Monday, November 25, 2024
Monday, November 25, 2024

Shri Kshetra Dharmasthala Rural Development  ಭಾರತ ಆರ್ಥಿಕ ಶಕ್ತಿಯಾಗಿ ಬೆಳೆಯಲು ಗ್ರಾಮಾಭಿವೃದ್ಧಿ ಅತ್ಯವಶ್ಯ- ಎಚ್.ಬಿ.ಮಂಜುನಾಥ್

Date:

Shri Kshetra Dharmasthala Rural Development  ಭಾರತವು ಮಹಾನ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ದೇಶದ ಗ್ರಾಮೀಣಾಭಿವೃದ್ಧಿಯು ಅತ್ಯವಶ್ಯ ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಅಭಿಪ್ರಾಯಪಟ್ಟರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್ ವತಿಯಿಂದ ದಾವಣಗೆರೆ ಸಮೀಪದ ಕಡ್ಲೆಬಾಳು ಗ್ರಾಮದಲ್ಲಿ ಏರ್ಪಾಡಾಗಿದ್ದ ಸಾಮೂಹಿಕ ಶ್ರೀ ಮಹಾಲಕ್ಷ್ಮಿ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮದ ಪ್ರಧಾನ ಉಪನ್ಯಾಸ ನೀಡುತ್ತಾ ಭಾರತವು 6,46,000 ಹಳ್ಳಿಗಳನ್ನು ಹೊಂದಿರುವ ದೇಶವಾಗಿದ್ದು ದೇಶದ ಶೇಕಡಾ 70 ರಷ್ಟು ಜನ ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಆದಲ್ಲಿ ಅದು ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ಜಿಡಿಪಿ ಅಂದರೆ ನಿವ್ವಳ ಆಂತರಿಕ ಉತ್ಪಾದನೆಗೆ ಏರಿಕೆಗೂ ಸಹಕಾರಿಯಾಗಬಲ್ಲದು, ಗ್ರಾಮೀಣ ಮಹಿಳೆಯರು ಸಹ ಆರ್ಥಿಕ ಸ್ವಾವಲಂಬಿಗಳಾಗಿ ಸಂಘಟನಾತ್ಮಕವಾಗಿ ಚಟುವಟಿಕೆಗಳನ್ನು ನಡೆಸಲು ಪೂರಕವಾಗಿ ಸಾಮೂಹಿಕವಾದ ಧಾರ್ಮಿಕ ಆಚರಣೆಗಳು ಸಹ ಸಹಕಾರಿಯಾಗುತ್ತದೆ, ಸಾಮೂಹಿಕವಾದ ಸತ್ಕಾರ್ಯಗಳಲ್ಲಿ ತೊಡಗಿಕೊಂಡಾಗ ‘ನಾನು’ ಎನ್ನುವ ಅಹಂಕಾರ, ಅಹಂ ಭಾವ ದೂರಾಗಿ ‘ನಾವು’ ಎನ್ನುವ ಹೃದಯ ವೈಶಾಲ್ಯತೆ ಹಾಗೂ ಐಕ್ಯತೆ ಸಾಕಾರವಾಗುತ್ತದೆ ಎಂಬುದನ್ನು ಸ್ವಾರಸ್ಯಕರ ಕಥಾ ಉದಾಹರಣೆಯ ಮೂಲಕ ಎಚ್ ಬಿ ಮಂಜುನಾಥ್ ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾವಣಗೆರೆಯ ಭಗವಾನ್ ಮಹಾವೀರ ಜೈನ ಹಾಸ್ಪಿಟಲ್ ನ ಟ್ರಸ್ಟಿಗಳಲ್ಲೊಬ್ಬರಾದ ಜಯ ಚಂದ್ ಜೈನ್ ರವರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ, ವೈದ್ಯರ ಸಲಹೆ ಹಾಗೂ ಮಾಹಿತಿಗಳನ್ನು ಪಡೆಯಬೇಕಾದ ಮಹತ್ವ ವಿವರಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟಿನ ಯೋಜನಾಧಿಕಾರಿ ಬಿ ಶ್ರೀನಿವಾಸ್ ರವರು ಧರ್ಮಸ್ಥಳ ಟ್ರಸ್ಟಿನ ವತಿಯಿಂದ ಗ್ರಾಮೀಣ ಜನತೆಗೆ ಒದಗಿ ಬರುವ ಅನೇಕ ಯೋಜನೆಗಳ ಬಗ್ಗೆ ಅಂಕಿ ಅಂಶಗಳ ಸಹಿತ ವಿವರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಹಾಯಕ ಕೃಷಿ ನಿರ್ದೇಶಕ ಡಿ ಎಂ ಶ್ರೀಧರಮೂರ್ತಿ, ಜಿಲ್ಲಾ ಜನಜಾಗ್ರತಿ ವೇದಿಕೆ ಸದಸ್ಯರುಗುಳಾದ ಗೌಡರ ಚೆನ್ನಬಸಪ್ಪ, ಎಸ್ ಟಿ ಕುಸುಮ ಶ್ರೇಷ್ಠಿ, ಕಡ್ಲೆಬಾಳು ಗ್ರಾಮ ಪಂಚಾಯಿತಿ ಸದಸ್ಯ ರಾಮಣ್ಣ, ಡಾ, ಅರ್ಜುನ್ ಜಿ ಎನ್ ಮುಂತಾದವರು ಮಾತುಗಳನ್ನಾಡಿದರು.

