ಅಭಿನಂದನಾ ಲೇಖನ:
ಎಂ.ತುಳಸೀರಾಂ.
ಮೈಸೂರು.
Norbert D’Souza ಶರಾವತಿ ಕಣಿವೆ ಪ್ರದೇಶದ ಪರಿಸರದ ಬಗ್ಗೆ ಮಹತ್ವದ ಮಾಹಿತಿ ನೀಡುವ, ತಮ್ಮೆಲ್ಲಾ ಕಥೆ ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿ, ಹಿಂದುಳಿದ, ಬುಡಕಟ್ಟು ಜನರ , ಕ್ರೈಸ್ತ ಸಮುದಾಯದ ಜನಜೀವನದ ಹಿನ್ನೆಲೆಯ ಚಿತ್ರಣದ ಮೇಲೆ, ಭ್ರಷ್ಟಾಚಾರದ ಮೇಲೆ ಬೆಳಕು ಚೆಲ್ಲುತ್ತಾ ಕನ್ನಡ ಸಾಹಿತ್ಯಲೋಕದಲ್ಲಿ ಸದ್ದು ಗದ್ದಲವಿಲ್ಲದೆ ಅಪಾರ ಕೃಷಿ ನಡೆಸುತ್ತಿರುವ ನಾರ್ಬರ್ಟ್ ಡಿಸೋಜ ( ನಾ ಡಿಸೋಜ ) ನಮ್ಮವರು, ಜೋ ಗ- ಕಾರ್ಗಲ್- ಸಾಗರದವರು ಎಂಬುದೇ ಹೆಚ್ಚುಗಾರಿಕೆ.
ತಂದೆ ಎಸ್ ಪಿ ಡಿಸೋಜ ಉಪಾಧ್ಯಾಯರು , ಅವರು ಮಕ್ಕಳಿಗೆ ಕಲಿಸಲು ಬರೆದುಕೊಳ್ಳುತ್ತಿದ್ದ ಪದ್ಯ ಗಳನ್ನು ಓದುವ, ಕಲಿಯುವ ಮೂಲಕ ಸಾಹಿತ್ಯಾಸಕ್ತಿ ಬೆಳೆಸಿಕೊಂಡ ನಾ ಡಿಸೋಜ ಗ್ರಂಥಾಲಯಗಳಲ್ಲಿ ಮಾಸ್ತಿ, ಕುವೆಂಪು, ಕಾರಂತ, ಗೊರೂರು, ಸಾಮರ್ಸೆಟ್, ಡಿಕನ್ಸ್ , ಸಾಹಿತ್ಯಕೃತಿಗಳನ್ನು ಹೆಚ್ಚೆಚ್ಚು ಅಧ್ಯಯನ ಮಾಡುತ್ತಾ, ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಹಿಸುತ್ತಾ, ನಾಟಕ, ಕಥೆ, ಕವನ, ಕಾದಂಬರಿ ಗಳ ರಚನೆಯಲ್ಲಿ ಸುಮಾರು 60- 70 ವರ್ಷಗಳ ಅವರ ಸಾಧನೆ ಅವರಿಗೆ ಕೀರ್ತಿ, ಪ್ರೀತಿ, ಪ್ರಶಸ್ತಿ ಪುರಸ್ಕಾರಗಳನ್ನು ಹೇರಳವಾಗಿ ಪಡೆಯಲು ಸಹಾಯಕವಾಗಿದೆ. ಆದರೆ ಅವರೂ ಎಂದೂ ಪ್ರಶಸ್ತಿ ಪುರಸ್ಕಾರಗಳ ಅಧಿಕಾರದ ಹಿಂದೆ ಬಿದ್ದವರಲ್ಲ. ಮೆದುಭಾಷಿ, ಸದಾಮಂದಹಾಸದ ನಗುಮುಖ, ಸುಸಂಸ್ಕೃತ ಹಿನ್ನೆಲೆಯ ಗಾಂಭಿರ್ಯದ ನಡವಳಿಕೆ ಅಪಾರ ಅಭಿಮಾನಿ ಸ್ನೇಹಿತರ ಸಮೂಹ ಅವರ ಜೊತೆಗಿರುವುದೇ ಅವರು ಗಳಿಸಿದ ದೊಡ್ಡ ಆಸ್ತಿ.
