World Tobacco Day ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ನಗರದ ಆರೋಗ್ಯ ಕೇಂದ್ರವು ಕೋಟೆಯಿಂದ ಗುಲಾಬಿ ಆಂದೋಲನ ಜಾಥಾ ಮಾಡಿ ಸಾರ್ವಜನಿಕರಲ್ಲಿ ತಂಬಾಕು ಸೇವನೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ಗುಲಾಬಿ ಹೂ ಹಾಗೂ ಕರಪತ್ರ ಕೊಡುವುದರೊಂದಿಗೆ ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಕ್ರಮಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ಚಂದ್ರಶೇಖರ್.ಜಿ.ಬಿ ಹಾಗೂ ರೊಟೇರಿಯನ್ ವಿಜಯ್‍ಕುಮಾರ್ ಇವರು ಚಾಲನೆ ನೀಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡವೀರಪ್ಪ ವಿಶ್ವ ತಂಬಾಕು ರಹಿತ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿದರು.
World Tobacco Day ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮೇಶ್, ಜಿಲ್ಲಾ ತಂಬಾಕು ಘಟಕದಿಂದ ಹೇಮಂತ್ ಉಪಸ್ಥಿತರಿದ್ದರು. ಈ ಜಾಥಾದಲ್ಲಿ ನಗರ ವೈದ್ಯಾಧಿಕಾರಿ ಡಾ|| ಪ್ರಕಾಶ್, ಜೆಸಿಐ ನ ವಲಯಾಧಿಕಾರಿಯಾದ ಪ್ರತಿಮಾ ಡಾಕಪ್ಪಗೌಡ, ಮೈತ್ರಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಆರಕ್ಷಕ ಸಿಬ್ಬಂದಿಯವರು ಹಾಜರಿದ್ದರು.