Tuesday, November 26, 2024
Tuesday, November 26, 2024

Regional Transport ವಾಯು ಮಾಲಿನ್ಯ ಇಡೀ ವಿಶ್ವವನ್ನೇ ಆವರಿಸಿದೆ- ಪ್ರಹ್ಲಾದ್

Date:

Regional Transport ವಾಯುಮಾಲಿನ್ಯ ಕೇವಲ ರಾಜ್ಯ, ದೇಶವನಲ್ಲದೇ ಇಡೀ ವಿಶ್ವವನ್ನೇ ಆವರಿಸಿಕೊಂಡು ಕಲುಷಿತಗೊಳಿಸಿದ್ದು ಇದರಿಂದ ಮಾನವನಿಗೆ ಆಮ್ಲಜನಕ ಕೊರತೆಯುಂಟಾಗಿ ಆರೋಗ್ಯದ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಕಚೇರಿ ಮುಖ್ಯ ಅಧೀಕ್ಷಕ ಪ್ರಹ್ಲಾದ್ ಹೇಳಿದರು.

ಜ್ಯೋತಿನಗರ ಸಮೀಪ ಎಂ.ಇ.ಎಸ್.ಎಸ್.ಎಸ್.ಆರ್. ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಾಹನ ಹಾಗೂ ಕಾರ್ಖಾನೆಗಳಿಂದ ಹೆಚ್ಚು ವಾಯುಮಾಲಿನ್ಯ ಉಂಟಾಗಿ ಸಾರ್ವಜನಿ ಕರಿಗೆ ಅಸ್ತಮಾ, ಕೆಮ್ಮು ಸೇರಿದಂತೆ ಇನ್ನಿತರೆ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದನ್ನು ತಡೆಗಟ್ಟು ವ ನಿಟ್ಟಿನಲ್ಲಿ ಆರ್‌ಟಿಓ ಇಲಾಖೆ ಕಲಬೆರಕೆ ಇಂಧನ ತಡೆಗಟ್ಟುವಿಕೆ, ಸುಸ್ಥಿರ ವಾಹನಗಳ ಸಂಚಾರ ಹಾಗೂ ಸಕಾಲಕ್ಕೆ ವಾಹನಗಳ ತಪಾಸಣೆ ಮಾಡಿಸುವ ನಿಯಮಗಳನ್ನು ರೂಪಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಜನಸಂಖ್ಯೆ ಹೆಚ್ಚಳವಾದಂತೆ ವಾಹನಗಳ ಸಂಖ್ಯೆಯು ಹೆಚ್ಚಾಗಿರುವ ಪರಿಣಾಮ ವಾಯುಮಾಲಿನ್ಯವಾಗುತ್ತಿ ದ್ದು ಪ್ರತಿಯೊಂದು ವಾಹನಗಳಿಗೆ ಹೊಗೆ ತಪಾಸಣೆ ಕಡ್ಡಾಯಗೊಳಿಸಿದೆ. ಇದರಿಂದ ಸ್ವಲ್ಪ ಮಟ್ಟಿಗಾದರೂ ಮಾಲಿನ್ಯ ದಿಂದ ತಪ್ಪಿಸಿಕೊಳ್ಳಬಹುದು. ಹಾಗಾಗಿ ಸಾರ್ವಜನಿಕರು ಒಂದೊಂದೇ ವಾಹನದಲ್ಲಿ ಸಂಚರಿಸುವ ಬದಲಾಗಿ ಬಸ್ ಗಳಲ್ಲಿ ಸಂಚರಿಸಿದರೆ ಮಾಲಿನ್ಯ ಕಡಿಮೆಯಾಗಲಿದೆ ಎಂದು ಸಲಹೆ ಮಾಡಿದರು.

