Saturday, November 23, 2024
Saturday, November 23, 2024

Jalapatha movie 50 ನೇ ದಿನ ಭೋರೈಸಿ ಧುಮುಕಿದ”ಜಲಪಾತ” ಸಿನಿಮಾ

Date:

Jalapatha movie ಇಂದಿಗೆ ಜಲಪಾತ ಚಿತ್ರವು 50 ದಿನಗಳನ್ನು ಪೂರೈಸಿದೆ. ಇಂದಿನ ಸಂದರ್ಭ ದಲ್ಲಿ ಒಂದು ಸಿನಿಮಾ 3 ದಿನ ಅಥವಾ ಒಂದು ವಾರ ಓಡಿದರೆ ಅದೇ ದೊಡ್ಡ ಸಾಧನೆ ಎಂಬಂತಾಗಿದೆ. ಜನ ಥಿಯೇಟರ್ ಕಡೆ ಮುಖಮಾಡುವುದೇ ತೀರಾ ಅಪರೂಪಕ್ಕೊಮ್ಮೆ. ಆಗಾಗ ಕೆಲವು ಸಿನಿಮಾಗಳು ಸದ್ದು ಮಾಡುವುದುಂಟು. ಇಂಥಾ ಸನ್ನಿವೇಶದಲ್ಲಿ ಅಪ್ಪಟ ಮಲೆನಾಡಿಗರೇ ಸೇರಿ ತಯಾರಿಸಿದ ಸಂದೇಶಾತ್ಮಕ ಚಿತ್ರ ವೊಂದು ಯಾವುದೇ ಇಂಡಸ್ಟ್ರೀ ಸೌಂಡ್ ಇಲ್ಲದೇ ತಣ್ಣಗೆ 50 ದಿನಕ್ಕೆ ಕಾಲಿಟ್ಟು ಸಿನಿ ಪಂಡಿತರ ಹುಬ್ಬೇರುವಂತೆ ಯಶಸ್ಸು ದಾಖಲಿಸಿದೆ. ಅದುವೇ ಪರಿಸರ ಕಾಳಜಿಯ , ಮಲೆನಾಡ ಭಾಷೆ , ಸಂಸ್ಕೃತಿ ಮತ್ತು ಪ್ರಕೃತಿಯನ್ನು ಆಧರಿಸಿದ ಕಥಾಚಿತ್ರ ಜಲಪಾತ.

ಇಂಡಸ್ ಹರ್ಬ್ಸ್ ನ ರವೀಂದ್ರ ತುಂಬರಮನೆ ವಿಷಯ ವಿನ್ಯಾಸ ಗೈದು , ಮಲೆನಾಡ ಪ್ರಸಿದ್ಧ ರಂಗಕರ್ಮಿ ರಮೇಶ್ ಬೇಗಾರ್ ರಚಿಸಿ , ಆಕ್ಷನ್ – ಕಟ್ ಹೇಳಿದ ಜಲಪಾತ ದಲ್ಲಿ ಯಾವುದೇ ಸ್ಟಾರ್ ಗಳಿರಲಿಲ್ಲ. ಕಲಾವಿದರು – ತಂತ್ರಜ್ಞರೆಲ್ಲರೂ ಮಲೆನಾಡ ಶೃಂಗೇರಿ , ತೀರ್ಥಹಳ್ಳಿ ಭಾಗದವರು.

ಇಂಥ ಹೊಸಬರ ಪ್ರಯೋಗಕ್ಕೆ ಬೆಂಗಾವಲಾಗಿ ನಿಂತು ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸ್ಯಾಂಡಲ್ ವುಡ್ ಘಟೋದ್ಗಜ ಪ್ರಮೋದ್ ಶೆಟ್ಟಿ ಅವರು ಮಾತ್ರ. ಪ್ರಮೋದ್ ಗೆಟಪ್ ನಿಂದ ಹಿಡಿದು ನಟನೆ ವರೆಗೆ ವಿಶೇಷತೆ ಮೆರೆದ ಜಲಪಾತ ದ ನಾಯಕ ನಾಯಕಿಯರಾಗಿ ಪದವಿ ಪೂರ್ವ ಖ್ಯಾತಿಯ ರಜನೀಶ್ ಮತ್ತು ಮಲೆನಾಡ ಪ್ರತಿಭಾವಂತ ಬೆಡಗಿ ನಾಗಶ್ರೀ ಬೇಗಾರ್ ಕಾಣಿಸಿಕೊಂಡಿದ್ದರು.

