Annual tax 2022-23 ನೇ ಸಾಲಿನಲ್ಲಿ ಶಿವಮೊಗ್ಗ ಆಸ್ತಿ ಮಾಲೀಕರು ಮತ್ತು ಅನುಭೋಗದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಿದ್ದು ಮತ್ತು ಇದಕ್ಕೆ ಕಾರಣರಾದ ಎಲ್ಲರಿಗೂ ಶಿವಮೊಗ್ಗ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಆರತಿ ಆ.ಮ ಪ್ರಕಾಶ್ ಹಾಗೂ ಸದಸ್ಯರುಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವಸೂಲಿಯಲ್ಲಿ ಹೆಚ್ಚಿನ ಕಾರ್ಯ ನಿರ್ವಹಿಸಿ ಸಾಧನೆಗೆ ಕಾರಣಕರ್ತರಾದ ಆಯುಕ್ತರು, ಉಪಆಯುಕ್ತರು (ಕಂದಾಯ), ಕಂದಾಯ ಶಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಮಹಾಪೌರರು, ಉಪಮಹಾಪೌರರು, ತೆರಿಗೆ ನಿರ್ಧರಣೆ ಸ್ಥಾಯೀ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳು, ಆಡಳಿತ ಪಕ್ಷದ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ಅಧ್ಯಕ್ಷರು, ಎಲ್ಲಾ ಸ್ಥಾಯಿ ಸಮಿತಿಯ ಅಧ್ಯಕ್ಷರುಗಳು ಹಾಗೂ ಗೌರವಾನ್ವಿತ ಸದಸ್ಯರುಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ತೆರಿಗೆದಾರರ ಸಹಕಾರವನ್ನು ಕೋರುತ್ತಾ, ಸರ್ಕಾರದ ಆದೇಶದಂತೆ ರಾಜ್ಯಾದ್ಯಾಂತ ಇ-ಆಸ್ತಿ ಮತ್ತು ಇ-ಸ್ವತ್ತುಗಳನ್ನು ಆಸ್ತಿ ಕಣಜ ತಂತ್ರಾಂಶ ದಾಖಲು ಮಾಡುತ್ತಿದೆ. ಎಲ್ಲಾ ಅಧಿಕೃತ ಸ್ವತ್ತಿನ ಆಸ್ತಿ ಮಾಲೀಕರು ತಮ್ಮ ಆಸ್ತಿಯ ಕಾನೂನಾತ್ಮಕ ದಾಖಲೆಗಳನ್ನು ಪಾಲಿಕೆಯ ಕಂದಾಯ ವಿಭಾಗದ ಕಚೇರಿಗೆ ಸಲ್ಲಿಸಲು ಅವರು ಕೋರಿದ್ದಾರೆ.
Annual tax ಶಿವಮೊಗ್ಗ ಮಹಾನಗರಪಾಲಿಕೆಗೆ ಸಂಬಂಧಪಟ್ಟ ಕಂದಾಯ ಶಾಖೆಯ ಕೆಲಸ ಕಾರ್ಯಗಳನ್ನು ಮಧ್ಯವರ್ತಿಗಳಿಗೆ ವಹಿಸದೇ ತಾವೇ ಖುದ್ದಾಗಿ ಭೇಟಿ ನೀಡಿ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.