಲ್ ಗಾಂಧಿ ಮಾತನಾಡುವ ಹಾಗಿಲ್ಲವೇ ಎಂದು ಸಚಿವರು ಪ್ರಶ್ನಿಸಿದರಲ್ಲದೆ, ಗೊಂದಲ, ಭಯ ಸೃಷ್ಠಿ ಮಾಡಲು ಬಿಜೆಪಿ ಮುಂದಾಗಿದೆ. ಚುನಾವಣೆ ನಂತರ ಮೋದಿ ಮನೆಗೆ ಹೋಗುತ್ತಾರೆ. ವಿಜೇಂದ್ರ ಅವರಿಗೆ ಈಗಿನ ಬೆಳವಣಿಗೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಸಿದ್ದರಾಮಯ್ಯ ವಿರುದ್ಧ ಮತ್ತು ನನ್ನ ವಿರುದ್ಧ ಕೆಟ್ಟದ್ದಾಗಿ ಮಾತನಾಡುತ್ತಾರೆ ಎಂದರು.
೪೦% ದೇಶದ ಸಂಪತ್ತು ೧% ಜನರ ಕೈಯಲ್ಲಿದೆ. ಇಂದಿರಾಗಾಂಧಿ ಉಳುವವನೇ ಭೂಮಿ ಒಡೆಯ ಕಾನೂನು ತಂದರು. ಬ್ಯಾಂಕ್ ರಾಷ್ಟ್ರೀಕರಣಗೊಳಿಸಲಾಯಿತು. ಆದರೆ ಇವರ ಸಾಧನೆ ಏನು? ಮೋದಿ ಸಾಲದ ಬಗ್ಗೆ ಮಾತನಾಡುವುದಿಲ್ಲ. ೮೦% ಹಿಂದೂ ಇರುವ ನೇಪಾಳಕ್ಕೆ ಹೋಗುವುದಿಲ್ಲ್ಲ ಯಾಕೆ ಎಂದು ಪ್ರಶ್ನಿಸಿದ ಲಾಡ್, ೧೦ ವರ್ಷದ ಆಡಳಿತದಲ್ಲಿ ಹಿಂದೂ ಮುಸ್ಲೀಂ ಮತ್ತು ಶ್ರೀರಾಮ ಮಂದಿರದ ಬಗ್ಗೆ ಯೇ ಮಾತನಾಡಿದ್ದಾಯಿತು.
ಇದನ್ನು ಬಿಟ್ಟರೆ ಬೇರೆಯ ಅಭಿವೃದ್ಧಿಯ ವಿಷಯವಿಲ್ಲ.
ಬಿಲ್ ಗೇಟ್ಸ್ ಗೆ ತಾನೇ ಸಲಹೆ ಕೊಡುವಂತೆ ಮೋದಿ ಮಾತನಾಡುತ್ತಾರೆ. ಇದಕ್ಕಿಂತ ದುರಂತ ಸಂಗತಿ ಇಲ್ಲ ಎಂದರು.