Youth Hostels Association of India ಪ್ರಕೃತಿಯೊಂದಿಗೆ ಬೆರೆತು ನಡೆದಾಡುವ ಚಾರಣ ಬದುಕಿನಲ್ಲಿ ವಿಶೇಷ ಅನುಭವ ನೀಡುತ್ತದೆ. ಮಳೆ, ನದಿ, ತೊರೆ, ಕಾಡುಗಳಲ್ಲಿ ನಡೆಸುವ ಚಾರಣಗಳಲ್ಲಿ ಭಾಗವಹಿಸಬೇಕು ಎಂದು ಯೂತ್ ಹಾಸ್ಟೆಲ್ ತರುಣೋದಯ ಘಟಕ ಕಾರ್ಯದರ್ಶಿ ಸುರೇಶಕುಮಾರ್ ಹೇಳಿದರು.
ಯೂತ್ ಹಾಸ್ಟೆಲ್ ತರುಣೋದಯ ಘಟಕದ ವತಿಯಿಂದ ಆಯೋಜಿಸಿದ್ದ ದಿಡುಪೆ ಕಾರಿಂಜೇಶ್ವರ ಚಾರಣ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿ, ಚಾರಣದಲ್ಲಿ ಭಾಗವಹಿಸುವುದರಿಂದ ಮನೋಲ್ಲಾಸ ಲಭಿಸುತ್ತದೆ ಎಂದು ತಿಳಿಸಿದರು.
ಜೀವನವೇ ಒಂದು ಜಂಜಾಟ, ಅದರಿಂದ ಹೊರ ಬಂದು ಪ್ರಕೃತಿಯಲ್ಲಿ ಬೆರೆತು ಚಾರಣ ಮಾಡಿದಾಗ ಮನಕ್ಕೆ ಉಲ್ಲಾಸ ದೊರಕುತ್ತದೆ. ರಾಜ್ಯದಲ್ಲಿ ಇರುವ ವೈವಿಧ್ಯಮಯ ಪ್ರಾಕೃತಿಕ ತಾಣಗಳನ್ನು ಪ್ರವಾಸಿಗರು ಭೇಟಿ ನೀಡಬೇಕು. ಸ್ಥಳೀಯ ಪ್ರವಾಸಿ ತಾಣಗಳೇ ಅತ್ಯಂತ ವಿಶೇಷತೆಗಳಿಂದ ಕೂಡಿದೆ ಎಂದರು.
ಕುಟುಂಬದವರೊಂದಿಗೆ ಪ್ರವಾಸ ಹೊರಡುವುದು ಒಂದು ತರವಾದರೆ, ಸ್ನೇಹಿತರೋಂದಿಗೆ ಚಾರಣ ಮಾಡುವ ಖುಷಿ ಅಮೋಘವಾದದ್ದು, ಇದರಿಂದ ಆರೋಗ್ಯ ವೃದ್ಧಿ ಹೊಂದುವುದರೊಂದಿಗೆ ಹೊಸ ಸ್ನೇಹ ಸಂಪಾದನೆ ಸಾಧ್ಯ. ಈ ನಿಟ್ಟಿನಲ್ಲಿ ತರುಣೋದಯ ಘಟಕ ಹಲವಾರು ಚಾರಣವನ್ನು ನಡೆಸುತ್ತಿದ್ದು, ಮೇ ತಿಂಗಳಲ್ಲಿ ಹಿಮಾಲಯ ಚಾರಣ ಏರ್ಪಡಿಸಲಾಗಿದೆ ಎಂದರು.
Youth Hostels Association of India ಪ್ರವಾಸದ ಆಸಕ್ತಿ ಇರುವ ಚಾರಣಿಗರು ಚೆರ್ಮನ್ ವಾಗೇಶ್. ಎಸ್. ಎಸ್. 9844809533 ಇವರಲ್ಲಿ ನೋಂದಾಯಿಸಿಕೊಳ್ಳಬಹುದು ಎಂದರು.
ಯೂತ್ ಹಾಸ್ಟೆಲ್ ರಾಜ್ಯ ಮಾಜಿ ಉಪಾಧ್ಯಕ್ಷ ಜಿ. ವಿಜಯಕುಮಾರ್, ಮಲ್ಲಿಕಾರ್ಜುನ ಕಾನೂರ್, ಭಾರತಿ ಗುರುಪಾದಪ್ಪ, ರಾಜು, ರಾಜು, ದಾನಮ್ಮ, ನಾಗಭೂಷಣ, ಪ್ರಸಾದ್, ಶಶಾಂಕ್, ದಿವ್ಯ ಮುಂತಾದವರು ಇದ್ದರು.