Aam Admi Party ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಹೋಬಳಿಯಲ್ಲಿ ಮಳೆಯ ಕೊರತೆಯಿಂದ ಅಪಾರ ಬೆಳೆ ನೆಲೆಕಚ್ಚಿರುವ ಪರಿಣಾಮ ಅಂಬಳೆ ಸೇರಿದಂತೆ ಚಿಕ್ಕಮಗಳೂರು ತಾಲ್ಲೂಕು ಬರಪೀಡಿತ ಪ್ರದೇಶ ವೆಂದು ಘೋಷಣೆ ಮಾಡಬೇಕು ಎಂದು ಆಮ್‌ಆದ್ಮಿ ಪಕ್ಷವು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಗುರುವಾರ ಮನವಿ ಸಲ್ಲಿಸಿದ ಎಎಪಿ ಮುಖಂಡರುಗಳು ತಾಲ್ಲೂಕಿನಲ್ಲಿ ಬಹುತೇಕ ಬೆಳೆಗಳು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗದ ಜೀವನ ಚಿಂತಾಜನಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಎಎಪಿ ಜಿಲ್ಲಾಧ್ಯಕ್ಷ ಲಿಂಗರಾಧ್ಯ ತಾಲ್ಲೂಕಿನಲ್ಲಿ ಸಮರ್ಪಕ ಮಳೆಯಾಗದೇ ರೈತರು ಕಂಗಲಾಗಿದ್ದಾರೆ. ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಸಂಭವಿಸುವ ಹಿನ್ನೆಲೆಯಲ್ಲಿ ತ್ವರಿತವಾಗಿ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದರು.
ಈಗಾಗಲೇ ಕಾಂಗ್ರೆಸ್ ಪಕ್ಷದ ರಾಜ್ಯಸರ್ಕಾರ ಯಾವುದೇ ಅಭಿವೃದ್ದಿ ಕೈಗೊಳ್ಳುತ್ತಿಲ್ಲ. ಕೇವಲ ಬೆಳಗಾವಿ ಅಧಿ ವೇಶನ ವ್ಯರ್ಥ ಖರ್ಚುವೆಸಗಿ ಶಾಸಕರುಗಳಿಗೆ ಐಶಾರಾಮಿ ಹೋಟೆಲ್ ಹಾಗೂ ಓಡಾಟಕ್ಕೆ ವಿಮಾನ ಪ್ರಯಾಣದ ವ್ಯವಸ್ಥೆ ಕಲ್ಪಿಸುತ್ತಿರುವುದು ಅವಶ್ಯಕತೆಯಿದೆ ಎಂದು ಪ್ರಶ್ನಿಸಿದರು.
Aam Admi Party ಎಎಪಿ ಕಾರ್ಯದರ್ಶಿ ಎಂ.ಪಿ.ಈರೇಗೌಡ ಮಾತನಾಡಿ ಬರಪೀಡಿತ ಪ್ರದೇಶಗಳನ್ನು ಸರಿಯದ ವ್ಶೆಜ್ಞಾನಿಕ ಸಮೀಕ್ಷೆ ಘೋಷಿಸಬೇಕು. ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಸರ್ವ ಪಕ್ಷಗಳ ನಿಯೋಗವನ್ನು ದೆಹಲಿಗೆ ಕರೆದೊಯ್ಯಬೇಕು ಎಂದು ಒತ್ತಾಯಿಸಿದರು.
ಆ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆಯಿಂದ ಕಂಗೆಟ್ಟಿರುವ ಅರ್ಹ ಫಲಾನುಭವಿ ರೈತರಿಗೆ ಎಕರೆ 25 ಸಾವಿರ ಹಾಗೂ ಜಾನುವಾರು ಪೋಷಣೆಗೆ ತಲಾ 05 ಸಾವಿರ ಪರಿಹಾರ ಘೋಷಿಸಬೇಕು, ಗ್ರಾಮೀಣ ಪ್ರದೇಶದವರಿಗೆ ಉದ್ಯೋಗ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಎಪಿ ಮಾಧ್ಯಮ ಪ್ರತಿನಿಧಿ ಡಾ|| ಕೆ.ಸುಂದರಗೌಡ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಜಮೀಲ್ ಅಹಮದ್, ಮುಖಂಡರಾದ ಹರ್ಷನ್, ಪುಟ್ಟರಾಜು ಹಾಜರಿದ್ದರು.