Dr.K.Sudhakar ವಶಪಡಿಸಿಕೊಂಡ ನಗದು ಹಿಂದಿರುಗಿಸಲುಅಭ್ಯರ್ಥಿ ಡಾ.ಕೆ.ಸುಧಾಕರ್ ಕರೆ ಉಲ್ಲೇಖಿಸಿ ಎಫ್ ಐ ಆರ್ ದಾಖಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಫ್‌ಎಸ್‌ಟಿ ಅಧಿಕಾರಿಗಳು 4.8 ಕೋಟಿ ನಗದು ವಶಪಡಿಸಿಕೊಂಡಿದ್ದು, ಈ ಕುರಿತು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇದರ ಬೆನ್ನಲ್ಲಿ ಮಹತ್ವದ ಅಂಶವೊಂದು ಬಯಲಾಗಿದ್ದು, ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿರುವ 4.8 ಕೋಟಿ ರೂಪಾಯಿ ನಗದು ವಾಪಾಸ್ಸು ಮಾಡಲು ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್‌ಗೆ ಮಾಜಿ ಆರೋಗ್ಯ ಸಚಿವ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ ಕರೆ ಮಾಡಿದ್ದರು ಎನ್ನಲಾಗಿದೆ.
ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ ವಿರುದ್ಧ ಮಾದನಾಯಕನಹಳ್ಳಿ ಪೊಲೀಸರು ಏಪ್ರಿಲ್ 25ರಂದು ಎಫ್‌ಐಆರ್ ದಾಖಲಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಗೆ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಯಾಗಿರುವ ಮುನೀಶ್ ಅವರ ಪೋನ್‌ಗೆ ಸುಧಾಕರ್ ಅವರ ದೂರವಾಣಿ ಸಂಖ್ಯೆಯಿಂದ ವಾಟ್ಸಾಪ್ ಕರೆ ಬಂದಿದೆ. ಕರೆಯಲ್ಲಿ ‘ಬಿಟ್ಬಿಡಿ’ ಎಂದು ಸುಧಾಕರ್ ಆಗ್ರಹಿಸಿದ್ದಾರೆ.
Dr.K.Sudhakar ವಶಪಡಿಸಿಕೊಂಡ ನಗದು ಹಿಂದಿರುಗಿಸಲುಅಭ್ಯರ್ಥಿ ಡಾ.ಕೆ.ಸುಧಾಕರ್ ಕರೆ ಉಲ್ಲೇಖಿಸಿ ಎಫ್ ಐ ಆರ್ ದಾಖಲು ಇದಲ್ಲದೆ ವಾಟ್ಸಾಫ್ ಸಂದೇಶವನ್ನು ಕೂಡ ಕಳುಹಿಸಿದ್ದಾರೆ, ಸಂದೇಶದಲ್ಲಿ ನಗದು ವಾಪಾಸ್ಸು ಮಾಡುವಂತೆ ಕೇಳಿಕೊಂಡಿದ್ದಾರೆ.
ಸುಧಾಕರ್ ವಿರುದ್ಧ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಸದಸ್ಯ ದಶರಥ ವಿ ಕುಂಬಾರ್ ಸಲ್ಲಿಸಿರುವ ದೂರಿನಲ್ಲಿ, ಏಪ್ರಿಲ್ 25ರಂದು ಬೆಳಿಗ್ಗೆ 11.45 ರ ಸುಮಾರಿಗೆ ಎಂಸಿಸಿ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ಯಲಹಂಕದ ಮನೆಯೊಂದರಲ್ಲಿ ಸುಮಾರು 10 ಕೋಟಿ ರೂ.ನಗದು ಇರುವ ಬಗ್ಗೆ ಮಾಹಿತಿ ನೀಡಲಾಗಿದೆ.
ಬೆಂಗಳೂರಿನಲ್ಲಿ ಮತದಾರರಿಗೆ ಲಂಚ ನೀಡುವುದಕ್ಕಾಗಿ ಮತ್ತು ಚುನಾವಣೆ ಸಮಯದಲ್ಲಿ ದುರ್ಬಳಕೆಗಾಗಿ ನಗದು ಕೂಡಿಟ್ಟಿರುವ ಬಗ್ಗೆ ಆರೋಪಿಸಿದ್ದರು. ಇದಲ್ಲದೆ ಕರೆ ಮಾಡಿದವರು ನಗದು ಇರುವ ಮನೆಯ ಜಿಪಿಎಸ್ ಲೊಕೇಶನ್ ಕೂಡ ನೀಡಿದ್ದರು.
ಇದರ ಬೆನ್ನಲ್ಲಿ ಮುನೀಶ್ ಮೌದ್ಗಿಲ್ ಅವರು ಮಧ್ಯಾಹ್ನ 1ಗಂಟೆ ಸುಮಾರಿಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರ ನಿರ್ದೇಶನದಂತೆ ನಡೆದ ದಾಳಿಯಲ್ಲಿ ಸುಧಾಕರ್ ಆಪ್ತ ಗುತ್ತಿಗೆದಾರನ ಮನೆಯಿಂದ 4.8 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.