ಜೀ ಕನ್ನಡ ದ ಸರಿಗಮಪ ಖ್ಯಾತಿಯ ಸಾದ್ವಿನಿ ಕೊಪ್ಪ ಸಂಗೀತ ನಿರ್ದೇಶನ ನೀಡಿದ್ದು, 3 ವಿಭಿನ್ನ ಜಾನರಾದ ಹಾಡುಗಳು ಅಪಾರ ಜನಪ್ರಿಯತೆ ಪಡೆದಿದೆ. ಅದರಲ್ಲೂ ಭಾವಗೀತೆಯ ಗುಣವುಳ್ಳ ” ಎಲ್ಲಿ ಹೋದನೇ ಸಖಿ ” ಮತ್ತು ವಿಜಯಪ್ರಕಾಶ್ ಧ್ವನಿಯ ಟೈಟಲ್ ಟ್ರಾಕ್ ಎಲ್ಲರ ಗಮನ ಸೆಳೆದಿದೆ.

ವಿನು ಮನಸು ಹಿನ್ನೆಲೆ ಸಂಗೀತ ಒದಗಿಸಿದ್ದು ಚಂಡೆ , ಕೊಳಲಿನಂಥ ದೇಸೀ ವಾದ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿ ಹೊಸ ರೂಪ ನೀಡಿದ್ದಾರೆ. ಶಶೀರ ಶೃಂಗೇರಿ – ಛಾಯಾಗ್ರಹಣ , ಅವಿನಾಶ್ ಶೃಂಗೇರಿ – ಸಂಕಲನ , ಅಭಿಷೇಕ್ ಹೆಬ್ಬಾರ್ ಇವರ ಕಲಾ ನಿರ್ದೇಶನವನ್ನು ಜಲಪಾತ ಹೊಂದಿದ್ದು ಮಲೆನಾಡ ಹುಡುಗರು ಕಟ್ಟಿದ ಸೃಜನಾತ್ಮಕ ಸಿನಿಮಾ ಜಲಪಾತ ಬೆಂಗಳೂರು ಮಾತ್ರವಲ್ಲದೇ ಚಿಕ್ಕಮಗಳೂರು , ಕೊಪ್ಪದಂಥ ಬಿ ಮತ್ತು ಸಿ ಕೇಂದ್ರಗಳಲ್ಲೂ ಯಶಸ್ಸಿನ ದಾಖಲೆ ಬರೆದಿದೆ. ತನ್ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಮಲೆನಾಡಿನ ಪ್ರಾದೇಶಿಕತೆ ಯ ಆಧಾರದಲ್ಲಿ ಒಂದು ಸಂತುಲಿತ ತಂಡ ತನ್ನ ಹೆಜ್ಜೆ ಗುರುತು ಮೂಡಿಸಿರುವುದು ಶ್ಲಾಘನೀಯವಾಗಿದೆ.

ಈಗಾಗಲೇ, ಗಿರೀಶ್ ಕಾಸರವಳ್ಳಿ , ಪಿ. ಶೇಷಾದ್ರಿ , ಕೂಡ್ಲು ರಾಮಕೃಷ್ಣ ರಂಥ ನಿರ್ದೇಶಕರು , ನಾಗೇಶ್ ಹೆಗ್ಡೆ , ಎಂ ಆರ್ ಕಮಲ , ಎಲ್ಲಪ್ಪ ರೆಡ್ಡಿ , ಮಮತಾ ಅರಸಿಕೆರೆ ಮೊದಲಾದ ಚಿಂತಕರೂ , ಬರಹಗಾರರೂ ಚಿತ್ರನೋಡಿರುವುದು ಒಂದು ವಿಶೇಷ.

ಹೀಗೆ ತನ್ನದೇ ಆದ ಶೈಲಿ ಯ ಮೇಕಿಂಗ್ , ಪ್ರಚಾರ ಮತ್ತು ಪ್ರದರ್ಶನದಲ್ಲಿ ಮೇಲುಗೈ ಸಾಧಿಸಿದ ಜಲಪಾತ ಇದೇ ನವಂಬರ್ 30 ಕ್ಕೆ 50 ದಿನ ಪೂರೈಸಿದೆ.