ಕಡ್ಲೆಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಅಕ್ಕಮ್ಮ ಪರಮೇಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಪ್ರೇಮಲೀಲಾ, ಶಾಲಾ ಮುಖ್ಯೋಪಾಧ್ಯಾಯನಿ ಜ್ಯೋತಿ ಮೇಡಂ, ಡಾ. ಉಪೇಂದ್ರ, ಬಿ ಕೆ ಪರಶುರಾಮಪ್ಪ, ಚಂದ್ರಶೇಖರ್, ಲಿಂಗರಾಜ್,ಬೂದಾಳು ಒಕ್ಕೂಟದ ಸುಶೀಲಮ್ಮ,ಹೊಸ ಕಡ್ಲೆಬಾಳು ಒಕ್ಕೂಟದ ಮಾಲತಿ, ಸೌಂಡ್ ಸಿಸ್ಟಮ್ ರಾಘ ವೇಂದ್ರ, ಅರ್ಚಕ ಉದಯ್ ಭಾರಧ್ವಾಜ್ ಮುಂತಾದವರು ಉಪಸ್ಥಿತರಿದ್ದು ಪ್ರವೀಣ್, ಉಮಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಕುಮಾರಿ ಮಾನಸ ಹಾಡಿದರು.

Shri Kshetra Dharmasthala Rural Development  ಸ್ವಾಗತವನ್ನು ಟ್ರಸ್ಟಿನ ಮೇಲ್ವಿಚಾರಕಿ ಶ್ರೀಮತಿ ಎಂ ಸಿ ಉಮಾ ಕೋರಿದರು. ಕಡ್ಲೆಬಾಳು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಾರ್ಯಕ್ರಮ ನೆರವೇರಿತು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Priyanka Gandhi ಕೇರಳ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅತ್ಯಧಿಕ ಮತಗಳಿಂದ ಆಯ್ಕೆ

Priyanka Gandhi ಪ್ರಿಯಾಂಕಾ ಗಾಂಧಿ ವಾದ್ರಾ 4,10,931 ಮತಗಳ ಅಂತರದಿಂದ ಗೆದ್ದಿದ್ದಾರೆ,...

SP Mithun Kumar ಮದ್ಯವರ್ಜನ ಶಿಬಿರ ಚಾಲನೆ, ಸಮಾಜಕ್ಕೆ ಹೆಚ್ಚು ಉಪಯುಕ್ತ- ಎಸ್.ಪಿ .ಮಿಥುನ್ ಕುಮಾರ್

SP Mithun Kumar ಶಿವಮೊಗ್ಗ,ನ.22 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ...

Kuvempu Birthday ಕುವೆಂಪು ಜನ್ಮದಿನದ ವಿಶೇಷ ಷಿಕಾರಿಪುರದಲ್ಲಿ ನಾಟಕ ಸ್ಪರ್ಧೆ

Kuvempu Birthday ಸಹ್ಯಾದ್ರಿ ರಂಗತರಂಗ ನಾಟಕ ಸ್ಪರ್ಧೆ ಶಿವಮೊಗ್ಗ ನಗರದ ಸಹಾದ್ರಿ...

Dargah Shah Aleem Deewan ಶಿವಮೊಗ್ಗದ ದಿವಾನ್ ಭಾಬಾ ದರ್ಗಾದಲ್ಲಿ ನ.24 ರಿಂದ 26 ವರೆಗೆ ಉರುಸ್

Dargah Shah Aleem Deewan ಶಿವಮೊಗ್ಗದ ಹಜ್ರತ್ ಸೈಯದ್ ಶಾ ಅಲೀಮ್...