Monday, November 25, 2024
Monday, November 25, 2024

CM Siddharamaih ಸಂವಿಧಾನದ ರಕ್ಷಣೆ ಎಲ್ಲಾ ಮಹನೀಯರಿಗೆ ಸಲ್ಲಿಸುವ ಗೌರವ- ಸಿದ್ಧರಾಮಯ್ಯ

Date:

CM Siddharamaih ಮುಖ್ಯಮಂತ್ರಿ ಸಿದ್ದರಾಮಯ್ಯನವರು
ಅವರು ಸೋಷಿಯಲ್ ಜಸ್ಟೀಸ್ ಫೌಂಡೇಶನ್ ಮೈಸೂರು ಇವರ ವತಿಯಿಂದ ಆಯೋಜಿಸಿದ್ದ ಡಾ. ಹರೀಶ್ ಕುಮಾರ್ ಅವರ “ಆಧುನಿಕ ಭಾರತದ ನಿರ್ಮಾತೃ ಡಾ. ಬಾಬು ಜಗಜೀವನರಾಮ್ ಮತ್ತು
ಬಾಬೂಜಿ ಚಿತ್ರ ಸಂಪುಟ” ಕೃತಿಯನ್ನು ಬಿಡುಗಡೆಗೊಳಿಸಿ, ಮಾತನಾಡಿದರು.

ಜಗಜೀವನ್ ರಾಂ ಅವರು ದೇಶ ಕಂಡ ಅಪ್ರತಿಮ ದೇಶಪ್ರೇಮಿ, ಮುತ್ಸದಿ ರಾಜಕಾರಣಿ ಹಾಗೂ ಪ್ರಜಾಪ್ರಭುತ್ವವಾದಿ. ದೇಶಕ್ಕೆ ಸ್ವಾತಂತ್ರ್ಯ ಬರಬೇಕೆಂದು ಹೋರಾಟ ಮಾಡಿದ ಎಲ್ಲರಿಗೂ ಈ ಮುಂದೆ ಎಂಥ ದೇಶ ನಿರ್ಮಾಣವಾಗಬೇಕೆಂಬ ಕನಸಿತ್ತು. ಇದಕ್ಕೆ ಪೂರಕವಾದ ಸಂವಿಧಾನದ ರಚನಾ ಸಮಿತಿ ಅಧ್ಯಕ್ಷರಾಗಿ ಸೂಕ್ತ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರಚನೆ ಮಾಡಿದ್ದಾರೆ.

ಸಮಾಜದಲ್ಲಿ ಹಸಿವು, ಬಡತನ, ನಿರುದ್ಯೋಗ, ದಾರಿದ್ರ್ಯ, ಅನಕ್ಷರತೆ ಎಲ್ಲವೂ ತೊಲಗಿ, ಸಮಾನ ಅವಕಾಶಗಳಿರುವ ಸಮಸಮಾಜ ನಿರ್ಮಾಣವಾಗಬೇಕು. ಅದಕ್ಕಾಗಿಯೇ ಪ್ರಯತ್ನ ಮಾಡಿದರು.

ಸಂವಿಧಾನವನ್ನು ದುರ್ಬಲಗೊಳಿಸುವ ಶಕ್ತಿಗಳ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಣೆ ಮಾಡುವುದೇ ಎಲ್ಲಾ ಮಹನೀಯರಿಗೆ ಸಲ್ಲಿಸುವ ಗೌರವ ಎಂದರು.

ಇತಿಹಾಸ ತಿರುಚಿರುವುದನ್ನು ನಾವು ನೋಡಿದ್ದೇವೆ. ಮುಂದೆ ಏನಾಗಬೇಕೆಬುದನ್ನು ಚರ್ಚಿಸುವುದು ಉತ್ತಮ. ಅಂಬೇಡ್ಕರ್, ಗಾಂಧಿ, ನೆಹರು, ಜಗಜೀವನ್ ರಾಂ ಅವರು ಹೇಳಿದಂಥ ಭಾರತ ನಿರ್ಮಾಣವಾಗಬೇಕು. ನಮಗೆ ಅವಕಾಶ ಸಿಕ್ಕಿದಾಗ ಅಂಥ ಭಾರತ, ರಾಜ್ಯವನ್ನು ನಿರ್ಮಿಸಬೇಕು. ಆ ದಿಕ್ಕಿನಲ್ಲಿ ನಮ್ಮ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

CM Siddharamaih ಎಲ್ಲಾ ಸರ್ಕಾರಗಳ ಉದ್ದೇಶ ಆದೇ ಆಗಬೇಕು. ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವುದೇ ಸಂವಿಧಾನದ ಉದ್ದೇಶ. ಅದನ್ನು ಜಾರಿ ಮಾಡುವ ಪ್ರಯತ್ನ ನಮ್ಮದು. ಅನೇಕ ಶಕ್ತಿಗಳು ಅದಕ್ಕೆ ವಿರುದ್ಧವಾಗಿವೆ. ಅಂಥ ಶಕ್ತಿಗಳನ್ನು ವಿರುದ್ಧ ಹೋರಾಡುವ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

ಪಟ್ಟಭದ್ರ ಹಿತಾಸಕ್ತಿಗಳು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಅವರನ್ನು ಗುರುತಿಸಿ ಅವರಿಗೆ ಶಕ್ತಿ ಬಾರದಂತೆ ನೋಡಿಕೊಳ್ಳುವ ಕೆಲಸವಾಗಬೇಕು.
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು...

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...