Manipur Incident ಮಣಿಪುರ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿರುವ ಆರೋಪಿಗಳಿಗೆ ಮರಣ ದಂಡನೆ ವಿಧಿಸುವ ಮೂಲಕ ನಿರ್ದಾಕ್ಷ್ಯೀಣ ಕ್ರಮ ಕೈಗೊ ಳ್ಳಬೇಕು ಎಂದು ಜಿಲ್ಲಾ ಅಂಬೇಡ್ಕರ್ ಸೇನೆ ಬುಧವಾರ ರಾಷ್ಟ್ರಪತಿಗಳನ್ನು ಒತ್ತಾಯಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಸೇನೆಯ ಪದಾಧಿಕಾರಿಗಳು ಹೆಣ್ಣುಮಕ್ಕಳ ಮೇಲೆ ಅಮಾನುಷಕೃತ್ಯವೆಸಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಮತ್ತೊಮ್ಮೆ ಇಂತಹ ದುರ್ಘಟನೆಗೆ ಯಾರು ಕೈಹಾಕದಂತೆ ಕ್ರಮ ವಹಿಸಬೇಕು ಎಂದರು.
ಈ ವೇಳೆ ಮಾತನಾಡಿದ ಸೇನೆಯ ಜಿಲ್ಲಾಧ್ಯಕ್ಷ ಸಂತೋಷ್ ಮಣ ಪುರದ ರಾಜ್ಯದ ಬುಡಕಟ್ಟು ಸಮುದಾ ಯದ ಇಬ್ಬರು ಮಹಿಳೆಯರನ್ನು ಬಹಿರಂಗವಾಗಿ ವಿವಸ್ತçಗೊಳಿಸಿ ಲೈಂಗಿಕ ಕಿರುಕುಳ ನೀಡಿರುವುದು ದುರಾದೃಷ್ಟಕರ ಸಂಗತಿ. ಇಂತಹ ವಿಕೃತ ಮನಸ್ಸು ಹೊಂದಿರುವ ಆರೋಪಿಗಳಿಗೆ ಯಾವುದೇ ದಯೆ ತೋರದೇ ಮರಣ ದಂಡನೆ ನೀಡಿ ಮಹಿಳೆಯರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಎಂದರು.
ದೇಶದ ಹೆಣ್ಣುಮಕ್ಕಳ ಮೇಲೆ ಇಷ್ಟೆಲ್ಲಾ ಪೈಶಾಚಿಕ ಕೃತ್ಯಗಳು ನಡೆದರೂ ಸಹ ಮಣ ಪುರ ರಾಜ್ಯಸರ್ಕಾರ ವೀಡಿಯೋ ವೈರಲ್ ಆದ ಬಳಿಕ ಕ್ರಮ ಕೈಗೊಂಡಿರುವುದು ದುರ್ದೈವದ ವಿಷಯ. ಕೂಡಲೇ ರಾಷ್ಟ್ರಪತಿಗಳಿಗೆ ಅಲ್ಲಿನ ರಾಜ್ಯಸರ್ಕಾರದ ವಿಸರ್ಜಿಸಬೇಕು ಎಂದರು.
Manipur Incident ಸಂತ್ರಸ್ಥ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ಧನ, 10 ಎಕರೆ ಭೂಮಿ ಮಂಜೂರು ಮಾಡಬೇಕು. ಮಣ ಪುರದ ರಾಜ್ಯಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೇನೆಯ ಕಾರ್ಯದರ್ಶಿಗಳಾದ ಬಸವರಾಜ್, ಸುರೇಶ್, ದಲಿತ ಮುಖಂಡರುಗಳಾದ ಜಗದೀಶ್, ಪ್ರೇಮ್‌ಕುಮಾರ್ ಹಾಜರಿದ್ದರು.