Sunday, November 24, 2024
Sunday, November 24, 2024

Kuvempu University ಚಲನಚಿತ್ರಗಳು ಸಾಮಾಜಿಕ ಬದಲಾವಣೆ ಸಾಧನಗಳು- ಪ್ರೊ.ವೆಂಕಟೇಶ್

Date:

Kuvempu University ಚಲನಚಿತ್ರ ಎಂಬುದು ಕೇವಲ ಒಂದು ಮನೋರಂಜನ ಮಾಧ್ಯಮವಲ್ಲ ಬದಲಾಗಿ ನೋಡುಗರಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಹಾಗೂ ಸಾಮಾಜಿಕ ಬದಲಾವಣೆಯನ್ನು ತರುವಂತಹ ಸಾಮರ್ಥ್ಯವುಳ್ಳ ಸಶಕ್ತ ಮಾಧ್ಯಮವಾಗಿದೆ ಎಂದು ಕುವೆಂಪು ವಿವಿ ಪ್ರಭಾರ ಕುಲಪತಿ ಪ್ರೊ. ವೆಂಕಟೇಶ ಎಸ್ ಹೇಳಿದರು.

ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ವಿವಿಯ ಬಸವ ಸಭಾ ಭವನದಲ್ಲಿ ಆಯೋಜಿಸಿರುವ ಐದು ದಿನಗಳ 14ನೇ ಸಹ್ಯಾದ್ರಿ ಸಿನಿಮೋತ್ಸವವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಚಲನಚಿತ್ರಗಳು ಸಾಮಾಜಿಕ ಬದಲಾವಣೆ ಸಾಧನಗಳು ಎನ್ನಲು ಕನ್ನಡವು ಸೇರಿದಂತೆ ಜಾಗತಿಕ ರಂಗದಲ್ಲಿ ಹಲವು ನಿದರ್ಶನಗಳಿವೆ. ರಾಜ್‌ಕುಮಾರ್‌ರ ಬಂಗಾರದ ಮನುಷ್ಯ ಸಿನಿಮಾ ಮೂಲಕ ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿಯಲ್ಲಿ ದೊಡ್ಡ ಆಂದೋಲನವೇ ನಡೆಯಿತು ಎಂದರು.
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಸಿನಿಮಾಗಳು ಜಾಗತಿಕ ಮಟ್ಟದಲ್ಲೂ ಹೆಸರು ಮಾಡುತ್ತಿದೆ. ಸ್ಥಳೀಯ ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ಸಂದೇಶವನ್ನು ಸಾರುವಂಥಹ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗುತ್ತಿವೆ. ಈ ದಿಸೆಯಲ್ಲಿ ಕನ್ನಡ ಚಿತ್ರರಂಗ ಮುನ್ನುಡಿ ಇಡುತ್ತಿರುವುದು ಪ್ರಶಂಸನೀಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿನಿಮೋತ್ಸವದ ವಿಷಯ ಮುಗ್ಧ ಮಕ್ಕಳ ಕಣ್ಣುಗಳಲ್ಲಿ ಪ್ರಪಂಚ ಕುರಿತು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಡಿ ಎಸ್ ಪೂರ್ಣಾನಂದ ಮಾತನಾಡಿ, ಸಿನಿಮಾವನ್ನು ಕೇವಲ ವೀಕ್ಷಿಸಿ ಮನೋರಂಜನೆ ಪಡೆಯುವುದಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳದೆ, ಅದರಲ್ಲಿ ಕಾಣುವ ವಿಚಾರಗಳನ್ನು ಚರ್ಚಿಸುವುದು ಸಿನಿಮಾ ನೋಡುವ ಕ್ರಮವಾಗಿದೆ. ಒಂದು ಸದಭಿರುಚಿಯ ಸಿನಿಮಾವನ್ನು ವೀಕ್ಷಿಸುವುದು ಒಂದು ಉತ್ತಮ ಪುಸ್ತಕ ಓದುವುದಕ್ಕೆ ಸಮವಾಗಿರುತ್ತದೆ.

ಸಿನಿಮೋತ್ಸವದಲ್ಲಿ ಪ್ರದರ್ಶಿಸುವಂತ ಎಲ್ಲಾ ಸಿನಿಮಾಗಳಲ್ಲಿ ಮಕ್ಕಳ ಮುಗ್ಧತೆ, ಜಾಣ್ಮೆ, ಬಡ ಮಕ್ಕಳ ನೋವು ನಲಿವು ಮತ್ತು ಶೋಷಣೆಗೆ ಗುರಿಯಾಗಿ ಅನುಭವಿಸಿದ ಸಂಕಷ್ಟದ ಕುರಿತ ಕಥೆಗಳನ್ನು ಒಳಗೊಂಡಿವೆ. ಮಕ್ಕಳ ಸಿನಿಮಾಗಳನ್ನು ನೋಡುವುದು ಮಾನವೀಯತೆಯನ್ನು ಆಚರಿಸುವ, ಅನುಸರಿಸುವ ಪ್ರಕ್ರಿಯೆಯಾಗುತ್ತದೆ ಎಂದರು.

Kuvempu University ಕಾರ್ಯಕ್ರಮದಲ್ಲಿ ಖ್ಯಾತ ಛಾಯಗ್ರಹಕರಾದ ಅಶೋಕ್ ಕಶ್ಯಪ್, ವಿಭಾಗದ ಅಧ್ಯಕ್ಷರಾದ ಡಾ. ಸತ್ಯಪ್ರಕಾಶ್ ಎಂ.ಆರ್, ಉಪನ್ಯಾಸಕರಾದ ಪ್ರೊ. ಸತೀಶ್ ಕುಮಾರ್, ಪ್ರೊ. ವರ್ಗೀಸ್ ಪಿ.ಎ, ಡಾ. ರುಮಾನ ತನ್ವೀರ್, ವಿನಯ್ ಜಿ.ಪಿ. ಸಂಶೋಧನಾರ್ಥಿಗಳು ಹಾಗೂ ವಿವಿಧ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...