ಪರಿಸರ ಬಗ್ಗೆ ಕಾಳಜಿ ಹೊಂದಿರುವ ಪ್ರತಿ ನಾಗರೀಕರು ವಿದ್ಯುತ್ ಚಾಲಿತ ವಾಹನ, ಮನೆ ಅಕ್ಕಪಕ್ಕದಲ್ಲಿ ಅರಳಿ, ಬೇವು, ಆಲ ಸಸಿ ನೆಡುವುದು ಸೇರಿದಂತೆ ಇನ್ನಿತರೆ ಪರಿಸರಕ್ಕೆ ಪ್ರಿಯವಾಗಿರುವ ಕಾರ್ಯಗಳಿಗೆ ಕೈಹಾಕ ಬೇಕು. ಇದರಿಂದ ಉಸಿರಾಟಕ್ಕೆ ಶುದ್ಧವಾದ ಗಾಳಿ ಲಭಿಸಿ ಆರೋಗ್ಯಪೂರ್ಣ ಜೀವನಕ್ಕೆ ದಾರಿಯಾಗಲಿದೆ ಎಂದು ಹೇಳಿದರು.

Regional Transport ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಚಂದ್ರಪ್ಪ ಪರಿಸರ ಸಂರಕ್ಷಿಸುವುದು ವಿಶ್ವದ ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ನಿರ್ಲಕ್ಷ್ಯವಹಿಸಿದರೆ ಮುಂದೆ ದೊಡ್ಡಮಟ್ಟದ ಅನಾಹುತ ಸಂಭವಿಸಿ ಜೀವರಾಶಿಗಳು ತೊಂದರೆಗೆ ಸಿಲುಕಲಿವೆ. ಮನುಜ ನೀರಿಲ್ಲದಿದ್ದರೂ ಬದುಕಬಹುದು. ಗಾಳಿ ಇಲ್ಲವಾದರೆ ಜೀವಿಸಲು ಅಸಾಧ್ಯ. ಆ ನಿಟ್ಟಿನಲ್ಲಿ ಪರಿ ಸರ ಪೋಷಿಸುವುದು, ರಕ್ಷಿಸುವುದು ಮುಖ್ಯ ಎಂದರು.

ಆರೋಗ್ಯ ಪೂರ್ಣ ಶರೀರದ ಹೊಂದಬೇಕಾದರೆ ಶುದ್ಧವಾದ ಗಾಳಿ ಮನುಷ್ಯನಿಗೆ ಅತಿಮುಖ್ಯ. ಪರಿಸರದ ವಿರುದ್ಧ ಮಾನವ ಜನಾಂಗ ಮುಂದುವದರೆ ಪ್ರತಿದಿನಕ್ಕೆ ಸಾವಿರಾರು ವ್ಯಯಿಸಿ ಗಾಳಿಯನ್ನು ಪಡೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಆ ನಿಟ್ಟಿನಲ್ಲಿ ಮಾನವ ಜನಾಂಗ ಎಚ್ಚೆತ್ತುಕೊಂಡು ಪರಿಸರಕ್ಕೆ ಆಸರೆಯಾಗಿ ಬದುಕಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಯೋಗಿಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೌಸರ್‌ಫಾತಿಮಾ ವಾಯುಮಾಲಿನ್ಯ ಕುರಿತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ನೀಡುತ್ತಿರುವುದು ಖುಷಿಯ ಸಂಗತಿ. ಮಕ್ಕಳು ತರಬೇತಿಯ ಮಾಹಿತಿ ಪಡೆದುಕೊಂಡು ಪರಿಸರ ಉಳಿಸುವ ಕೆಲಸದಲ್ಲಿ ತೊಡಗಬೇಕು ಎಂದು ಸಲಹೆ ಮಾಡಿದರು.

ಇದೇ ವೇಳೆ ವಾಯುಮಾಲಿನ್ಯ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸ್ಥಾನ ಗಳಿಸಿದ ಪ್ರಾಯೋಗಿಕ ಪ್ರೌಢಶಾಲೆಯ ಐದು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಬಿ.ಕೆ.ಸದಾಶಿವಮೂರ್ತಿ, ಎಂ.ಸಿ.ಸುನೀತಾ, ಟಿ.ಜೆ.ಯಶೋಧ, ಆರ್.ಟಿ.ಓ. ತಾಂತ್ರಿಕ ಸಲಹೆಗಾರ ಸಂತೋಷ್, ಕಚೇರಿ ಸಹಾಯಕಿ ರಮ್ಯ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಹರ್ಷಿಕಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು...

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...