Sunday, November 24, 2024
Sunday, November 24, 2024

Chikmagalur Tailors Association ಪ್ರತೀ ವ್ಯಕ್ತಿಗೂ ಧರಿಸುವ ಉಡುಪು ಉತ್ತಮವಾಗಿರದಿದ್ದರೆ ಸಮಾಜದಲ್ಲಿ ಬೆಲೆಸಿಗದು-ಎಚ್.ಡಿ.ತಮ್ಮಯ್ಯ

Date:

Chikmagalur Tailors Association ಅಸಂಘಟಿತ ಕಾರ್ಮಿಕರಾದ ಟೈಲರ್ಸ್ ವೃತ್ತಿಬಾಂಧವರಿಗೆ ಸರ್ಕಾರದಿಂದ ದೊರೆಯುವ ಪ್ರತಿ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯಕ್ಕೆ ಪ್ರಾಮಾಣಕ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು ನಗರದ ಟಿಎಂಎಸ್ ರೋಟರಿ ಸಭಾಂಗಣದಲ್ಲಿ ಚಿಕ್ಕಮಗಳೂರು ಟೈಲರ್ಸ್ ಅಸೋಸಿಯೇಷನ್, ಟೈಲರ್ಸ್ ಸಹಕಾರ ಸಂಘದ ವತಿಯಿಂದ ಏರ್ಪಡಿಸಿದ್ದ ಹಿರಿಯ ವೃತ್ತಿ ಬಾಂಧವರು, ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಡವನಿಂದ ಹಿಡಿದು ಶ್ರೀಮಂತನವರೆಗೂ ಪ್ರತಿ ವ್ಯಕ್ತಿಗೂ ಧರಿಸುವ ಉಡುಪು ಉತ್ತಮವಾಗಿರದಿದ್ದರೆ ಸಮಾ ಜದಲ್ಲಿ ಬೆಲೆ ಸಿಗುವುದು ಕಷ್ಟಸಾಧ್ಯ. ಆ ನಿಟ್ಟಿನಲ್ಲಿ ವ್ಯಕ್ತಿಯ ಗೌರವ ಒದಗಿಸಿಕೊಡುವ ಟೈರ‍್ಸ್ ವೃತ್ತಿಬಾಂಧವರ ಸೇವೆ ಅವಿಸ್ಮರಣೀಯವಾಗಿದೆ. ಇಂತಹ ಟೈಲರ್ಸ್ಳು ಹೆಚ್ಚಿನ ಮಟ್ಟದಲ್ಲಿ ಬೆಳೆದು ಇತರರಿಗೆ ಮಾದರಿಯಾಗಬೇಕು ಎಂದು ಆಶಿಸಿದರು.

ಯಾವುದೇ ವ್ಯಕ್ತಿ ತನ್ನ ವೃತ್ತಿಯನ್ನು ಗೌರವಿಸಿ ಪ್ರೀತಿಸುವವರಿಗೆ ಕಾಯಕದಲ್ಲಿ ಕಷ್ಟ ಎಂಬುದಿರುವುದಿಲ್ಲ. ಆದರೆ ಸೋಮಾರಿತನದಿಂದ ವೃತ್ತಿಗೂ ಗೌರವ ಸಲ್ಲಿಸದೇ ಅಸಡ್ಡೆವಹಿಸುವವರು ಜೀವನದಲ್ಲಿ ಸಣ್ಣ ಕೆಲಸವು ಭಾರವಾಗಲಿದೆ. ಆ ಸಾಲಿನಲ್ಲಿ ಟೈಲರ್ಸ್ ವೃತ್ತಿಬಾಂಧವರು ಅತ್ಯಂತ ಚುರುಕುತನದಿಂದ ಕೆಲಸ ನಿರ್ವಹಿಸುತ್ತಿರು ವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಅತ್ಯಂತ ಸಣ್ಣ ಸಮಾಜದಿಂದ ಬಂದವರು ಟೈಲರ್ಸ್ ವೃತ್ತಿಯಲ್ಲಿ ತೊಡಗಿಕೊಂಡು ತಕ್ಕಮಟ್ಟಿನ ಜೀವನ ನಡೆ ಸುತ್ತಿದ್ದಾರೆ. ಜೊತೆಗೆ ಸಂಘಟನೆಗಳ ನೇತೃತ್ವದಲ್ಲಿ ಒಗ್ಗಟ್ಟಾಗಿ ಮುನ್ನೆಡೆಯುವುದನ್ನು ರೂಢಿಸಿಕೊಂಡಾಗ ಆರ್ಥಿಕ ಸಂಕಷ್ಟ ಎದುರಾಗ ಸಂಘಗಳು ಸಹಕಾರ ನಿಡಲಿದೆ. ಜೊತೆಗೆ ಸರ್ಕಾರದೊಂದಿಗೆ ಚರ್ಚಿಸಿ ಅಸಂಘಟಿತರಿಗೆ ಸವಲ ತ್ತು ಒದಗಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಕಟ್ಟಡ ಕಾರ್ಮಿಕರಿಗೆ ದೊರೆಯುವ ಪ್ರತಿ ಸವಲತ್ತುಗಳನ್ನು ಅಸಂಘಟಿತ ಟೈಲರ್ಸ್ ವೃತ್ತಿಯವರಿಗೂ ಕೊಡುವ ವ್ಯವಸ್ಥೆ ಕೈಗೊಂಡಾಗ ಟೈಲರ್ಸ್ ಬಳಗ ಸಮಾ ಜದ ಮುಂಚೂಣಿಗೆ ಬರಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ವೃತ್ತಿಬಾಂಧವರು ಒಗ್ಗಟ್ಟಾಗಿ ಸಂಘಟನೆಗಳ ನೇತೃತ್ವ ದಲ್ಲಿ ಸರ್ಕಾರವನ್ನು ಒತ್ತಾಯಿಸಿದಾಗ ಮಾತ್ರ ಸೌಕರ್ಯ ಲಭಿಸಬಹುದು ಎಂದು ಹೇಳಿದರು.

