Kimmane Ratnakar ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರದ ಕೊಳಕು ಮನಸ್ಥಿತಿ ಖಂಡನೀಯ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ವಾಷಿಂಗ್ ಮೆಷಿನ್ನಲ್ಲಿ ಭ್ರಷ್ಟರಾದವರು ಒಳ ಹೋಗಿ ಬಂದರೆ ಶುದ್ಧ ವ್ಯಕ್ತಿತ್ವದ ಶ್ರೀರಾಮನಂತಾಗುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದ ೨೬ ಮಂದಿ ಸಂಸದರು ಕನ್ನಡ, ಇಂಗ್ಲಿಷ್, ಹಿಂದಿ ಕಲಿತಿಲ್ಲವೇ? ರಾಜ್ಯಕ್ಕೆ ಈ ಮಹಾನುಭಾವರು ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದರು.
ದೇಶ ಎಂದರೆ ಮಣ್ಣು, ಬಾವುಟ, ಧರ್ಮ ಅಂದುಕೊಂಡಿರುವ ಬಿಜೆಪಿಯವರಿಗೆ ಮನುಷ್ಯ ಪ್ರೇಮವಿಲ್ಲ. ಈ ದೇಶದಲ್ಲಿ ಪತ್ರಿಕಾಗೋಷ್ಟಿ ನಡೆಸದ ಮೊದಲ ಪ್ರಧಾನಿ ಎಂದರೆ ನರೇಂದ್ರ ಮೋದಿ. ಇವರ ಪಕ್ಷಕ್ಕೆ ಸೇರಿದವರು ಶ್ರೀ ರಾಮನಂತವರು. ಸೇರದಿದ್ದರೆ ರಾವಣನಂತವರು ಎಂದು ವ್ಯಂಗ್ಯವಾಡಿದರು.
ಸಮಸ್ಯೆಗೆ ಬಾರದ,ಕಷ್ಟಕ್ಕಾಗದ ವಿಶ್ವಗುರು ದೇಶ ಪ್ರೇಮದ ಭಾಷಣ ಮಾಡುತ್ತಾರೆ. ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ವಿತರಣೆ ಮಾಡಿ ಹಣ ಸಂಗ್ರಹಿಸುವ ಕಾನೂನು ತಂದು ಕಾನೂನಿನಲ್ಲಿ ಹೆಸರನ್ನು ಬಹಿರಂಗಗೊಳಿಸದಂತೆ ನಿಯಮ ರೂಪಿಸಿ, ಆಡಳಿತ ಬಿಜೆಪಿ ಪಕ್ಷಕ್ಕೆ ಹೆಚ್ಚು ಹಣ ಸಂಗ್ರಹ ಆಗುವಂತೆ ಮಾಡಿಕೊಂಡರು.
Kimmane Ratnakar ಎಲೆಕ್ಟ್ರೋಲ್ ಬಾಂಡ್ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ಈ ದೇಶದ ಮಹಾಜನತೆ ಅಭಿನಂದಿಸಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆರ್.ಎಂ.ಮಂಜುನಾಥ್ ಗೌಡ, ಉಸ್ತುವಾರಿ ರಮೇಶ್ ಶೆಟ್ಟಿ ಶಂಕರಘಟ್ಟ,ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಕೆಸ್ತೂರ್ ಮಂಜುನಾಥ್, ಮುಡುಬ ರಾಘವೇಂದ್ರ, ಜಿ.ಎಸ್.ನಾರಾಯಣ್ ರಾವ್,ಹಾರೋಗುಳಿಗೆ ಪಧ್ಮನಾಭ್,ಪ.ಪಂ.ಅಧ್ಯಕ್ಷೆ ಗೀತಾ ರಮೇಶ್,ಸುಷ್ಮ ಸಂಜಯ್,ಸುಮ ಸುಬ್ರಹ್ಮಣ್ಯ, ಅಮರನಾಥ ಶೆಟ್ಟಿ,ಆದರ್ಶ ಹುಂಚದ ಕಟ್ಟೆ,ವಿಲಿಯಂ ಮಾರ್ಟಿಸ್ ಮುಂತಾದವರಿದ್ದರು.