Health camp ಹುಟ್ಟಿದ ಮಗುವಿನಿಂದ ವಯಸ್ಸಿನ ಹಂತದವರೆಗೂ ಬೆಳೆಯುವ ಮಕ್ಕಳಿಗೆ ಅತ್ಯಂತ ಸೂಕ್ಷ್ಮ ತನದಿಂದ ಗಮನಹರಿಸುವ ಮೂಲಕ ಪೋಷಕರು ಮಹತ್ತರವಾದ ಜವಾಬ್ದಾರಿ ಹೊರಬೇಕು ಎಂದು ನಗರಸಭಾ ಸದಸ್ಯ ಮುನೀರ್ ಅಹ್ಮದ್ ಹೇಳಿದರು.
ನಗರದ ಉಪ್ಪಳ್ಳಿ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಶಾಂತಿನಗರ, ಉಪ್ಪಳ್ಳಿ ವಾರ್ಡಿನ 0-18 ವರ್ಷದ ಮಕ್ಕಳಿಗೆ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕೆಲವು ಆಕಸ್ಮಿಕ ಹಾಗೂ ವಂಶಪರಂಪಾರ್ಯವಾಗಿ ವಿವಿಧ ತೊಂದರೆಗೀಡಾಗುವ ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ತಪಾಸಣೆ ಸೇರಿದಂತೆ ಆಪರೇಷನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ನಿವಾಸಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಮಕ್ಕಳಿಗೆ ಸಣ್ಣವಯಸ್ಸಿನಿಂದ ಕೆಲವು ಕಿಡ್ನಿ, ಕೈಕಾಲು ಅಥವಾ ಮೆದುಳಿನ ಶಕ್ತಿಹೀನತೆಯಿಂದ ಬಳಲುತ್ತಿರು ತ್ತಾರೆ. ಚಿಕಿತ್ಸೆಗೆ ತೆರಳಿದರೆ ಸಾವಿರಾರು ರೂ.ಗಳ ವ್ಯಯಿಸಲು ಶಕ್ತಿ ಹೊಂದಿರದ ಹಿನ್ನೆಲೆಯಲ್ಲಿ ಸರ್ಕಾರ ಅಂತಹ ಆರ್ಥಿಕದಿಂದ ಹಿಂದುಳಿದಿರುವ ಕುಟುಂಬದವರಿಗೆ ಅನುಕೂಲವಾಗಲು ಇಂತಹ ಶಿಬಿರ ಆಯೋಜಿಸಿದೆ ಎಂದರು.
ವೈದ್ಯೆ ಡಾ. ಪಾವನ ಮಾತನಾಡಿ 0-18ವರ್ಷ ಒಳಪಟ್ಟ ಮಕ್ಕಳಿಗೆ ಶೀತ, ಜ್ವರ ಅಥವಾ ಸಣ್ಣಪುಟ್ಟ ಸಮಸ್ಯೆ ಗಳಿಗೆ ಸ್ಥಳದಲೇ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಮಟ್ಟದ ಚಿಕಿತ್ಸೆ ಹೊಂದಬೇಕಾದರೆ ಜಿಲ್ಲಾ ಆರಂಭೀಕ ಮದ್ಥಸ್ಥಿಕೆ ಕೇಂದ್ರಕ್ಕೆ ಕಳುಹಿಸಿ ಉಚಿತವಾಗಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ಹೇಳಿದರು.
Health camp ಈ ಸಂದರ್ಭದಲ್ಲಿ ವೈದ್ಯೆ ಡಾ. ಕೋಮಲ, ಸಿಬ್ಬಂದಿಗಳಾದ ರೇಣುಕಾ, ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರದ ಅಧಿಕಾರಿ ದಿವ್ಯಾ, ಆಶಾ ಸುಗಮಕಾರರೆ ಶೋಭಾ, ಕಾರ್ಯಕರ್ತೆಯರಾದ ರೇಣುಕಾ, ಸುಶೀಲ, ಮಾಲ, ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು.