Thursday, November 28, 2024
Thursday, November 28, 2024

AIT College Chikkamagaluru ವಾಯು ಮಾಲಿನ್ಯದ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮಾನವ,ಪಶುಪಕ್ಷಿಗಳ ಉಳಿವಿಗೆ ಅಪಾಯ-ಪ್ರಹ್ಲಾದ್

Date:

AIT College Chikkamagaluru ವಾಹನಗಳಿಂದ ಹೊರ ಸೂಸುತ್ತಿರುವ ವಿಷಕಾರಿ ಅನಿಲದಿಂದಾಗಿ ವಾಯುಮಾಲಿನ್ಯ ಉಳಿದೆವಲ್ಲ ಕಾರಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಅಧೀಕ್ಷಕ ಎಲ್.ಪ್ರಹ್ಲಾದ್ ಹೇಳಿದರು.

ಚಿಕ್ಕಮಗಳೂರು ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ಏರ್ಪಡಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿನ ಅಧ್ಯಯನದ ಪ್ರಕಾರ ಶೇ.27 ರಷ್ಟು ವಾಹನಗಳಿಂದ, ಶೇ.51 ಕಾರ್ಖಾನೆಗಳಿಂದ, ಶೇ.12 ರಷ್ಟು ಸುಡಲ್ಪಡುತ್ತಿರುವ ವಸ್ತುಗಳಿಂದ ಹಾಗೂ ಶೇ.5ರಷ್ಟು ಇತರೆ ಕಾರಣಗಳಿಂದ ವಾಯುಮಾಲಿನ್ಯ ಉಂಟಾಗುತ್ತಿರು ಪರಿಣಾಮ ಜನಸಾಮಾನ್ಯರ ಬದುಕಿನ ಆರೋಗ್ಯದ ಮೇಲೆ ಹಲವಾರು ತೊಂದರೆಗಳು ಎದುರಾಗುತ್ತಿವೆ ಎಂದು ತಿಳಿಸಿದರು.

ವಾಹನಗಳಿಂದ ಹೊರಸೂಸುವ ವಿಷಕಾರಿ ಹೊಗೆ, ವಾಹನದ ವೇಗ ಮತ್ತು ಯಂತ್ರಕ್ಕೆ ಬಳಸಲಾಗುವ ಇಂಧನಗಳ ಸತ್ವ ಇತ್ಯಾದಿಗಳ ಬಗ್ಗೆ ತೀವ್ರವಾದ ಎಚ್ಚರಿಕೆಯನ್ನು ವಹಿಸಬೇಕಿದೆ. ಒಂದು ವೇಳೆ ಎಚ್ಚೆತ್ತುಕೊಳ್ಳದಿ ದ್ದರೆ, ಮಾನವನನ್ನು ಒಳಗೊಂಡು ಪ್ರಾಣ , ಪಕ್ಷಿಗಳು ಸೇರಿದಂತೆ ಇಡೀ ಜೀವಜಂತುಗಳಿಗೆ ಅಪಾಯ ಉಂಟಾಗು ವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಹಾನಿಕಾರಕ ಹೊಗೆ ಮನುಷ್ಯನ ಆರೋಗ್ಯ ಮತ್ತು ಪರಸರಿರದ ಮೇಲೂ ಅಗಾಧ ಪರಿಣಾಮ ಉಂಟು ಮಾಡುತ್ತಿದೆ. ಇಂತಹ ಕಲುಷಿತ ಆಮ್ಲಜನಕ ಸೇವನೆಯಿಂದ ಕಾನ್ಯರ್, ಉಸಿರಾಟ ಸಂಬಂಧಿ ಆರೋಗ್ಯ ಸಮಸ್ಯೆ, ಹೃದಯ ಹಾಗೂ ರಕ್ತನಾಳದ ವ್ಯವಸ್ಥೆ ಮೇಲೆ ತೀವ್ರವಾದ ಪರಿಣಾಮ ಬೀರಿ ಅಸ್ತಮಾ, ಶ್ವಾಸಕೋಶ, ದೃಷಿಹೀನತೆ ಅಗಾಧವಾದ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.

ವಾಹನ ಮತ್ತು ಕಾರ್ಖಾನೆಗಳ ವಾಯುಮಾಲಿನ್ಯದಿಂದ ಸಸ್ಯಗಳ ಉಸಿರಾಟ ಕ್ರಿಯೆಗೂ ಅಡ್ಡಿ ಉಂಟಾಗುತ್ತಿ ರುವ ಹಿನ್ನೆಲೆಯಲ್ಲಿ ಭೂಮಿಯ ಓಝೋನ್ ಪದರವು ತನ್ನ ಸಾರವನ್ನು ಕಳೆದುಕೊಳ್ಳುತ್ತಿದೆ. ಇದರ ಪರಿಣಾಮ ಸೂರ್ಯ ತೀಕ್ಣವಾದ ಅತಿನೇರಳೆ ಕಿರಣಗಳು ಭೂಮಿಗೆ ಬೀಳುವುದರಿಂದ ಜೀವರಾಶಿಗಳ ಚರ್ಮಕ್ಕೆ ಹಲವು ರೀತಿ ಯ ಅನಾರೋಗ್ಯ ಸಮಸ್ಯೆ ಉಲ್ಬಣ ಸುತ್ತಿದೆ ಎಂದು ಹೇಳಿದರು.

