Sunday, November 24, 2024
Sunday, November 24, 2024

Farmer News ಭದ್ರಾವತಿ ರೈತರ ಅಡಕೆ ಮಾರಾಟ ಸಹಕಾರ ಸಂಘ:ಸದಸ್ಯರಿಗೆ ಶೇ 8 ಡಿವಿಡೆಂಡ್ ಘೋಷಣೆ

Date:

Farmer News ಭದ್ರಾವತಿಯ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘವು ತಾಲ್ಲೂಕಿನ ಪ್ರತಿಷ್ಠಿತ ಸಹಕಾರ ಸಂಘವಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಜಿ.ಜಗದೀಶಗೌಡ ಹೇಳಿದರು.

ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘದ ಅವರಣದಲ್ಲಿ ಶನಿವಾರ ನಡೆದ
ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘವು 125ಲಕ್ಷ ರೂ. ನಿವ್ವಳ ಲಾಭಗಳಿಸಿದ್ದು, ಲೆಕ್ಕ ಪರಿಶೋಧನಾ ವರದಿಯಲ್ಲಿ ‘ಎ’ ಶ್ರೇಣಿಯಾಗಿ ಮುಂದುವರೆದಿದೆ. ಸಂಘವು ಪ್ರಾರಂಭದಿ0ದಲೂ ಸತತವಾಗಿ ಲಾಭಗಳಿಸುತ್ತಿದ್ದು. ಸಂಘದಲ್ಲಿ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ವಿವಿಧ ಸಾಲ ನೀಡಲಾಗುತ್ತಿದೆ. ಇದನ್ನು ಸದಸ್ಯರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಸಂಘದ ಸದಸ್ಯರಿಗೆ ಶೇ.೮ರಷ್ಟು ಶೇರು ಡಿವಿಡೆಂಡ್ ಮತ್ತು ಅಡಕೆ ಮಾರಾಟದ ಮೇಲೆ ಕ್ವಿಂಟಾಲ್ ಒಂದಕ್ಕೆ 400ರೂ. ಬೋನಸ್ ಸಭೆಯಲ್ಲಿ ಘೋಷಣೆ ಮಾಡಲಾಯಿತು.

ಎಪಿಎಂಸಿ ಪ್ರಭಾರ ಕಾರ‍್ಯದರ್ಶಿ ಮಹೇಶ್ ಮಾತನಾಡಿ, ಸಮಿತಿಯಿಂದ ರೈತರಿಗೆ ನೀಡಬಹುದಾದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಸಂಘದ ಅಡಿ ಹೊಳೆಹೊನ್ನೂರು ಉಪಮಾರುಕಟ್ಟೆ ಪ್ರಾಂಗಣದಲ್ಲಿ 200ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಭದ್ರಾವತಿ ಸಿಂಗನಮನೆ-ಜ0ಕ್ಷನ್ ಭಾಗದಲ್ಲಿ ಸಂಘದ ಉಪ ಕೇಂದ್ರವನ್ನು ತೆರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಈ ಸಂಧರ್ಭ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಮತ್ತು ಸಂಘದಲ್ಲಿ ಅತೀ ಹೆಚ್ಚು ಅಡಕೆ ಮಾರಾಟ ಮಾಡಿದ ಸದಸ್ಯರಿಗೆ ಸನ್ಮಾನಿಸಲಾಯಿತು.

Farmer News ಸಂಘದ ಸದಸ್ಯರು ಹಾಗೂ ಶಾಸಕರಾದ ಬಿ.ಕೆ.ಸಂಗಮೇಶ್‌ರವರಿಗೆ ಅಭಿನಂದಿಸಲಾಯಿತು.
ಸ0ಘದ ಉಪಾಧ್ಯಕ್ಷ ಎಚ್.ಟಿ.ಉಮೇಶ್, ನಿರ್ದೇಶಕರಾದ ಸಿ.ಮಲ್ಲೇಶಪ್ಪ, ಯು.ಗಂಗನಗೌಡ, ಎಚ್.ಆರ್.ತಿಮ್ಮಪ್ಪ, ಎಚ್.ಎಲ್.ಷಡಾಕ್ಷರಿ, ಸಿ.ಹನುಮಂತಪ್ಪ, ಮಹೇಶ್, ಜಿ.ಇ.ಲೋಕೇಶಪ್ಪ, ಬಿ.ಆರ್.ದಶರಥಗಿರಿ, ಎಂ.ಎಸ್.ಬಸವರಾಜ್, ಎಸ್.ಮಹೇಶ್ವರಪ್ಪ, ಸುಲೋಚನ, ಎಚ್.ಎಸ್.ಸಂಜೀವಕುಮಾರ್, ಲಲಿತಮ್ಮ, ಹಾಗೂ ಸಂಘದ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಎಂ.ವಿರುಪಾಕ್ಷಪ್ಪ ಹಾಗೂ ಸಂಘದ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...