Navakarnataka Nirmana Vedhike ಹಾಲಿನದರ ಏರಿಕೆಯ ಜೊತೆಯಲ್ಲಿ ಪಶು ಆಹಾರದ
ಬೆಲೆ ನಿಯಂತ್ರಿಸಬೇಕೆಂದು ನವಕರ್ನಾಟಕ
ನಿರ್ಮಾಣ ವೇದಿಕೆ” ರಾಜ್ಯಾಧ್ಯಕ್ಷ ಗೋ. ರಮೇಶ್‌ಗೌಡ ಅವರು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಸಾಕಷ್ಟು ಚರ್ಚೆ ನಡೆಸಿ ಅಳೆದು-ತೂಗಿ ಆಗಸ್ಟ್ 01 ರಿಂದ ಹಾಲಿನದರ
ಏರಿಕೆ ಮಾಡಿರುವುದು ಗ್ರಾಹಕರಿಗೆ ಹೊರೆಯಾಗುತ್ತಿದೆ ಎಂದು
ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಹಾಲಿನದರ ಏರಿಕೆಯಿಂದ
ಗ್ರಾಹಕರಿಗೆ ಸ್ಪಲ್ಪ ಮಟ್ಟಿನ ಹೊರೆಯಾಗುತ್ತದೆ. ಆದರೆ,
ದೇಶದಲ್ಲಿ ಇತ್ತಿಚೇಗೆ ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಿದ್ದು, ಒಂದು
ಲೀಟರ್ ನೀರಿನ ಬಾಟಲ್ ಬೆಲೆ 20ರೂಪಾಯಿಗಳಾಗಿದ್ದು, ಜನ ಉತ್ಪದನಾ
ವೆಚ್ಚ, ತೆರಿಗೆ ಹೆಚ್ಚಾಗಿದೆ ಎಂದು ಎಲ್ಲಾ ಬೆಲೆ ಏರಿಕೆಗೂ
ಹೊಂದಿಕೊಂಡು ಜೀವನ ಸಾಗಿಸುತ್ತಿದ್ದಾರೆ.
Navakarnataka Nirmana Vedhike ಆದರೆ, ರೈತರು
ಉತ್ಪಾದಿಸುವ ಅಮೃತಕ್ಕೆ ಸಮಾನವಾದ ಹಾಲು, ಹಾಲಿನ ಉತ್ಪನ್ನಗಳ
ಬೆಲೆ ಹೆಚ್ಚಾದಾಗ ಜನ ಚರ್ಚೆ ಮಾಡುತ್ತಾರೆ. ಹಾಲಿನ ಬೆಲೆ ಮತ್ತೆ
ಮತ್ತೆ ಹೆಚ್ಚಾಗ ಬಾರದೆಂದರೆ ಸರ್ಕಾರ ರೈತರಿಗೆ ಉತ್ಪದನಾ
ವೆಚ್ಚ ಕಡಿಮೆ ಮಾಡಲು ಪಶು ಆಹಾರದ ಬೆಲೆ
ನಿಯಂತ್ರಿಸಬೇಕಾಗಿದೆ. ಹಾಲಿನದರ ಹೆಚ್ಚಿಸುವಾಗ ಸಾಕಷ್ಟು ಚರ್ಚೆ
ನಡೆಸಿ ತೀರ್ಮಾನ ಕೈಗೊಳ್ಳುವ ಸರ್ಕಾರ ಪಶು ಆಹಾರದ ಬೆಲೆ
ಹೆಚ್ಚಿಸುವಾಗ ಯಾವುದೇ ಚರ್ಚೆ ನಡೆಸುವುದಿಲ್ಲ.
ಒಂದು ವೇಳೆ ಪಶು ಆಹಾರದ ಕಚ್ಚಾ ಪದಾರ್ಥಗಳ ಬೆಲೆ
ಏರಿಕೆಯಾದರೆ ಸರ್ಕಾರ ರೈತರಿಗೆ, ಹೈನುಗಾರರಿಗೆ ಪಶು
ಆಹಾರಕ್ಕೆ ಸಬ್ಸಿಡಿ ನೀಡಿ ಪಶು ಆಹಾರದ ಬೆಲೆ ನಿಯಂತ್ರಿಸಬೇಕು
ಅಥವಾ ರೈತರ ಉತ್ಪದನಾ ವೆಚ್ಚಕ್ಕೆ ತಕ್ಕಂತೆ ಯಾವುದೇ ಚರ್ಚೆ
ಇಲ್ಲದೆ ಹಾಲಿನದರ ಏರಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ
ರೈತರು ಹೈನುಗಾರಿಕೆಯಿಂದ ನಷ್ಟ
ಅನುಭವಿಸಬೇಕಾಗುತ್ತದೆ.
ಆದ್ದರಿಂದ ರಾಜ್ಯ ಸರ್ಕಾರ ಹಾಲಿನದರ ಏರಿಕೆಯ ಜೊತೆಯಲ್ಲಿ
ಪಶು ಆಹಾರದ ಬೆಲೆ ನಿಯಂತ್ರಿಸಬೇಕೆಂದು “ನವಕರ್ನಾಟಕ
ನಿರ್ಮಾಣ ವೇದಿಕೆ” ರಾಜ್ಯಾಧ್ಯಕ್ಷರಾದ ರಮೇಶ್‌ಗೌಡ
ಸರ್ಕಾರವನ್ನು ಒತ್ತಾಯಿಸಿದ್ದಾರೆ.