Amitabh Bachchan ಇಡೀ ಭಾರತವೇ ಜನವರಿ 22ರಂದು ಬಾಲ ರಾಮನ ಪ್ರಾಣ ಪ್ರತಿಷ್ಠೆಯ ಶುಭ ಘಳಿಗೆಯನ್ನು ನೋಡಲು ಕಾದು ಕುಳಿತಿದೆ.
ಅದೇ ರೀತಿ ಅಯೋಧ್ಯೆಯಲ್ಲಿ ಪುಣ್ಯ ಕ್ಷೇತ್ರದಲ್ಲು ಬಾಲಿವುಡ್ನ ಬಿಗ್ಬಿ ಎಂದೇ ಖ್ಯಾತಿ ಪಡೆದ ಅಮಿತಾಬ್ ಬಚ್ಚನ್ ಅವರು ಮನೆ ನಿರ್ಮಿಸಲು ಸ್ಥಳವನ್ನು ಖರೀದಿ ಮಾಡಿದ್ದಾರೆ. ಇದರ ಸಲುವಾಗಿ ಸುಮಾರು 14.5 ಕೋಟಿ ರೂಪಾಯಿಯ ನಿವೇಶನ ಖರೀದಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ ಸಮಯದಲ್ಲಿಯೇ ಬಿಗ್ಬಿ ಈ ಪ್ರಾಪರ್ಟಿ ಖರೀದಿ ಮಾಡಿದ್ದಾರೆ.
ಅಲಹಾಬಾದ್ನಲ್ಲಿ ಜನಿಸಿದ ಬಾಲಿವುಡ್ ನಟ ಅವರು 7 ಸ್ಟಾರ್ ಮಿಕ್ಸಡ್ ಯೂಸ್ ಎನ್ಕ್ಲೇವ್ ಸರಾಯುನಿಂದ ಈ ನಿವೇಶನ ಖರೀದಿಸಿದ್ದಾರೆ.
ಸರಾಯು ಎನ್ನುವುದು ಮುಂಬೈ ಮೂಲದ “ದ ಡೆವಲಪರ್ ದಿ ಹೌಸ್ ಆಫ್ ಅಭಿನಂದನ್ ಲೋಧಾ ಪ್ರಾಜೆಕ್ಟ್ ಆಗಿದೆ.
Amitabh Bachchan ಈ ಸರಾಯು ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಕೂಡ ಜನವರಿ 22ರಂದು ಉದ್ಘಾಟನೆಗೊಳ್ಳಲಿದೆ. ಅಂದರೆ, ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ದೇಗುಲಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುವ ದಿನದಂದೇ ಈ ಪ್ರಾಜೆಕ್ಟ್ಗೂ ಚಾಲನೆ ದೊರಕಲಿದೆ ಎಂದು ಎಚ್ಒಎಬಿಎಲ್ ಮತ್ತು ಅಮಿತಾಬ್ ಬಚ್ಚನ್ ಅವರ ನಿಕಟ ಮೂಲಗಳು ಮಾಧ್ಯಮಕ್ಕೆ ಮಾಹಿತಿ ತಿಳಿಸಿವೆ.