Dalit woman murder case be handed over to CBI ದಲಿತ ಮಹಿಳೆಯನ್ನು ಅತ್ಯಾಚಾರವೆಸಗಿ ಬಂದೂಕಿನಿಂದ ಕೊಲೆ ಮಾಡಿ ರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರುಗಳು ಚಿಕ್ಕಮಗಳೂರು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಶುಕ್ರವಾರ ಒತ್ತಾಯಿಸಿದರು.
ಈ ಸಂಬಂಧ ಶಿರಸ್ತೇದಾರ್ ಮನು ಅವರಿಗೆ ಮನವಿ ಸಲ್ಲಿಸಿದ ದಸಂಸ ಮುಖಂಡರುಗಳು ಜಾಗರ ಹೋಬ ಳಿಯ ಸಿರವಾಸೆ ಗ್ರಾ.ಪಂ. ವ್ಯಾಪ್ತಿಯ ಸಿದ್ದಾಪುರ ಗ್ರಾಮದ ತೋಟದ ಮಾಲೀಕರ ಮಗ ಹಾಗೂ 11 ಮಂದಿ ಮಂದಿ ಇತರರು ಕೂಲಿ ಕಾರ್ಮಿಕ ಮಹಿಳೆ ಜಯಮ್ಮ ಎಂಬುವವರನ್ನು ಅತ್ಯಾಚಾರವೆಸಗಿ ಕೊಲೆಗೈದು ತೋಟದ 2 ಕಿ.ಮೀ. ದೂರದಲ್ಲಿ ಬೆಂಕಿಯಿಂದ ಸುಟ್ಟ ಹಾಕಲಾಗಿರುವ ಪ್ರಕರಣ ವರದಿಯಾಗಿತ್ತು ಎಂದರು.
ತದನಂತರ ಅತ್ಯಾಚಾರವೆಸಗಿ ಕೊಲೆಗೈದು ಸುಟ್ಟುಬೂದಿ ಮಾಡಿದ ಮಾಹಿತಿಯು ಮಲ್ಲಂದೂರು ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿರುವುದು ಶುದ್ಧ ಸುಳ್ಳಾಗಿದೆ. ಸಿದ್ದಾಪುರ ಗ್ರಾಮದ ತೋಟದ ಮಾಲೀಕರ ಕುಟುಂ ಬದವರನ್ನು ಬಂಧಿಸಿ ಚರ್ಚಿಸಿ ನಂತರ ಅದೇ ತೋಟದ ಕೂಲಿ ಕಾರ್ಮಿಕ ನಾಗರಾಜ್‌ನಾಯ್ಕ ಎಂಬುವವರನ್ನು ಹಣದ ಆಸೆ ತೋರಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ದೂರಿದರು.
ಕೊಲೆಯು ಸಿದ್ದಾಪುರ ಗ್ರಾಮದ ಮಾಲೀಕನ ತೋಟದಲ್ಲಿ ನಡೆದಿದೆಯಾದರೂ ಆತನ ಕುಟುಂಬದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆ ನಿಟ್ಟಿನಲ್ಲಿ ದಲಿತ ಹೆಣ್ಣುಮಗಳನ್ನು ಅತ್ಯಾಚಾರವೆಸಗಿ ಕೊಲೆಗೈದ ಎಲ್ಲಾ ಅಪರಾಧಿಗಳನ್ನು ಹಾಗೂ ಬೆಂಬಲಿಸಿರುವ ಅಧಿಕಾರಿಗಳನ್ನು ವಿರುದ್ಧವು ಕ್ರಮ ಕೈಗೊಳ್ಳಬೇಕು ಎಂದರು.
ಕೂಡಲೇ ಜಿಲ್ಲಾಡಳಿತ ಸಾಕ್ಷಿಗಳು ನಾಶವಾಗುವ ಮುನ್ನ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಿ ನೊಂದ ಕುಟುಂಬಕ್ಕೆ ಹಾಗೂ ಭಯದಿಂದ ಬದುಕುತ್ತಿರುವ ಬಡಕೂಲಿ ಕಾರ್ಮಿಕರಿಗೆ ರಕ್ಷಣೆ ಒದಗಿಸಿಕೊಡುವುದರ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
Dalit woman murder case be handed over to CBI ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್, ಮುಖಂಡರುಗಳಾದ ಅಂಬಳೆ ಕುಮಾರ್, ಲಕ್ಷ್ಮ ಣ್ ಹಾಜರಿದ್ದರು.