2023 Karnataka Budget Updates ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಮಾರು ಎರಡೂವರೆ ಗಂಟೆಗಳ ಸುದೀರ್ಘ ಬಜೆಟ್ ಮಂಡಿಸಿದ್ದಾರೆ.
14ನೇ ಬಾರಿ ಕರ್ನಾಟಕ ಬಜೆಟ್ ಮಂಡನೆ ಮಾಡಿದ್ದಾರೆ. ಪ್ರಮುಖವಾಗಿ ಮೂರು ಇಲಾಖೆಗಳಿಂದ 1,62,000 ಕೋಟಿ ತೆರಿಗೆ ಹಣ ಸಂಗ್ರಹದ ಗುರಿ ಹೊಂದಲಾಗಿದೆ. ಇದರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಿಂದ 1,01,000 ಲಕ್ಷ ಕೋಟಿ,ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ 25,000 ಕೋಟಿ, ಅಬಕಾರಿ ಇಲಾಖೆಯಿಂದ 36,000 ಕೋಟಿ ತೆರಿಗೆ ಸಂಗ್ರದ ಗುರಿಯನ್ನು ಸರ್ಕಾರ ಹೊಂದಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ವಸತಿ ನಿಲಯ ಸ್ಥಾಪನೆಗೆ 10 ಕೋಟಿ ರೂಪಾಯಿ ಅನುದಾನ. ಕಂಠೀರಣ ಕ್ರೀಡಾಂಗಣದಲ್ಲಿ ಕ್ರೀಡಾ ವಸತಿ ನಿಲಯ ಸ್ಥಾಪನೆಗೆ 10 ಕೋಟಿ ರೂ.ಅನುದಾನ ನೀಡಲಾಗಿದೆ.
ಒಲಂಪಿಕ್, ಪ್ಯಾರಾಲಂಪಿಕ್ ವಿಜೇತರಿಗೆ ಗ್ರೂಪ್ ಎ, ಏಷಿಯನ್, ಕಾಮನ್ ವೆಲ್ತ್ ಕ್ರೀಡಾಕೂಟ ವಿಜೇತರಿಗೆ ಗ್ರೂಪ್ ಬಿ ಹುದ್ದೆ
ಪೊಲೀಸ್, ಅರಣ್ಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.3 ರಷ್ಟು ಮೀಸಲಾತಿ ನೀಡಲಾಗಿದೆ.
ಬಜೆಟ್ ನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಬಲ ನೀಡಲಾಗಿದೆ.
ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಕಲ್ಪನೆಗಳ ಅನುಷ್ಠಾನಕ್ಕೆ ಮಾಸ್ಟರ್ಪ್ಲಾನ್
ಹಂಪಿ, ಮೈಲಾರ, ಗಾಣಗಾಪುರ, ಸನ್ನತಿ ಮತ್ತು ಮಳಖೇಡ, ಬೀದರ್, ರಾಯಚೂರು, ಕಲಬುರಗಿ ಕೋಟೆಗಳ ಸಮಗ್ರ ಅಭಿವೃದ್ಧಿಗೆ 75 ಕೋಟಿ ರೂ.
ಸವದತ್ತಿ ಯಲ್ಲಮ್ಮಗುಡ್ಡ, ದೇವರಗುಡ್ಡ, ಕಪ್ಪತ್ತಗುಡ್ಡ, ಬಾದಾಮಿ ಬನಶಂಕರಿ, ಲಕ್ಕುಂಡಿ ಪ್ರವಾಸಿ ತಾಣ, ಗದಗ ಜಿಲ್ಲೆ ಮಾಗಡಿ ಪಕ್ಷಿಧಾಮ ಸಮಗ್ರ ಅಭಿವೃದ್ಧಿಗೆ ಕ್ರಮ
ಮೈಸೂರಿನಲ್ಲಿ ಕರ್ನಾಟಕ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ ನಿರ್ಮಾಣ.
