Ayanur Manjunath ಮಕ್ಕಳಿಗೆ ಪಠ್ಯದ ಜೊತೆ ಜೊತೆಯಲ್ಲಿ ಮಕ್ಕಳಿಗೆ ಕ್ರೀಡಾ ಮನೋ ಭಾವನೆ ಬೆಳೆಸಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಅವರು ಶಿವಮೊಗ್ಗದ ನೆಹರೂ ಕ್ರಿಡಾಂಗಣದಲ್ಲಿ ಆಯೋಜಿಸಿದ್ದ ಗುರುಪುರದ ದೆಹಲಿ ಇಂಟರ್ ನ್ಯಾಷನಲ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಡರಾಗಲು ಕ್ರೀಡೆ ಸಹಕಾರಿ ಈ ನಿಟ್ಟಿನಲ್ಲಿ ದಹಲಿ ಇಂಟರ್ ನ್ಯಾಷನಲ್ ಶಾಲೆ ಮಕ್ಕಳ ಜೊತೆ ಪೋಷಕರಿಗೂ ಕ್ರೀಡಾಕೂಟ ಆಯೋಜಿಸಿರುವುದು ವಿಶೇಷ ಎಂದರು.
ಕ್ರೀಡೆಗಳಿoದ ಮಕ್ಕಳಿಗೆ ಒಗ್ಗಟ್ಟು, ಮೂಡುತ್ತದೆ. ಸ್ನೇಹ ಹೆಚ್ಚುತ್ತದೆ. ಅದರಲ್ಲೂ ಪೋಷಕರೊಂದಿಗೆ ಕ್ರೀಡೆಯಲ್ಲಿ ಮಕ್ಕಳು ಭಾಗವಹಿಸಿರುವುದು ಉತ್ತೇಜನ ನೀಡಿದಂತಾಗುತ್ತದೆ. ಒಟ್ಟಾರೆ ಶಾಲೆಯ ಚಟುವಟಿಕೆ ಕಾರ್ಯಗಳು ಇನ್ನು ಹೆಚ್ಚಾಗಲಿ, ಶಾಲೆ ಉತ್ತುಂಗಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಾಧಕರಾದ ಹೆಡ್ರಿಸ್ ಪಾಶ, ಪ್ರಭಾ ಅನಿಲ್ ಜೈನ್, ದೀಪ್ತಿ ಆರ್. ಶೆಟ್ಟಿö, ಬಿಂದು ಅನಿಲ್ ಹಾಗೂ ವೈö.ಹೆಚ್. ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
Ayanur Manjunath ಶಾಲೆಯ ಫೌಂಡರ್ ಡೈರೆಕ್ಟರ್ ಎಸ್.ಬಿ. ಜಗದೀಶ್ಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಪಾಲಿಕೆ ಸದಸ್ಯ ಐಡಿಯಲ್ ಗೋಪಿ, ಛೇರ್ಮನ್ ರಮ್ಯ ಜಗದೀಶ್ಗೌಡ ಸೇರಿದಂತೆ ಶಾಲೆಯ ಶಿಕ್ಷಕರ ವೃಂದ ಮತ್ತು ಸಿಬ್ಬಂಧಿಯವರು ಉಪಸ್ಥಿತರಿದ್ದರು.