Saturday, November 23, 2024
Saturday, November 23, 2024

Dance competition ಚಿಕ್ಕಮಗಳೂರಿನಲ್ಲಿ ಯಶಸ್ವಿಗೊಂಡ ರಾಜ್ಯಮಟ್ಟದ ನೃತ್ಯ ಸ್ಪರ್ಧೆ

Date:

Dance competition ಯುವಕಲಾವಿದರು ಹಾಗೂ ಮಕ್ಕಳಿಗೆ ದಿ ಸ್ಟ್ರೇಂಜರ್ಸ್ ಡ್ಯಾನ್ಸ್ ಎಂಟರ್ಟೈನ್ಮೆಂಟ್ ನಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯ ಮೂರು ವಿಭಾಗಗಳಲ್ಲೂ ಅತ್ಯಂತ ಚುರುಕಿನಿಂದ ಪಾಲ್ಗೊಂಡು ಬಹುಮಾನ ಗಳಿಸುವ ಮುಖಾಂತರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಪೂರ್ಣವಾಗಿ ಸಮಾರೋಪಗೊಂಡಿತು.

ಬೆಳಿಗ್ಗೆ 11ಗಂಟೆಯಿ0ದ ಚಲನಚಿತ್ರ ಗೀತೆ, ಸೆಮಿಕ್ಲಾಸಿಕ್, ವೆಸ್ಟನ್, ಬ್ರೇಕ್‌ಡ್ಯಾನ್ಸ್, ಹಿಪ್‌ಹಾಪ್ ಸೇರಿದಂತೆ ವಿವಿಧ ಶೈಲಿಯ ನೃತ್ಯಪಟುಗಳು ಭಾಗಿಯಾಗಿ ನೃತ್ಯದ ಶಕ್ತಿಯನ್ನು ಪ್ರದರ್ಶಿಸಿದರು. ಅಂತಿಮವಾಗಿ ಮೂರು ವಿಭಾ ಗಳಲ್ಲಿ ಪ್ರತಿ ನಾಲ್ಕು ತಂಡಗಳಿಗೆ ನಗದು, ಪಾರಿತೋಷಕ ಬಹುಮಾನವನ್ನು ಅನಿವಾಸಿ ಭಾರತೀಯ ನಿಗಮದ ಉಪಾಧ್ಯಕ್ಷೆ ಆರತಿ ಕೃಷ್ಣ ಭಾನುವಾರ ಸಂಜೆ ವಿತರಿಸಿದರು.

ಬಳಿಕ ಮಾತನಾಡಿದ ಅನಿವಾಸಿ ಭಾರತೀಯ ನಿಗಮದ ಉಪಾಧ್ಯಕ್ಷೆ ಆರತಿ ಕೃಷ್ಣ ಭಾರತೀಯ ಪಾಶ್ಚಾಮತ್ಯ ಶೈಲಿಯಲ್ಲಿ ವಿವಿಧ ತಂಡಗಳು ಭಾಗವಹಿಸಿ ನೃತ್ಯ ಪ್ರದರ್ಶನ ನೀಡಿರುವುದು ಉತ್ತಮ ಸಂಗತಿ. ನೃತ್ಯವು ಮನರಂ ಜನೆ ನೀಡುವ ಜೊತೆಗೆ ಮಾನಸಿಕ ಹಾಗೂ ಶಾರೀರಿಕವಾಗಿ ಶಕ್ತಿ ತುಂಬಲು ನೃತ್ಯಪಟುಗಳಿಗೆ ಸಹಾಯವಾಗಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆಸಿ ಯುವಸಮೂಹದ ಬೆಳವಣಿಗೆಗೆ ಪೂರಕವಾಗಿ ಸ್ಟೇಂರ‍್ಸ್ ಸಂಸ್ಥೆ ದುಡಿಯುತ್ತಿದೆ. ಬಡ ಹಾಗೂ ಮಧ್ಯಮ ವರ್ಗದವರು ಡ್ಯಾನ್ಸ್ ಕಲಿಯುವ ಆಸಕ್ತಿಯಿದೆ. ಆದರೆ ಆರ್ಥಿಕ ಸಮಸ್ಯೆ ಯಿಂದ ಹಿಂದೇಟು ಹಾಕಲಾಗುತ್ತಿದೆ ಎಂಬ ಮಾತುಗಳಿರುವ ಹಿನ್ನೆಲೆಯಲ್ಲಿ ಸರ್ಕಾರದ ಜೊತೆ ಚರ್ಚಿಸಿ ಸಂಸ್ಥೆಗೆ ಸೌಲಭ್ಯವನ್ನು ಒದಗಿಸಿ ನೃತ್ಯಪಟುಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಕಡೂರು ಶಾಸಕ ಕೆ.ಎಸ್.ಆನಂದ್ ಮಾತನಾಡಿ ನೃತ್ಯದಲ್ಲಿ ವಿವಿಧ ಬಗೆಯ ಶೈಲಿಗಳಿವೆ. ಕಲಿಯುವ ಆಸಕ್ತಿ ಯುವಕರಿಗೆ ಇರಬೇಕಷ್ಟೇ. ಭಾರತೀಯ ಸಂಸ್ಕೃತಿ ಹಾಗೂ ಪಾಶ್ಚಾಮತ್ಯ ನೃತ್ಯಗಳು ಪ್ರಚಲಿತದಲ್ಲಿರುವ ಹಿನ್ನೆಲೆಯ ಲ್ಲಿ ನೃತ್ಯದ ಸ್ಪೂರ್ತಿಯನ್ನು ಬೆಳೆಸಿಕೊಂಡು ರಾಷ್ಟç ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿ ತರಬೇತಿ ನೀಡಿದ ಸಂಸ್ಥೆ ಹಾಗೂ ಹುಟ್ಟಿದ ಊರಿಗೆ ಕೀರ್ತಿ ತರಬೇಕು ಎಂದರು.

