ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ
ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ಮಡಿದಿದ್ದಾರೆ.
ತಾ.8-12-21 ರಂದು ಮಧ್ಯಾಹ್ನ
ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನೆಲಸ್ಪರ್ಶಮಾಡಲು ಇನ್ನೂ ಐದು ನಿಮಿಷವಿತ್ತು.ಹೆಲಿಕಾಪ್ಟರ್ ಪತನವಾಗಿ ದುರಂತಕ್ಕೀಡಾಗಬೇಕಾಯಿತು. ಸಹ ಪ್ರಯಾಣಿಕರಾಗಿದ್ದ
ಪತ್ನಿ ಶ್ರೀಮತಿ ಮಧುಲಿಕಾ ರಾವತ್ ಅವರೂ ಅಪಘಾತ ಸ್ಥಳದಲ್ಲೇ ಮೃತರಾಗಿದ್ದಾರೆ. ಜೊತೆಯಲ್ಲಿದ್ದ ಮಿಕ್ಕ ಅಧಿಕಾರಿಗಳೂ ಸುಟ್ಟು ಹೆಣವಾಗಿದ್ದಾರೆ. ಬಿಪಿನ್ ರಾವತ್ ಮತ್ತು ಕ್ಯಾ.ಅರುಣ್ ಸಿಂಗ್ ಅವರನ್ನ ಚನ್ನೈನ ವೆಲ್ಲಿಂಗ್ಡನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ
ಸಮಯದಲ್ಲೇ ರಾವತ್ ಅಸು ನೀಗಿದರು.
ಭಾರತೀಯ ಸೇನೆಗೆ ಆಧುನಿಕ ಸ್ಪರ್ಶ ನೀಡಿದ ಬಿ. ಪಿ. ರಾವತ್,ಒಬ್ಬ ದೇಶಪ್ರೇಮಿ.
ಅವರ ಹಠಾತ್ ಮರಣ ದೇಶಕ್ಕಾದ ನಷ್ಟ.
ಬಿಪಿನ್ ಲಕ್ಷ್ಮಣ ಸಿಂಗ್ ರಾವತ್ ಉತ್ತರಾಖಂಡ್ ನ ಪೌರಿಯಲ್ಲಿ 16-3-1958 ರಲ್ಲಿ ಜನಿಸಿದರು. ಅವರ ಕುಟುಂಬದಲ್ಲಿ ಹಿರಿಯರಾದಿಯಾಗಿ
ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದವರಾಗಿದ್ದಾರೆ. ತಂದೆ ಲಕ್ಷಣ ಸಿಂಗ್ ಅವರು ಲೆ.ಜನರಲ್ ಆಗಿ ಹೆಸರಾದವರು.
ರಾವತ್ ಅವರು ರಕ್ಷಣಾ ಸೇವಾ ಕಾಲೇಜಿನಲ್ಲಿ ಪದವಿ ಪಡೆದರು.ನಂತರ ಹೈಯರ್ ಕಮಾಂಡಿಂಗ್ ಕೋರ್ಸ್ ಅಧ್ಯಯನ.
ರಕ್ಷಣಾ ಸೇವೆಗಳ ಬಗ್ಗೆ ಎಮ್. ಫಿಲ್. ಪಡೆದರು.
ಅವರ ಅಧ್ಯಯನಾಸಕ್ತಿಗೆ ಕೊನೆಯೇ ಇಲ್ಲ. ಚೌಧರಿ ಚರಣ್ ಸಿಂಗ್ ವಿವಿ ಯಿಂದ
ಡಾಕ್ಟರೇಟ್ ಪದವಿಯನ್ನೂ ಪಡೆದರು.
ರಾವತ್ ಅವರು 1978 ರ ಡಿಸೆಂಬರ್ 16 ರಲ್ಲಿ 11 ಗೋರ್ಖಾ ರೈಫಲ್ಸ್ ನ 5 ನೇ ಬೆಟಾಲಿಯನ್ ನಲ್ಲಿ ಸೇರ್ಪಡೆಯಾದರು.
ಅಲ್ಲಿಂದ ಒಂದೊಂದೇ
ಪದೋನ್ನತಿ ಹೊಂದಿದರು.
17-12-2016 ರಾವತ್ ಅವರು ಭಾರತೀಯ ಸೇನೆಯ ಮುಖ್ಯಸ್ಥರಾದರು.
ಗೋರ್ಖಾ ಬ್ರಿಗೇಡ್ ನಿಂದ ಸೇನೆಯ ಉನ್ನತ ಸ್ಥಾನಕ್ಕೆ ಬಂದವರಲ್ಲಿ ಇವರು ಮೂರನೇಯವರಾಗಿದ್ದಾರೆ.
ಎರಡನೇ ಲೆಫ್ಡಿನೆಂಟ್,
ಲೆಫ್ಟಿನೆಂಟ್,ಕ್ಯಾಪ್ಟನ್
ಮೇಜರ್,ಲೆ.ಕರ್ನಲ್.
ಕರ್ನಲ್.ಬ್ರಗೆಡಿಯರ್,ಮೇಜರ್ ಜನರಲ್,ಲೆಫ್ಟಿನೆಂಟ್ ಜನರಲ್,ಜನರಲ್
( ಭೂಸೇನೆ) ನಂತರ ಇದೀಗ ದೇಶದ ಮೂರೂ ಪಡೆಗಳ
ಸಮನ್ವಯ ಮುಖ್ಯಸ್ಥರಾಗಿದ್ದರು.
ಹೀಗೆ
ಅವರು ಸೈನ್ಯದ ವಿವಿಧ ಹುದ್ದೆಯಲ್ಲಿದ್ದು ಅನುಪಮ ಸೇವೆ ಸಲ್ಲಿಸಿದ್ದಾರೆ..
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.