ಮಲೆನಾಡ ರಂಗ ಕಲಾವಿದರಾದ ರವಿಕುಮಾರ್ , ನಯನ , ರೇಖಾ ಪ್ರೇಂ ಕುಮಾರ್ , ನಟರಾಜ್ ರಾವ್ , ಎಂ ಆರ್ ಸುರೇಶ್ , ಚಿದಾನಂದ ಹೆಗ್ಗಾರ್ , ದತ್ತಾತ್ರಿ , ಪ್ರಶಾಂತ್ ಶೆಟ್ಟಿ , ಎಸ್ ಎನ್ ವಿಶ್ವನಾಥ್ , ಸ್ವಾತಿ , ಸುನೀತ ನವೀನ್, ವೈಶಾಲಿ ,ಚಂದ್ರಶೇಖರ ತುಂಬರಮನೆ , ಉಮೇಶ್ ಕಾಸರವಳ್ಳಿ , ಚಗತೆ ರಾಮದಾಸ್ , ಶ್ರೀ ಹರ್ಷ , ಪ್ರಸನ್ನ , ಚಗತೆ ಸಂತೋಷ್ , ಹರಿ ಪ್ರಸಾದ್ ವಿಜಯಲಕ್ಷ್ಮ್ಮೀ , ಸುಧಾಕರ ಶೆಟ್ಟಿ , ವಿಶ್ವನಾಥ್ ಶೆಟ್ಟಿ ಗಂಡಘಟ್ಟ , ಜ್ಯೋತಿ ಕಾಮತ್ ,ರಶ್ಮಿ ಹೇರ್ಳೆ , ರಾಧಾಕೃಷ್ಣ , ಕಾರ್ತಿಕ್ , ಕುಮಾರ್ ಕುಂಟಿಕಾನ ಮಠ , ದೀಪಕ್ , ವಿನಯ್ ,ರೂಪೇಶ್ , ರಮಂತ, ನಂದೀಪ್ , ಕೃಷ್ಣ ಮೂರ್ತಿ, ಶ್ರೀಮತಿ ಮೊದಲಾದವರು ಜಲಪಾತ ದ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಉದ್ದೇಶ ಈಡೇರಿದ ಸಾರ್ಥಕತೆ

  • ರವೀಂದ್ರ ತುಂಬರಮನೆ
    ಈ ಸಂದರ್ಭ ಜಲಪಾತ ದ ನಿರ್ಮಾಪಕ ರವೀಂದ್ರ ತುಂಬರಮನೆ ಮಾತನಾಡಿದ್ದು ಸಿನಿಮಾ ಮಾಡುವಾಗಲೇ ಇದು ಮನರಂಜನೆ ಜೊತೆಗೆ ಪರಿಸರದ ಚಿಂತನೆಯನ್ನು ಅರಿವಿನ ರೂಪದಲ್ಲಿ ಜನತೆಯಲ್ಲಿ ಹೊಸ ಯೋಚನೆ ಮೂಡಲೆಂದು ನಿರ್ಧರಿಸಿದ್ದೆವು. ಅಂತೆಯೇ ನಡೆದು ಸಿನಿಮಾ ಹೊಸ ವಿಕ್ರಮವನ್ನೇ ಸಾಧಿಸಿದೆ. ನಾವು ವಿದ್ಯಾರ್ಥಿಗಳು ನೋಡಲೆಂದು ಅಪೇಕ್ಷಿಸಿದ್ದೆವು. ತೀರ್ಥಹಳ್ಳಿ ಯಲ್ಲಿ ಶುರುವಾದ ಈ ಆಂದೋಲನ ಈಗ ಪ್ರದರ್ಶನ ಇರುವ ಊರುಗಳಲ್ಲಿ ಕೂಡಾ ಸ್ವಯಂಪ್ರೇರಿತರಾಗಿ ಎಲ್ಲಾ ವಯೋಮಾನದ ವರೂ ಸಿನಿಮಾ ನೋಡುತ್ತಿದ್ದಾರೆ ಎಂದಿದ್ದಾರೆ. ಇದು ಮಲೆನಾಡ ಗೆಲುವು
    • ನಿರ್ದೇಶಕ ರಮೇಶ್ ಬೇಗಾರ್
    • Jalapatha movie ಈ ಚಿತ್ರದ ಮೂಲಕ ಮಲೆನಾಡ ಸಮಸ್ಯೆ ಮತ್ತು ಅದಕ್ಕೆ ಪರಿಹಾರವನ್ನು ಸೂಚಿಸುವ ಪ್ರಯತ್ನ ಮಾಡಿದ್ದೇವೆ. ಪೂರ್ಣ ಪ್ರಮಾಣದ ಮಲೆನಾಡ ಭಾಷೆ ಯನ್ನು ಚಿತ್ರದಲ್ಲಿ ಬಳಸಿದ್ದು ಅಜ್ಞಾತವಾಗಿ ಉಳಿದಿದ್ದ ಒಂದು ಪ್ರದೇಶದ ಸಾಂಸ್ಕೃತಿಕ ಬದುಕನ್ನು ಈ ಚಿತ್ರದ ಮೂಲಕ ಲೋಕಕ್ಕೆ ನೀಡಿದ ಹೆಮ್ಮೆ ನಮ್ಮದು. ಇಂಥಾ ವಿಷಯಾಧಾರಿತ ಸಿನಿಮಾವನ್ನು ಮನರಂಜನೆಯ ದಾರಿಯಲ್ಲಿ ಕರೆದೊಯ್ಯುವುದು ಒಂದು ಸವಾಲು. ಅದರಲ್ಲಿ ಗೆದ್ದ ಕುಶಿ ನಮ್ಮದು ಎಂಬುದು ರಮೇಶ್ ಬೇಗಾರ್ ಅಭಿಪ್ರಾಯ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...