Agricultural Market ಗ್ರಾಮೀಣ ಭಾರತವನ್ನು ಬೆಳಗಿಸುವ ಯಾವುದೇ ಯೋಜನೆಗಳು ಪಂಚ ವಾರ್ಷಿಕ ಯೋಜನೆಗಳಲ್ಲಿ ಕಾರ್ಯಗತಗೊಳಿಸದಿರುವ ಪರಿಣಾಮ ಇಂದು ಕೃಷಿಕರ ಬದುಕು ಬಡನತ ರೇಖೆ ಗಿಂತ ಕೆಳಗೆ ಉಳಿದು ಹೀನಾಯ ಸ್ಥಿತಿ ಎದುರಿಸುವಂತಾಗಿದೆ ಎಂದು ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ಡಾ. ಕೆ.ಸುಂದರಗೌಡ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಈ ಸಂಬoಧ ಗುರುವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು ಪ್ರಸ್ತುತ ದೇಶದಲ್ಲಿ ಶೇ.70 ಗ್ರಾಮೀಣ ಪ್ರದೇಶದ ಮಂದಿ ತೀವ್ರ ಬಡತನದಲ್ಲಿ ಜೀವಿಸುತ್ತಿರುವುದು ಪ್ರಜಾಪ್ರಭುತ್ವದ ದೊಡ್ಡ ಕೊಡುಗೆಯಾಗಿದೆ. ಇದನ್ನು ನಿವಾರಿಸುವಲ್ಲಿ ದೇಶದ ಬಲಾಡ್ಯ ರಾಜಕೀಯ ಪಕ್ಷವು ಚಿಂತನೆ ನಡೆಸದಿರುವುದೇ ಬಡತನಕ್ಕೆ ಮೂಲ ಕಾರಣ ವಾಗಿದೆೆ ಎಂದಿದ್ದಾರೆ.
ಪoಚವಾರ್ಷಿಕ ಯೋಜನೆಗಳು 1951ರಲ್ಲಿ ಪ್ರಾರಂಭವಾದರೂ ಕೂಡಾ ಯಾವುದೇ ರೀತಿಯ ಪರಿಣಾಮ ಕಾರಿಯಾದ ಕೃಷಿ ಬೆಳವಣಿಗೆಯನ್ನು ಕಾಣದಿರುವುದಕ್ಕೆ ಕೃಷಿಯನ್ನು ಕೈಗಾರಿಕೆ ಜೊತೆಯಲ್ಲಿ ಅಭಿವೃದ್ದಿಗೆ ನೀಡಿರುವುದೇ ಸರ್ವನಾಶಕ್ಕೆ ಕಾರಣ. ಜೊತೆಗೆ ಕೃಷಿಯನ್ನು ಅಸ್ಪೃಶ್ಯತೆಯ ನೆಲೆಯಲ್ಲಿ ಕಾಣುವುದಕ್ಕೆ ಮೂಲ ಎಂದು ತಿಳಿಸಿದ್ದಾರೆ.
ದೇಶದ ರೈತರಿಗೆ ಕೃಷಿ ಉತ್ಪತ್ತಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಸದಿರುವುದು ಅತ್ಯಂತ ದುರಂತ. ಜೊತೆಗೆ ಮಧ್ಯವರ್ತಿಗಳ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿರುವುದರಿಂದ ಕೃಷಿ ಮಾರಕವಾದ ಉದ್ಯೋಗವಾಗಿ ಪರಿಣಮಿಸುವ ಮುಖಾಂತರ ಅಸಹಾಯಕತೆಯ ದಾರಿಯನ್ನು ತುಳಿಯುತ್ತಿದೆ ಎಂದಿದ್ದಾರೆ.
ರೈತನ ಉತ್ಪತ್ತಿಯನ್ನು ಸರ್ಕಾರಿ ನೌಕರರ ಮಟ್ಟದ ಪ್ರತಿಫಲ ನೀಡುವ ಮುಖಾಂತರ ಸಮಾನವಾಗಿ ಸರಿದೂಗಿಸಬೇಕು. ಜೊತೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಪ್ರಮಾಣದಲ್ಲಿ ಸಾರ್ವಜನಿಕರು ಹೂಡಿಕೆ ಮಾಡಲು ಮುಂದಾಗಬೇಕಿರುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಪ0ಚವಾರ್ಷಿಕ ಯೋಜನೆಗಳಲ್ಲಿ ಕೃಷಿಗೆ ನೀಡಿದ ಸರ್ಕಾರದ ಬೆಂಬಲ ಕೇವಲ 2.5ಲಕ್ಷ ರೂಪಾಯಿಗಳು. ಇದೇ ಕಾಲಾವಧಿಗೆ ಸರ್ಕಾರವು ಕಾರ್ಪೋರೇಟ್ ಕಂಪನಿಗಳಿಗೆ 42 ಲಕ್ಷ ಕೋಟಿಗಳನ್ನು ನೀಡಿರುವುದು ರೈತರ ಬಡತನಕ್ಕೆ ಮತ್ತು ಹಸಿವಿಗೆ ಸಮಸ್ಯೆಯಾಗಿದೆ. ಇದನ್ನು ಸಂಪೂರ್ಣವಾಗಿ ಪ್ರಶ್ನಿಸಬೇಕಾಗಿರುವುದು ಸರ್ಕಾರದ ಮತ್ತು ವಿರೋಧ ಪಕ್ಷಗಳ ಮುಖ್ಯ ಕಾಯಕವಾಗಿದೆ ಎಂದು ಹೇಳಿದ್ದಾರೆ.
Agricultural Market ಆ ನಿಟ್ಟಿನಲ್ಲಿ ಮಾನವೀಯತೆಗೆ ಗೌರವ ಕೊಡುವ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಪ್ರಜಾಪ್ರಭುತ್ವದ ಆಧಾರಸ್ಥಂಭಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗದ ಆದ್ಯ ಕರ್ತವ್ಯವಾಗಿರಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.