Raksha Bandhan ಚಿಕ್ಕಮಗಳೂರು, ನಗರದ ಜಿಲ್ಲಾ ಕಾರಾಗೃಹದಲ್ಲಿ ರಕ್ಷಾ ಬಂಧನ ಪ್ರಯುಕ್ತ ಬ್ರಹ್ಮಕುಮಾರೀಸ್ ಸಂಸ್ಥೆ ವತಿಯಿಂದ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಅವರಿಗೆ ರಾಖಿ ಕಟ್ಟುವ ಮೂಲಕ ರಕ್ಷಬಂಧನವನ್ನು ಆಚರಿಸಿದರು.
ಈ ವೇಳೆ ಮಾತನಾಡಿದ ಎಸ್.ಎಸ್.ಮೇಟಿ ರಕ್ಷಾಬಂಧನ ಅರ್ಥವನ್ನು ಒಮ್ಮೆ ಅವಲೋಕಿಸಿದರೆ ಒಡಹುಟ್ಟಿ ದವರ ನಡುವಿನ ಬಲವಾದ ರಕ್ಷಣಾತ್ಮಕ ಬಂಧವನ್ನು ನೆನಪಿಸುತ್ತದೆ. ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆಯನ್ನು ಹೊಂದಿದ್ದು ಈ ದಿನ ಭಾರತಾದ್ಯಂತ ಬಹಳ ಸಂಭ್ರಮದಿoದ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ ಎಂದರು.
ಭಾರತ ದೇಶವು ಹಲವು ಹಬ್ಬಗಳ ತವರೂರು ಹಬ್ಬಹರಿದಿನಗಳಿಂದ ಕೂಡಿದೆ. ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ. ಶ್ರಾವಣ ಮಾಸದ ಹಬ್ಬಗಳಲ್ಲಿ ರಕ್ಷಾ ಬಂಧನ ಸಹೋದರ, ಸಹೋದರಿಯರು ಪ್ರೀತಿಯಿಂದ ಆಚರಿ ಸುವ ಹಬ್ಬವಾಗಿದೆ ಎಂದು ತಿಳಿಸಿದರು.
ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ ಮಾತನಾಡಿ ಪ್ರತಿವರ್ಷದಂತೆ ಕಾರಾಗೃಹ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸಂಸ್ಥೆ ವತಿಯಿಂದ ರಕ್ಷಾಬಂಧವನ್ನು ಆಚರಿಸಲಾಗುತ್ತದೆ. ಅಣ್ಣ-ತಂಗಿಯ ಪರಸ್ಪರ ಪ್ರೀತಿಯ ನ್ನು ಸಾರುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಪ್ರತಿವರ್ಷ ಆಚರಿಸಲಾಗುವುದು ಎಂದರು.
ಇದೇ ವೇಳೆ ಕಾರಾಗೃಹದಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ದ ಮಹತ್ವವನ್ನು ಬ್ರಹ್ಮಕುಮಾರೀಸ್ ಸಂಸ್ಥೆಯವರು ಅರಿವು ಮೂಡಿಸಿದರು.
Raksha Bandhan ಈ ಸಂದರ್ಭದಲ್ಲಿ ಜೈಲರ್ ಎಂ.ಕೆ.ನೆಲಧರಿ, ಸಹಾಯಕ ಜೈಲರ್ ಬೊಂಗಾಳೆ, ಬ್ರಹ್ಮಕುಮಾರೀಸ್ ಸಂಸ್ಥೆಯ ರಾಜಾಯೋಗಿಣಿ ಮಹಾಲಕ್ಷ್ಮೀ ದೇವಿಕಾ, ಶ್ರದ್ದಾ, ಸದಸ್ಯರಾದ ಗಂಗಾಧರ್, ಹರೀಶ್ ಹಾಗೂ ಕಾರಾಗೃಹ ಸಿಬ್ಬಂದಿ ಗಳು ಹಾಜರಿದ್ದರು