ಪುನೀತ್ ಸ್ಮರಣಾರ್ಥ ಆರೋಗ್ಯ ವ್ಯವಸ್ಥೆಗಾಗಿ 6 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಹೊಸದಾಗಿ 46 ಡಯಾಲಿಸಿಸ್ ಕೇಂದ್ರ ಆರಂಭಕ್ಕೆ 92 ಕೋಟಿ ರೂ. ಅನುದಾನ
23 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆಗೇರಿಸಲು 70 ಕೋಟಿ ರೂ. ಅನುದಾನ
ನವಜಾತ ಶಿಶು, ಮಕ್ಕಳು, ಮಹಿಳೆಯರಲ್ಲಿ ರಕ್ತಹೀತನೆ, ಅಪೌಷ್ಟಿಕತೆ ನಿವಾರಿಸಲು ಸಮಗ್ರ ಪರೀಕ್ಷೆ, ಚಿಕಿತ್ಸೆ ಅರಿವು ಮೂಡಿಸಲು 25 ಕೋಟಿ ರೂ. ಅನುದಾನ.
ಆಶಾಕಿರಣ ಕಾರ್ಯಕ್ರಮದಡಿ ಚಿತ್ರದುರ್ಗ, ರಾಯಚೂರು, ಉತ್ತರ ಕನ್ನಡ, ಮಂಡ್ಯದಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ನೇತ್ರ ತಪಾಸಣೆ, ಚಿಕಿತ್ಸಾ ಅಭಿಯಾನ
ಮಧುಮೇಹ, ರಕ್ತದೊತ್ತಡ ರೋಗಿಗಳ ಪತ್ತೆ ಹಚ್ಚಿ ಔಷಧಿ ಮನೆ ಬಾಗಿಲಿಗೆ ತಲುಪಿಸುವ ಪ್ರಾಯೋಗಿಕ ಯೋಜನೆ 8 ಜಿಲ್ಲೆಗಳಲ್ಲಿ ಜಾರಿ
ಪುನೀತ್ ಸ್ಮರಣಾರ್ಥ ಹಠಾತ್ ಹೃದಯ ಸಂಬಂಧಿ ಸಾವು ತಡೆಯಲು ಎಲ್ಲ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಆಟೋಮೇಟೆಡ್ ಎಕ್ಸ್ಟರ್ನಲ್ ಡೆಫಿಬ್ರಿಲ್ಲೇಟರ್ಸ್ ಅಳವಡಿಕೆಗೆ 6 ಕೋಟಿ ರೂ. ಅನುದಾನ ನೀಡಲಾಗುತ್ತದೆ.ಇಂದಿರಾ ಕ್ಯಾಂಟಿನ್ ಯೋಜನೆಗೆ 100 ಕೋಟಿ ರೂಪಾಯಿ ಮೀಸಲು ಇಡಲಾಗಿದೆ.ಹಣ ಸಂಗ್ರಹಣೆಗಾಗಿ ಮಧ್ಯದ ಮೇಲೆ 20% ದರ ಹೆಚ್ಚಳ ಮಾಡಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದುದ್ದಕ್ಕೂ ಪ್ರಸಿದ್ಧ ಕವಿಗಳ, ಸಾಹಿತಿಗಳ ಸಾಲುಗಳನ್ನು ಉಲ್ಲೇಖಿಸಿದರು.
2023 Karnataka Budget Updates ರಾಷ್ಟ್ರಕವಿ ಕುವೆಂಪು, ಕೆ.ಎಸ್. ನಿಸಾರ್ ಅಹ್ಮದ್, ಸಿದ್ದಯ್ಯ ಪುರಾಣಿಕ, ಪಿ. ಲಂಕೇಶ್, ಸರ್ವಜ್ಞ, ಇಂದಿರಾ ಗಾಂಧಿ ಸೇರಿದಂತೆ ಮಹಾನ್ ವ್ಯಕ್ತಿಗಳು ಹೇಳಿರುವ ಸಾಲುಗಳನ್ನು ಸ್ಮರಿಸುವ ಮೂಲಕ ಈ ಬಾರಿ ವಿಭಿನ್ನ ರೀತಿಯಲ್ಲಿ ಬಜೆಟ್ ಮಂಡಿಸಿದ್ದಾರೆ.