ಅವರ ಕೆಲವು ಕಾದಂಬರಿಗಳು ಚಲನ ಚಿತ್ರಗಳಾಗಿ ಹೊರಹೊಮ್ಮಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನವಾಗಿವೆ. ದೂರದರ್ಶನ ಮಾಧ್ಯಮದಲ್ಲಿ ಧಾರಾವಾಹಿ ಗಳಾಗಿ ಪ್ರಸಾರವಾಗಿ ಅಪಾರ ಜನಪ್ರಿಯತೆಗಳಿಸಿವೆ.
ಅವರ ಕಥೆ ಕಾದಂಬರಿಗಳು ಹಲವಾರು ವಿಶ್ವ ವಿದ್ಯಾನಿಲಯಗಳ ಪದವಿ ತರಗತಿಗಳ ಪಠ್ಯ ಪುಸ್ತಕಗಳಾ ಗಿ ಆಯ್ಕೆಆಗಿದ್ದವು.
ಅವರ ಕಥೆ ಕಾದಂಬರಿಗಳು ಹಲವಾರು ಭಾಷೆಗಳಿಗೆ ಅನುವಾದ ಗೊಂಡು ಬಹುಭಾಷಾ ಸಾಹಿತ್ಯಾಭಿಮಾನಿಗಳ ಗೌರವಕ್ಕೆ ಪಾತ್ರವಾಗಿವೆ. ಅಲ್ಲದೇ ಅವರ “ಸಾಹಿತ್ಯ , ಕಾದಂಬರಿ , ನಾ ಡಿಸೋಜ ಒಂದು ಸಾಂಸ್ಕೃತಿಕ ಅಧ್ಯಯನ ” ಗಳಿಗೆ ಅನೇಕರು ಅಧ್ಯಯನ, ಅಭ್ಯಯಸನ, ಸಂಶೋಧನ ಪ್ರಬಂ ಧಗಳನ್ನು ಮಂಡಿಸಿ ಹಲವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಅವರ ಕ್ರಿಯಾಶೀಲ ಸಾಹಿತ್ಯ ಸೇವೆ, ಕೊಡುಗೆಗಳು , ಅಧ್ಯಯನಗಳಿಗೆ ದೊರೆತ ಪ್ರಶಸ್ತಿ ಪುರಸ್ಕಾರಗಳು ಅಪಾರ. ಅವುಗಳಲ್ಲಿ ಮುಖ್ಯವಾದದ್ದು – ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ,ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಅಖಿಲ ಭಾರತ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ, ಪ್ರಸ್ತುತ 2023- 24ನೇ ವರ್ಷದ ” ಪಂಪ ಪ್ರಶಸ್ತಿ ” ಯ ಗರಿ ಅವರ ರಚಿಸಿರುವ ನೂರಕ್ಕೂ ಅಧಿಕ ಕಾದಂಬರಿಗಳು,ನಾಟಕಗಳು, ಕಥಾಸಂಕಲನ, ಮಕ್ಕಳ ಸಾಹಿತ್ಯ,ಮತ್ತು ಅವರ ಸಮಗ್ರ ಸಾಹಿತ್ಯಕ್ಕೆ ದೊರೆತ ನಾಡಗೌರವ ಅಮೂಲ್ಯ . ಅವರು ಜೀವನದುದ್ದಕ್ಕೂ ಮಾನವೀಯ ಮೌಲ್ಯಗಳಿಗೆ ನೀಡಿರುವ , ನೀಡುತ್ತಾ ಬಂದಿರುವ ಅವರ ಸೃಜನಶೀಲ ಮನಸ್ಸಿಗೆ ಸಂದ ಅಪಾರ ಗೌರವ.
Norbert D’Souza ನಮಗೆ ಹೆಮ್ಮೆ ಬಮ್ಮೆಪಮ್ಮೆ , ಕಾರಣ ಅವರು ನಮ್ಮವರು, ನಮ್ಮೊಡನಿದ್ದವರು. ಶರಾವತಿ ಕಣಿವೆ ಪ್ರದೇಶದವರು, ಅಲ್ಲಿ ಸೇವೆಸಲ್ಲಿಸಿದವರು.
