Bapuji Institute of Hi-Tech Education ವಿದ್ಯಾರ್ಥಿಗಳು ಎಥನಿಕ್ ಡೇ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮನೋರಂಜನೆಯಲ್ಲಿ ತೋರುವಷ್ಟು ಆಸಕ್ತಿಯನ್ನು ಪರೀಕ್ಷೆಯಲ್ಲೂ ತೋರಬೇಕು, ಆ ಮೂಲಕ ವಿಶ್ವವಿದ್ಯಾನಿಲಯದ ಹತ್ತಕ್ಕೆ ಹತ್ತೂ ರ್‍ಯಾಂಕ್ ಗಳನ್ನು ಕಾಲೇಜಿಗೆ ತಂದು ಕೊಡುವಂತಾಗಬೇಕು ಎಂದು ಡಾ ಅಥಣಿ ಎಸ್ ವೀರಣ್ಣ ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಬಾಪೂಜಿ ಮ್ಯಾನೇಜ್ಮೆಂಟ್ ಕಾಲೇಜಿನ ಆವರಣದಲ್ಲಿ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ನ ವಿದ್ಯಾರ್ಥಿಗಳ ಎಥನಿಕ್ ಡೇ ಉದ್ಘಾಟಿಸಿ ಮಾತನಾಡುತ್ತಾ, ಇಂತಹ ದಿನಾಚರಣೆಯ ಮೂಲಕ ನಮ್ಮ ಸಾಂಪ್ರದಾಯಿಕವಾದ ಉಡುಗೆ ತೊಡುಗೆ ಜಾನಪದೀಯವಾದ ರೀತಿ ರಿವಾಜುಗಳ ಪುನರಾವಲೋಕನಕ್ಕೆ ಕಾರಣವಾಗುವಂತಿದ್ದು ವಿದ್ಯಾರ್ಥಿಗಳಲ್ಲಿ ಪಾರಂಪರಿಕ ವಿಧಾನದ ಪ್ರತಿಪಾದನೆ ಮತ್ತು ವಿನಿಮಯಕ್ಕೂ, ಸ್ನೇಹ ವೃದ್ಧಿಗೂ ಕಾರಣವಾಗುತ್ತದೆ ಎಂದ ಅಥಣಿ ವೀರಣ್ಣನವರು, ಇದು ನಿಮ್ಮ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ಸ್ಫೂರ್ತಿದಾಯಕವಾಗಿರಲಿ ಎಂದು ಆಶಿಸಿದರು.
Bapuji Institute of Hi-Tech Education ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ, ಪ್ರಾಂಶುಪಾಲ ಡಾ ಬಿ ವೀರಪ್ಪ ಭಾಗವಹಿಸಿದ್ದ ಕಾರ್ಯಕ್ರಮದ ನಿರೂಪಣೆಯನ್ನು ಸಂಜನಾ ಮತ್ತು ಧನ್ಯಾ ಮಾಡಿದರೆ ಜಾನಪದ ಗೀತೆಗಳನ್ನು ಸಮದ್ವಿತಾ ಮತ್ತು ತಂಡದವರು ಹಾಡಿದರು.
ಸಾಂಪ್ರದಾಯಕ ಉಡುಗೆ ತೊಡುಗೆಗಳೊಂದಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಂದಿಧ್ವಜ, ಗಗ್ಗರಗಣೆ, ಡೋಲು ಮುಂತಾದ ಜಾನಪದ ವಾದ್ಯಗಳಿಗೆ ಹೆಜ್ಹೆಹಾಕಿ ನೃತ್ಯ ಮಾಡಿದರು.