Dance competition ದಿ ಸ್ಟ್ರೇಂಜರ್ಸ್ ಡ್ಯಾನ್ಸ್ ಎಂಟರ್ಟೈನ್ಮೆಂಟ್ ಸಂಸ್ಥಾಪಕ ಪ್ರಸಾದ್ ಅಮೀನ್ ಮಾತನಾಡಿ ರಾಜ್ಯದ ಹಲವಾರು ಜಿಲ್ಲೆಗಳಿಂದ ಸ್ಪರ್ಧಾಕಾಂಕ್ಷಿಗಳು ಭಾಗವಹಿಸಿದ್ದು ಸೀನಿಯರ್ ಸೋಲೋ, ಸೀನಿಯರ್ ಗ್ರೂಪ್ ಹಾಗೂ ಜ್ಯೂನಿ ಯರ್ ಸೋಲಾ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂದರು.

ಸೀನಿಯರ್ ಸೋಲಾ ವಿಭಾಗದಲ್ಲಿ ಶಿವಮೊಗ್ಗದ ವೆಂಕಿ ಪ್ರಥಮ, ಚಿಕ್ಕಮಗಳೂರಿನ ರೋಹಿತ್ ದ್ವಿತೀಯ, ಹಾಸನ್‌ನ ಅನುಯ್ಯರಾಜ್ ತೃತೀಯ ಹಾಗೂ ಚರಣ್ ನಾಲ್ಕನೇ ಸ್ಥಾನ, ಸೀನಿಯರ್ ಗ್ರೂಪ್ ವಿಭಾಗದಲ್ಲಿ ಬೆಂಗಳೂರಿನ ಡಿ.ಜೆ. ಡ್ಯಾನ್ಸ್ ಸ್ಟುಡೀಯೋ ತಂಡ ಪ್ರಥಮ, ಆರ್ಯಶಿವ ಸ್ಕೂಲ್ ಆಫ್ ಡ್ಯಾನ್ಸ್ ದ್ವಿತೀಯ, ಶಿವಮೊಗ್ಗದ ಡ್ಯಾನ್ಸ್ ಪ್ಯಾಲೆಸ್ ಅಕಾಡೆಮಿ ತೃತೀಯ, ಎನ್.ಆರ್.ಪುರದ ರಾಗ ಮಯೂರಿ ಅಕಾಡೆಮಿ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಪಾರಿತೋಷಕ ಹಾಗೂ ನಗದು ಬಹುಮಾನವನ್ನು ವಿತರಿಸಲಾಯಿತು.

ಜ್ಯೂನಿಯರ್ ಸೋಲಾ ವಿಭಾಗದಲ್ಲಿ ಶಿವಮೊಗ್ಗದ ನಿರೀಕ್ಷಾ ಸುಬ್ರಮಣ್ಯ ಪ್ರಥಮ, ಕಡೂರಿನ ರಶ್ಮಿಕಾ ಶೆಟ್ಟಿ ದ್ವಿತೀಯ, ಹಾಸನ್‌ನ ನಕ್ಷಾ ತೃತೀಯ ಹಾಗೂ ಚಿಕ್ಕಮಗಳೂರಿನ ಡೇನಿಯಲ್ ನಾಲ್ಕನೇ ಸ್ಥಾನ ಪಡೆದುಕೊಂಡ ನೃತ್ಯಪಟುಗಳಿಗೆ ಪಾರಿತೋಷಕ ಹಾಗೂ ನಗದು ಬಹುಮಾನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ, ಸಖರಾಯಪಟ್ಟಣ ಬ್ಲಾಕ್ ಅಧ್ಯಕ್ಷ ಮಹಡಿಮನೆ ಸತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ಶೆಟ್ಟಿ, ಸಿ.ಎನ್.ಕಾಫಿಕ್ಯೂರಿಂಗ್ ವರ್ಕ್ಸ್ ಮಾಲೀಕ ಸಿ.ಎನ್. ಅಕ್ಮಲ್, ಸ್ಪಂದನಾ ಆಸ್ಪತ್ರೆಯ ಡಾ. ಸಂತೋಷ್ ನೇತಾ, ರೈನಿ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಂನ ಡೈರೆಕ್ಟರ್ ಮೈಕೆಲ್ ಸದಾನಂದ ಬ್ಯಾಪ್ಟಿಸ್ಟ್, ಜಿಲ್ಲಾ ಬ್ಯಾರಿ ಒಕ್ಕೂಟದ ಅಧ್ಯಕ್ಷ ಟಿ.ಎಂ.ನಾಸೀರ್, ಕರವೇ ಪ್ರಭಾರಿ ಅಧ್ಯಕ್ಷ ಅಶೋಕ್ ಕೆಂಪನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...