ಮಿತ್ರಮಂಡಳಿಯ ಆಜೀವ ಗೌರವ ಸದಸ್ಯರು , ಅವರ ಬಹಳಷ್ಟು ನಾಟಕಗಳನ್ನು, ಆಶು ನಾಟಕಗಳನ್ನು ನಾವು ರಂಗದ ಮೇಲೆ ತಂದಿದ್ದೇವೆ , ಅಭಿನಯಿಸಿದ್ದೇವೆ , ದೇವರಿಗೆ ದಿಕ್ಕು, ಭೂತದ ಎದುರು ಬೇತಾಳ ನಾಟಕಗಳು 1968ರಲ್ಲಿ ನಮ್ಮ ಮಿತ್ರಮಂಡಳಿಯ ನಾಟಕೋತ್ಸವದಲ್ಲಿ ಅಭಿನಯಿಸಲ್ಪ ಟ್ಟಿತ್ತು. ” ಗುರುಗಾಂಪ ವಿಜಯಂ ” ನಾಟಕ ಒಂದು ರೀತಿಯಲ್ಲಿ ಭ್ರಷ್ಟಾಚಾರ ಬಯಲುಗೆಳೆಯುವ ಅಥವ ಪತ್ತೇದಾರಿ ನಾಟಕ.
ಡಿಸೋಜ ಮತ್ತು ಮಿತ್ರಮಂಡಳಿಯ ನಂಟು ಹಾಲುಜೇನಿನಂತೆ- ಅವರು ನಮಗೆ ನಾಟಕ ರಚಿಸಿಕೊಟ್ಟಿದ್ದಾರೆ, ನಮ್ಮ ನಾಟಕ ಸ್ಪರ್ಧೆಗಳಲ್ಲಿ ತೀರ್ಪು ಗಾರರಾಗಿ ಅಮೂಲ್ಯಸೇವೆ , ಸಲಹೆ ನೀಡಿದ್ದಾರೆ. ಆಪತ್ಭಾಂದವರಾಗಿ ಆಶುನಾಟಕ ರಚಿಸಿ ದೀಡಿರನೆ ನಾಟ ಕಾಭಿನಯಕ್ಕೆ ಪ್ರೋತ್ಸಾಹನೀಡಿದ್ದಾರೆ.
ನಾವು 1981 ರಲ್ಲಿ ಬಿಡು ಗಡೆಗೊಳಿಸಿದ ಮಿತ್ರಮಂಡಳಿಯ ದ್ವಿದಶಕಗಳ ಕಲಾರಾಧನೆಯ ಸ್ಮರಣ ಸಂಚಿಕೆ ” ಕಲಾಕುಂಜ” ಕ್ಕೆ ಅತ್ಯಮೂಲ್ಯ ಸಲಹೆ ಸೂಚನೆ ಮತ್ತು ಲೇಖನ ನೀಡಿ ಹರಸಿ ಹಾರೈಸಿದ್ದು ನಮ್ಮ ಹೃನ್ಮನಗಳಲ್ಲಿ ಸದಾ ಹಸಿರು. ಇಂಥಹ ಮೇರು ಸಾಹಿತಿ, ದಾರ್ಶನಿಕ ನಮ್ಮೊಡನೆ ಇರುವುದೇ ನಮ್ಮ ಸುಕೃತ.
ಮತ್ತಷ್ಟು ಮಗದಷ್ಟು ಪದವಿ ಪುರಸ್ಕಾರಗಳು ಅವರನ್ನು ಅರಸಿ ಬರಲಿ , ಹರಸಿ ಹಾರೈಸಲಿ ಎಂಬುದೇ ನಮ್ಮೆಲ್ಲರ ಹೆಬ್ಬಯಕೆ.
ನಮ್ಮೆಲ್ಲರ ಪ್ರೀತಿಯಸಾಹಿತಿ ‘ನಾ ಡಿಸೋಜ’ ರಿಗೆ ಶುಭಾಶಯಗಳು. ಅಭಿಮಾನದ ವಂದನೆಗಳು .
Norbert D’Souza ಪಂಪ ಪ್ರಶಸ್ತಿ ಪುರಸ್ಕೃತ ನಾ ಡಿಸೋಜಾ
Date: