India Book of Records ಇಂಡಿಯಾ ಬುಕ್ ಆಫ್ ರೆಕಾರ್ಡ್, ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್, ಇಂಟರ್ ನ್ಯಾಷನಲ್ ಸ್ಟಾರ್ ಕಿಡ್ ಅವಾರ್ಡ್ ಶಿವಮೊಗ್ಗದ ಪುಟಾಣಿ ವಿರಾಟ್ ಪಡೆದಿದ್ದಾರೆ.
ಈ ಪುಟಾಣಿ ವಿರಾಟ್ 29 ಸೆಂಕೆಂಡಿನಲ್ಲಿ ರಾಷ್ಟ್ರೀಯ ಚಿನ್ನೆ ಗುರುತಿಸುವುದು, 48ಸೆಂಕೆಂಡಿನಲ್ಲಿ 29ರಾಜ್ಯ ಮತ್ತು ರಾಜಧಾನಿಗಳನ್ನು ಹೇಳಲಿದ್ದು, 15 ಎಲ್ಲ ಧರ್ಮಗಳ ಶ್ಲೋಕವನ್ನು ಹೇಳ್ತಾನೆ, ಜ್ನಾನಪೀಠ ಪ್ರಶಸ್ತಿ ಪಡೆದ ಸಾಧಕರ ಹೆಸರನ್ನ ಪಠಪಠ ಅಂತ ನುಡಿಯುತ್ತಾನೆ, ಕನ್ನಡ ವರ್ಣಮಾಲೆಯನ್ನು ಬಿಡದೆ ಮುದ್ದಾಗಿ ಹೇಳ್ತಾನೆ ಇಷ್ಟೆ ಅಲ್ಲದೆ ಇದೇ ತರಹ ಅನೇಕ ವಿಷಯಗಳ ಗ್ರಂಥಾಲಯ ಇವನಲ್ಲಿ ಅಡಗಿದೆ ಎಂದರೆ ತಪ್ಪಾಗಲಾರದು.
India Book of Records ಬಾಲ್ಯದಲ್ಲೆ ಗಗನೆತ್ತರದ ಸಾಧನೆ ಮಾಡಿರುವ “ಪುಟಾಣಿ ವಿರಾಟ್” ಅವರ ತಂದೆ ಶ್ರೀನಿವಾಸ್ ಮತ್ತು ತಾಯಿ ಜಾನವಿ, ಅಕ್ಕ ಆರುಷಿ ಹಾಗೇ ಇವರು ಶಿವಮೊಗ್ಗದ ಪ್ರಖ್ಯಾತ ನೃತ್ಯ ಸಂಸ್ಥೆಯಾದ ಸ್ಟೈಲ್ ಡಾನ್ಸ್ ಕ್ರಿವ್ ಸಂಸ್ಥೆಯ ವಿದ್ಯಾರ್ಥಿ ಎಂಬುದು ಗಮನಾರ್ಹ.