Aam Admi Party ಬ್ಯಾಂಕಿನ ಸಿಬ್ಬಂದಿಗಳೇ ಸಾರ್ವಜನಿಕರ ಬಂಗಾರವನ್ನು ನಕಲಿಗೊಳಿಸಿ ವಂಚಿಸಿರುವ ಪ್ರಕರಣ ಸಮಾಜದಲ್ಲಿ ತಲೆತಗ್ಗಿಸುವಂತೆ ಮಾಡಿದೆ ಎಂದು ಜಿಲ್ಲಾ ಆಮ್ ಆದ್ಮಿ ಮಾಧ್ಯಮ ಪ್ರತಿನಿಧಿ ಡಾ|| ಕೆ.ಸುಂದರಗೌಡ ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ನ್ಯಾಯ, ಶಿಸ್ತನ್ನು ಪರಿಪಾಲಿಸುವ ಬ್ಯಾಂಕ್ ಸಿಬ್ಬಂದಿಗಳೇ ಸಾರ್ವಜನಿಕರ ಬಂಗಾರದ ಒಡವೆಗಳನ್ನು ನಕಲಿಗೊಳಿಸಿ ಭಾರೀ ಭ್ರಷ್ಟಚಾರದಲ್ಲಿ ತೊಡಗಿರುವುದು ಪ್ರಜಾಪ್ರಭುತ್ವದ ಸರ್ವನಾಶದ ಸಂಕೇತ ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಸೆಂಟ್ರಲ್ ಬ್ಯಾಂಕ್ ಆಫ್ ಬರೋಡ್‌ದಲ್ಲಿ ಸಾವಿರಾರು ಗ್ರಾಹಕರು ಖಾತೆಗೆ ಹಣ ಹಾಗೂ ಬಂಗಾರ ಇರಿಸುತ್ತಾರೆ. ಆದರೆ ಇದೇ ಬ್ಯಾಂಕಿನ ಸಿಬ್ಬಂದಿಗಳು 141 ಗ್ರಾಹಕರ ಅಸಲಿ ಚಿನ್ನವನ್ನು ನಕಲಿ ಮಾಡಿ ಗ್ರಾಹಕರಿಗೆ ದ್ರೋಹವೆಸಗಿರುವುದು ಖಂಡನೀಯ ಎಂದು ಹೇಳಿದ್ದಾರೆ.
ನೂರಾರು ಗ್ರಾಹಕರು ಬದುಕು ಕಟ್ಟಿಕೊಳ್ಳುವ ಸಲುವಾಗಿ ಬ್ಯಾಂಕ್‌ನಲ್ಲಿ ಚಿನ್ನದ ಮೇಲೆ ಸಾಲ ಪಡೆಯುತ್ತಾರೆ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ಇಂತಹ ಪರಿಸ್ಥಿತಿಯನ್ನು ಗ್ರಾಹಕರು ಯಾವ ರೀತಿಯಲ್ಲಿ ಬಗೆಹರಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ ಎಂದಿದ್ದಾರೆ.
ಸಾರ್ವಜನಿಕರು ಸರ್ಕಾರ ಮತ್ತು ಅಧಿಕಾರಿಗಳ ಮೇಲಿರುವ ನಂಬಿಕೆ ಭ್ರಷ್ಟಾಚಾರದ ಮೂಲಕ ಮಹಾಮಾರಿಯ ಬೆಳವಣಗೆಯಿಂದ ಹಂತ ಹಂತವಾಗಿ ಕುಸಿಯುತ್ತಿದೆ ಎಂದ ಅವರು ಇದರಿಂದ ಸಾಲಸೋಲ ಮಾಡಿ ಜೀವನ ರೂಪಿಸಿಕೊಳ್ಳುವ ಗ್ರಾಹಕರು ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ತಲುಪಬೇಕಾಗುತ್ತದೆ ಎಂದು ಹೇಳಿದ್ದಾರೆ.
Aam Admi Party ಸರ್ಕಾರವು ಕೂಡಲೇ ಐದು ಕೋಟಿ ವಂಚನೆವೆಸಗಿರುವ ಬ್ಯಾಂಕಿನ ಸಿಬ್ಬಂದಿಗಳ ನಾಗರೀಕ ಹಕ್ಕುಗಳನ್ನು ನಿರಾಕರಣೆ, ಆರೋಗ್ಯ ಮತ್ತು ವಿದ್ಯಾಭ್ಯಾಸದ ಹಕ್ಕು ಕಸಿದುಕೊಂಡು ಕಠಿಣ ಶಿಕ್ಷೆಗೆ ಗುರಿಪಡಿಸದಿದ್ದಲ್ಲಿ ಅವ್ಯವಹಾರ ವೇ ಸಮಾಜದ ಮಾರಕಶಕ್ತಿಯಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.