ಆ ನಿಟ್ಟಿನಲ್ಲಿ ಸಾರ್ವಜನಿಕರು ವಾಹನಗಳ ಅವಶ್ಯಕತೆಗನುಗಣವಾಗಿ ಸಂಚರಿಸಲು ಮುಂದಾಗಬೇಕು. ಸಕಾಲ ಕ್ಕೆ ವಾಹನಗಳ ಹೊಗೆ ತಪಾಸಣೆ, ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಸಿಗ್ನಲ್‌ಗಳಲ್ಲಿ ವಾಹನವನ್ನು ನಿಲ್ಲಿಸಿದ ಸಂದರ್ಭದಲ್ಲಿ ಆಫ್ ಮಾಡಬೇಕು. ಹಳೆಯದಾದ ವಾಹನಗಳನ್ನು ಬಳಸಬಾರದು. ಗುಣಮಟ್ಟದ ಇಂಧನ ವನ್ನೇ ಬಳಸುವ ಜೊತೆಗೆ ಹೆಚ್ಚು ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಕೇಶ್‌ಕುಮಾರ್ ಮಾತನಾಡಿ ಸಾರ್ವಜನಿಕರಲ್ಲಿ ಸಾರಿಗೆ ನಿಯಮ ಹಾಗೂ ವಾಯುಮಾಲಿನ್ಯ ಅರಿವು ಮೂಡಿಸುವ ನಿಟ್ಟಿನಲ್ಲಿ ನವಂಬರ್ ತಿಂಗಳಾತ್ಯದವರೆಗೂ ಜಿಲ್ಲೆಯ ವಿವಿಧ ತಾಲ್ಲೂಕು ಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಿಂದ ವಾಹನಗಳ ಹೊಗೆಯಿಂದಾಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲು ಇಲಾಖೆಯಿಂದ ಕ್ರಮವಹಿಸಲಾಗಿದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಟಿ ಕಾಲೇಜು ಪ್ರಾಂಶುಪಾಲ ಸಿ.ಟಿ.ಜಯದೇವ್ ವಿದ್ಯಾ ರ್ಥಿ ಜೀವನದಲ್ಲಿ ಪರಿಸರ ಸುರಕ್ಷತೆ ಬಗ್ಗೆ ಕಾಳಜಿ ವಹಿಸುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಮುಂದಿನ ಜನಾಂಗಕ್ಕೆ ಪ್ಲಾಸ್ಟಿಕ್ ಮುಕ್ತ, ಸಂಪತ್ಪರಿತ ನಾಡನ್ನು ಕೊಂಡೊಯ್ಯಲು ಸಾಧ್ಯ ಎಂದ ಅವರು ಇದೀಗ ಚಿಕ್ಕಮಗಳೂ ರು ಶುದ್ಧಗಾಳಿಗೆ ಎರಡನೇ ಸ್ಥಾನದಲ್ಲಿದ್ದು ಹಾಳುಗೆಡವದೇ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

AIT College Chikkamagaluru ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ತಾಂತ್ರಿಯ ಅಭಿಯಂತ ರಮೇಶ್, ತೆರೆಯಸಿರಿ ಕಲಾ ಪ್ರತಿಷ್ಟಾನದ ನಿರ್ದೇಶಕ ಪ್ರತಿಭಾನಂದ ಕುಮಾರ್, ಕೆ.ಎಸ್.ಆರ್.ಟಿ.ಸಿ ಚಾಲಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Rangayana ನ.30 ರಂದು ರಂಗಾಯಣದಲ್ಲಿ ಏಕಲವ್ಯ ನಾಟಕ ಪ್ರದರ್ಶನ

Shivamogga Rangayana ಶಿವಮೊಗ್ಗ ರಂಗಾಯಣವು ನ.30 ರಂದು ಸಂಜೆ 6.30 ಕ್ಕೆ...

MESCOM ನ. 29 ರಂದು ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ನಗರ ಉಪವಿಭಾಗ-1ರ ಘಟಕ-3ರ ವ್ಯಾಪ್ತಿಯಲ್ಲಿ ತ್ಯಾವರೆಚಟ್ನಹಳ್ಳಿ, ಈಶ್ವರ್...

National Adoption Month ಪೋಷಕತ್ವ ಯೋಜನೆಯಡಿ ಮಗು ಪಡೆಯಲು ಪೋಷಕರಿಂದ ಅರ್ಜಿ ಆಹ್ವಾನ

National Adoption Month ರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ಪೋಷಕತ್ವ ಯೋಜನೆಯಡಿ...

Shivamogga City Corporation ಪಾಲಿಕೆ ಆಯ-ವ್ಯಯ ಪೂರ್ವಭಾವಿ ಸಭೆ: ಡಿ.04ಕ್ಕೆ ಮುಂದೂಡಿಕೆ

Shivamogga City Corporation ನ.30 ರಂದು ಬೆಳಗ್ಗೆ 11.30ಕ್ಕೆ ಮಹಾನಗರ ಪಾಲಿಕೆ...