Sagara Press Trust ಇತ್ತೀಚೆಗೆ ಕೋಟೆಕೊಪ್ಪ ರೈತ ಮಹಿಳೆ ಕುಟುಂಬದ ಮೇಲೆ ದೌರ್ಜನ್ಯ ನಡೆಯಿತು ಎಂಬ ಆರೋಪದಡಿ ಮಾಜಿ ಶಾಸಕ ಹಾಲಪ್ಪನವರು
ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಲ್ಲದೇ, ಪೊಲೀಸರು ದೌರ್ಜನ್ಯ ಎಸಗಿದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ಈ ರೀತಿಯ ರೈತಪರ ಕಾಳಜಿ ಅಧಿಕಾರದಲ್ಲಿದ್ದಾಗ ಹಾಲಪ್ಪನವರಿಗೆ ಯಾಕೆ ಬರಲಿಲ್ಲ ? ಇದು ಕೇವಲ ಮೊಸಳೆ ಕಣ್ಣೀರೇ ? ಇಂಥ
ಕಪಟ ಭಾವನೆ ಈಗ ಯಾಕೆ ? ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಧರಮೂರ್ತಿ ಪ್ರಶ್ನಿಸಿದರು.
ಸಾಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಖಂಡಿಕಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಸಂಬಂಧ ಶ್ರೀಕಾಂತ್ ನಾಯಕ್ ಅವರ ಕುಟುಂಬಕ್ಕೆ ಅನ್ಯಾಯವಾಗಿದೆ. ಸರ್ಕಾರಿ
ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸ ಆಗುತ್ತಿಲ್ಲ. ಗ್ರಾಮ ಪಂಚಾಯಿತಿ ಪಿಡಿಓ ರವರು ಕೆಲಸ ಮಾಡಿಕೊಡಲು 05 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ನಂತರದ
ಬೆಳವಣಿಗೆಯಲ್ಲಿ ಪಿಡಿಓ ರವರು ಅಮಾನತ್ತಾದರು.
Sagara Press Trust ತಾ.ಪಂ.ಇಒ ರವರು 10 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು ಅಂದಿನ ಶಾಸಕರ
ಗಮನಕ್ಕೆ ತಂದರೂ ಯಾವುದಕ್ಕೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ತಾಲ್ಲೂಕು ಪಂಚಾಯಿತಿಯಲ್ಲೂ ಇಲ್ಲದ ಕಿರುಕುಳ ನೀಡಿದರು. ಈ ಬಗ್ಗೆ
ಹಲವು ಪ್ರತಿಭಟನೆಗಳೂ ನಡೆದವು. ರೈತ ಶ್ರೀಕಾಂತ್ ನಾಯಕ್ ರವರು
ತಾ.ಪಂ. ಎದುರು ವಿಷ ಕುಡಿಯಲು ಮುಂದಾಗಿದ್ದರು. ಈ ಎಲ್ಲ
ವಿಷಯಗಳನ್ನು ಅಂದಿನ ಶಾಸಕ ಹಾಲಪ್ಪನವರಿಗೆ ತಿಳಿಸಿದರೂ ಅವರು
ಯಾವುದೇ ರೈತಪರ ಕಾಳಜಿ ತೋರಲಿಲ್ಲ. ಅನ್ಯಾಯವಾದವರಿಗೆ ನ್ಯಾಯ
ಕೊಡಿಸಲಿಲ್ಲ. ಅನೇಕ ಬಾರಿ ತಾಲ್ಲೂಕು ಪಂಚಾಯಿತಿ, ಪೊಲೀಸ್ ಠಾಣೆ ಎದುರು
ಹಲ್ಲೆಗೊಳಗಾದವರು, ನೊಂದವರು ಪ್ರತಿಭಟನೆ, ಹೋರಾಟ ನಡೆಸಿದರು.
ಈಗ ಅಧಿಕಾರ ಕಳೆದುಕೊಂಡ ನಂತರ ಅವರಿಗೆ ಜ್ಞಾನೋದಯವಾಯಿತೇ ?
ನಮ್ಮ 05 ವರ್ಷದ ಆಡಳಿತದ ಅವಧಿಯಲ್ಲಿ ಜನಪರವಾದ ಕಾಳಜಿ ಎಲ್ಲಿ
ಹೋಗಿತ್ತು ? ಎಂದವರು ಪ್ರಶ್ನಿಸಿದರು.
ಈಗಿನ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಜಾತ್ಯಾತೀತ,
ಪಕ್ಷಾತೀತವಾಗಿ ಯಾವುದೇ ಒತ್ತಡ ಬಂದರೂ ನ್ಯಾಯದ ಪರ ಇದ್ದಾರೆ.
ನೊಂದವರ ಪಾಲಿಗೆ ನ್ಯಾಯ ಒದಗಿಸಲು ಅವರು ಸದಾ ಬದ್ಧರಾಗಿದ್ದಾರೆ.
ಯಾವುದೇ ಸಮಸ್ಯೆಗೂ ಸ್ಪಂದಿಸಿ ಪರಿಹಾರ ಒದಗಿಸುತ್ತಾರೆ.
ಮಾಜಿ ಶಾಸಕ
ಹಾಲಪ್ಪನವರ ಅವಧಿಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಇನ್ನಿತರೆ
ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ಬಯಲಾಗಿದೆ. ಅವರ ಈಗಿನ
ಮೊಸಳೆ ಕಣ್ಣೀರಿಗೆ ಬೆಲೆ ಇಲ್ಲ ಎಂದರು.
ರೈತ ಶ್ರೀಕಾಂತ್ ನಾಯಕ್ ಮಾತನಾಡಿ, ಮಾಜಿ ಶಾಸಕ ಹಾಲಪ್ಪನವರದು
ದುಷ್ಟ ಪ್ರವೃತ್ತಿ. ನಮಗೆ ಅನ್ಯಾಯವಾದ ಕುರಿತು ಅಹವಾಲು ಹೇಳಿದರೆ
ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸ್ ಠಾಣೆಯಲ್ಲಿ ನಮ್ಮ ದೂರನ್ನೂ
ದಾಖಲಿಸಿಕೊಳ್ಳಲಿಲ್ಲ. ಲಂಚಕ್ಕಾಗಿ ಅಧಿಕಾರಿಗಳು 05, 10 ಲಕ್ಷ ರೂ. ಬೇಡಿಕೆ ಇಟ್ಟರು.
ಶಾಸಕರಿಗೆ ಪಾಲು ಕೊಡಬೇಕು ಎಂದರು.
ನಮಗೆ ಆದ ಅನ್ಯಾಯವನ್ನು
ಸಹಿಸಿಕೊಳ್ಳದೇ ನಮ್ಮ ಕುಟುಂಬದಿಂದ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ್ದೆವು
ಎಂದು ನೊಂದು ನುಡಿದರು.
ಕಾಂಗ್ರೆಸ್ ಪಕ್ಷದ ಪ್ರಮುಖರಾದ ಅನ್ವರ ಬಾಷಾ, ಚಂದ್ರಶೇಖರ್,
ನಾರಾಯಣಪ್ಪ ಸೂರನಗದ್ದೆ, ಆನಂದ ಬಿಳಿಸಿರಿ, ಬಸವರಾಜ್ ಕುಗ್ವೆ, ಸುಜಾತಾ
ಶ್ರೀಕಾಂತ್ ನಾಯಕ್, ಲಿಂಗರಾಜ್ ಆರೋಡಿ, ರಾಘವೇಂದ್ರ ಮಾಲ್ವೆ ಇತರರು
ಹಾಜರಿದ್ದರು.