Chikmagalur Tailors Association ಟೈಲರ್ಸ್ ಸಹಕಾರ ಸಂಘದ ಅಧ್ಯಕ್ಷ ಅಶೋಕ್‌ಶೆಟ್ಟಿ ಮಾತನಾಡಿ ಕಳೆದ ಎರಡು ವರ್ಷಗಳಿಂದ ಟೈಲರ್ಸ್ ಸೌಕರ್ಯದ ಬಗ್ಗೆ ಹಿಂದಿನ ಶಾಸಕರಿಗೂ ಮನವಿ ಸಲ್ಲಿಸಲಾಗಿದ್ದರೂ ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ. ಆ ಹಿನ್ನೆ ಲೆಯಲ್ಲಿ ಹಾಲಿ ಶಾಸಕರು ಸಂಘಕ್ಕೆ ನಗರದ ಸಮೀಪದಲ್ಲೇ ಒಂದು ಕಚೇರಿಗೆ ಅವಕಾಶ ಕಲ್ಪಿಸಿದರೆ ಸಭೆ, ಸಮಾರಂಭ ನಡೆಸಲು ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಸುಧೀರ್ ಸುಮಾರು ೩೮೦ ಸದಸ್ಯರ ಬಳಗವನ್ನು ಹೊಂದಿರುವ ಟೈಲರ್ಸ್ ಅಸೋಸಿಯೇಷನ್‌ನವರು ಸಂಕಷ್ಟದಲ್ಲಿರುವ ವೃತ್ತಿಬಾಂಧವರಿಗೆ ಸ್ಪಂದಿಸುವ ಕೆಲಸದಲ್ಲಿ ನಿರತರಾಗಿದ್ದು ಆ ನಿಟ್ಟಿನಲ್ಲಿ ಪ್ರತಿ ಸದಸ್ಯರಿಂದ ದಿನಕ್ಕೆ ಒಂದು ರೂ. ಗಳಂತೆ ಸಂಗ್ರಹಿಸಿ ತುರ್ತು ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಇದೇ ವೇಳೆ ಇಬ್ಬರು ಪೌರಕಾರ್ಮಿಕರು, ಓರ್ವ ಟೈಲರ್ ವೃತ್ತಿಬಾಂಧವರಿಗೆ ಸನ್ಮಾನಿಸಲಾಯಿತು. ೨೦೨೨-೨೩ ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಗಳಿಸಿದ ಮಕ್ಕಳಿಗೆ ವಿದ್ಯಾರ್ಥಿವೇತನ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆಲುವು ಸಾಧಿಸಿದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಕಾರ್ಯದರ್ಶಿ ಸಿ.ಎನ್.ಜಾನಕಿ, ಅಸೋಸಿಯೇಷನ್ ಕಾರ್ಯದರ್ಶಿ ಅನಿಲ್‌ಕುಮಾರ್, ಗೌರವ ಅಧ್ಯಕ್ಷೆ ಜೈನಾಬಿ, ಸದಸ್ಯರಾದ ಪಾಂಡುರಂಗ, ಯುವರಾಜ್, ಬಿ.ಎಂ.ಪ್ರಕಾಶ್, ರಾಜು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Priyanka Gandhi ಕೇರಳ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅತ್ಯಧಿಕ ಮತಗಳಿಂದ ಆಯ್ಕೆ

Priyanka Gandhi ಪ್ರಿಯಾಂಕಾ ಗಾಂಧಿ ವಾದ್ರಾ 4,10,931 ಮತಗಳ ಅಂತರದಿಂದ ಗೆದ್ದಿದ್ದಾರೆ,...

SP Mithun Kumar ಮದ್ಯವರ್ಜನ ಶಿಬಿರ ಚಾಲನೆ, ಸಮಾಜಕ್ಕೆ ಹೆಚ್ಚು ಉಪಯುಕ್ತ- ಎಸ್.ಪಿ .ಮಿಥುನ್ ಕುಮಾರ್

SP Mithun Kumar ಶಿವಮೊಗ್ಗ,ನ.22 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ...

Kuvempu Birthday ಕುವೆಂಪು ಜನ್ಮದಿನದ ವಿಶೇಷ ಷಿಕಾರಿಪುರದಲ್ಲಿ ನಾಟಕ ಸ್ಪರ್ಧೆ

Kuvempu Birthday ಸಹ್ಯಾದ್ರಿ ರಂಗತರಂಗ ನಾಟಕ ಸ್ಪರ್ಧೆ ಶಿವಮೊಗ್ಗ ನಗರದ ಸಹಾದ್ರಿ...

Dargah Shah Aleem Deewan ಶಿವಮೊಗ್ಗದ ದಿವಾನ್ ಭಾಬಾ ದರ್ಗಾದಲ್ಲಿ ನ.24 ರಿಂದ 26 ವರೆಗೆ ಉರುಸ್

Dargah Shah Aleem Deewan ಶಿವಮೊಗ್ಗದ ಹಜ್ರತ್ ಸೈಯದ್ ಶಾ ಅಲೀಮ್...