Sunday, November 24, 2024
Sunday, November 24, 2024

Rashtriya Raksha university ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಒತ್ತಡ ನಿರ್ವಹಣೆ ತರಬೇತಿ

Date:

ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ದೇಶಕರಾದ ಡಾ.ಆನಂದ್ ಕುಮಾರ್ ತ್ರಿಪಾಠಿ ಮತ್ತು ಹೊಸದಾಗಿ ನೇಮಕಗೊಂಡಿರುವ ಕ್ಯಾಂಪಸ್ ನಿರ್ದೇಶಕ ರಮಾನಂದ್ ಗಾರ್ಗಿ, ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಬುಧವಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳಿಗೆ ಒತ್ತಡ ನಿರ್ವಹಣೆ ಕುರಿತು ತರಬೇತಿ ನೀಡಿದರು.

ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಆರ್ ಸ್ವಾಗತಿಸಿ, 2023 ರ ಮಾರ್ಚ್‍ನಲ್ಲಿ ಸ್ಥಾಪನೆಗೊಂಡಿರುವ ಆರ್‍ಆರ್‍ಯು(ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ)ದ ದೃಷ್ಟಿಕೋನ ಮತ್ತು ಧ್ಯೇಯದ ಕುರಿತು ಸಿಬ್ಬಂದಿಗಳಿಗೆ ಪರಿಚಯಿಸಿದರು. ಇದೊಂದು ಹೆಮ್ಮೆಯ ಸಂಸ್ಥೆಯಾಗಿದ್ದು, ಗುಣಮಟ್ಟದ ಶಿಕ್ಷಣವನ್ನು ನೀಡುತ್ತದೆ ಎಂದರು.

ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುವುದು ಒತ್ತಡಭರಿತ ಕೆಲಸವಾಗಿದ್ದು ಇದನ್ನು ನಿರ್ವಹಿಸಲು ವೈಜ್ಞಾನಿಕ ಸಾಧನಗಳ ಅವಶ್ಯಕತೆ ಇರುತ್ತದೆ. ಆರ್‍ಆರ್‍ಯು ಈ ನಿಟ್ಟಿನಲ್ಲಿ ಒತ್ತಡ ನಿರ್ವಹಣೆ ಕುರಿತು ಸಿಬ್ಬಂದಿಗಳಿಗೆ ತರಬೇತಿ ನೀಡಲಿದೆ ಎಂದ ಅವರು ಆರ್‍ಆರ್‍ಯು ಗೆ ಉತ್ತಮ ಯಶಸ್ಸು ಲಭಿಸಲಿ ಹಾಗೂ ತಮ್ಮ ಕಡೆಯಿಂದ ಎಲ್ಲ ರೀತಿಯ ಸಮನ್ವಯ ಮತ್ತು ಬೆಂಬಲವನ್ನು ನೀಡುವುದಾಗಿ ತಿಳಿಸಿದರು.

ಕ್ಯಾಂಪಸ್ ನಿರ್ದೇಶಕ ಡಾ.ಆನಂದಕುಮಾರ್ ತ್ರಿಪಾಠಿ ಮಾತನಾಡಿ, ನ್ಯಾಯದಾನದಲ್ಲಿ ಕಾರಾಗೃಹದ ಪಾತ್ರ ಅತ್ಯಗತ್ಯವಾಗಿದೆ ಎಂದ ಅವರು ಕಾರಾಗೃಹ ಮತ್ತು ಸಿಬ್ಬಂದಿಗಳ ಮಹತ್ವವನ್ನು ತಿಳಿಸಿದರು.
ಕ್ಯಾಂಪಸ್ ನಿರ್ದೇಶಕ ರಮಾನಂದ ಗಾರ್ಗಿ ಮಾತನಾಡಿ, ಒತ್ತಡ ನಿರ್ವಹಣೆ ಸುಲಭದ ಕೆಲಸವಲ್ಲ. ಆದರೆ ಶಾಂತಿಯುತ ಜೀವನ ನಡೆಸಲು ನಾವು ಒತ್ತಡವನ್ನು ಸಮರ್ಥವಾಗಿ ನಿಭಾಯಿಸಬೇಕೆಂದರು.

Rashtriya Raksha university ಈ ತರಬೇತಿ ಕಾರ್ಯಕ್ರಮದಲ್ಲಿ ಆರ್‍ಆರ್‍ಯು ಕ್ಲಿನಿಕಲ್ ಸೈಕಾಲಜಿಸ್ಟ್ ಮತ್ತು ಅಸೋಸಿಯೇಟ್ ಪ್ರೊಫೆಸರ್ ಡಾ.ನಂದಕುಮಾರ್ ಪೂಜಂ ಮಾತನಾಡಿ, ಒತ್ತಡ ಮತ್ತು ಅದು ದೇಹ ಹಾಗೂ ಮನಸ್ಸಿನ ಮೇಲೆ ಬೀರುವ ದುಷ್ಪರಿಣಾಮದ ಕುರಿತು ವಿವರಣೆ ನೀಡಿದ ಅವರು ಒತ್ತಡ ನಿರ್ವಹಿಸುವ ತಂತ್ರಗಳ ಕುರಿತು ಪ್ರಾಯೋಗಿಕವಾಗಿ ಸಿಬ್ಬಂದಿಗಳನ್ನು ತೊಡಗಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N Gopinath ಪಾಠದ ಜೊತೆ ವಿದ್ಯಾರ್ಥಿಗಳಿಗೆ ಸಾಹಸ,ಸಾಮಾಜಿಕ ಅರಿವು ಮೂಡಿಸುವುದು ಮುಖ್ಯ- ಎನ್.ಗೋಪಿನಾಥ್

N Gopinath ವಿದ್ಯಾರ್ಥಿಗಳ ಪಾಠ ಪ್ರವಚನ ಜೋತೆಗೆ ಸಾಹಸ, ಪ್ರವಾಸ, ಸಾಮಾಜಿಕ...

Sri Sri Prasannanatha Swamiji ಶ್ರೀ ಪ್ರಸನ್ನನಾಥ ಶ್ರೀಗಳಿಗೆ ಮಾತೃ ವಿಯೋಗ

Sri Sri Prasannanatha Swamiji ಶಿವಮೊಗ್ಗ,ನ.22 ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ...

Karnataka Rajyotsava ನಮ್ಮ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ- ಡಾ.ಎಚ್.ಬಿ.ಮಂಜುನಾಥ್

Karnataka Rajyotsava "ನಮ್ಮ ದೇಶೀಯ ಸಂಸ್ಕೃತಿಯು ವಿಶ್ವದಲ್ಲೇ ಶ್ರೇಷ್ಠವಾಗಿದೆ" ಬಿ ಜೆ...

Poorna Prajna School ಓದು & ಕ್ರೀಡೆ ಎರಡನ್ನೂ ಸಮಾನ ಸ್ವೀಕರಿಸಿ- ಶ್ರೀಕೃಷ್ಣ ಉಪಾಧ್ಯಾಯ

Poorna Prajna School ಭದ್ರಾವತಿ,ನ.22, ದೈಹಿಕ ಶಿಕ್ಷಣ ಶಿಕ್ಷಕರು ಸಂಸ್ಥೆಯ ಆಧಾರಸ್ಥಂಭ...