Shree Lakshmi Narasimha ಶ್ರೀನೃಸಿಂಹಾವತಾರ ಶ್ರೀಹರಿಯ ದಶಾವತಾರದಲ್ಲಿ
ನಾಲ್ಕನೆಯ ಅವತಾರವಾಗಿದೆ.
ಹೆಸರಿನಲ್ಲೇ ಸೂಚಿಸಿರುವಂತೆ ಅರ್ಧನರರೂಪ ಮತ್ತು ಅರ್ಧಮೃಗರೂಪ(ಸಿಂಹ)ದ ಅವತಾರವಾಗಿದೆ.ಭಗವಂತನನ್ನು ಒಲಿಸಿಕೊಳ್ಳಲು
ಜಪ,ತಪಸ್ಸು ಮಾಡುವುದರಲ್ಲಿ ದೇವತೆಗಳು ಎಷ್ಟು
ನಿಷ್ಠೆಯಿಂದ ಮಾಡುತ್ತಿದ್ದರೋ ದಾನವರೂ ಕೂಡ
ಅಷ್ಟೇ ನಿಷ್ಠೆಯಿಂದ ಭಗವಂತನಲ್ಲಿ ಮನಸ್ಸನ್ನಿಟ್ಟು
ಜಪತಪಗಳನ್ನು ಮಾಡಿ ತಮಗೆ ಬೇಕಾದ ವರಗಳನ್ನು ಪಡೆಯುತ್ತಿದ್ದರು.
ವರಗಳನ್ನು ಒಳ್ಳೆಯ ಕೆಲಸಕ್ಕಾಗಿ ಕೇಳಿದರೆ ವರಕೊಡುವವರಿಗೂ ಸಂತೋಷವಾಗುತ್ತದೆ.ಅದೇ
ವಿನಾಶ ಕಾರ್ಯಗಳಿಗೆ ವರಗಳನ್ನು ಕೇಳಿದರೆ,ವರ
ಕೊಟ್ಟವರಿಗೆ ಕಷ್ಟವಾಗುತ್ತದೆ.
ಇದೇ ಆಗಿದ್ದು ದಾನವರಾಜ ಹಿರಣ್ಯ ಕಶಿಪುವಿನ ವಿಷಯದಲ್ಲಿಯೂ.ಹಿರಣ್ಯಕಶಿಪು ಹರಿಯಮೇಲಿನ ದ್ವೇಷದಿಂದಅವನಮೇಲೆಸೇಡುತೀರಿಸಿಕೊಳ್ಳಬೇಕು ಎಂದು ಕಠಿಣ ತಪಸ್ಸುಮಾಡಿ ಬ್ರಹ್ಮದೇವರಿಂದ ವರ ಪಡೆಯುತ್ತಾನೆ.
ಇವನು ಕೇಳಿದ ವರ ಎಂಥಾದ್ದೆಂದರೆ ಇವನಿಗೆ ಸಾವೇ ಬರಬಾರದು ಎಂದು.ಇವನು ಕೇಳಿದ ವರಕ್ಕೆ ಬ್ರಹ್ಮದೇವರೇ ತಲೆಕೆರೆದುಕೊಳ್ಳುವ ಹಾಗೆ ಆಗುತ್ತೆ.ಅದಕ್ಕೆ ಬ್ರಹ್ಮದೇವರು ಹೇಳುತ್ತಾರೆ ಭೂಲೋಕದಲ್ಲಿ ಹುಟ್ಟಿದವರಿಗೆ ಸಾವು ನಿಶ್ಚಿತ ಇದು ನಿಯಮ, ಹಾಗಾಗಿ ನೀನು ಬೇರೆ ವರವನ್ನು ಕೇಳು
ಎಂದು ಹೇಳುತ್ತಾನೆ.
ಹಿರಣ್ಯಕಶಿಪು ನನಗೆ ಹಗಲಿನಲ್ಲಾಗಲೀ,ರಾತ್ರಿಯಲ್ಲಾಗಲೀ,ಮನುಷ್ಯರಿಂದಾಗಲೀ,ಶಸ್ತ್ರಾಸ್ತ್ರಗಳಿಂದಾಗಲೀ,ಮನೆಯ ಒಳಗಾಗಲೀ,ಹೊರಗಾಗಲೀ ,ಮೃಗಗಳಿಂದಾಗಲೀ
ಸಾವು ಬರಬಾರದು ಎಂದು ಕೇಳುತ್ತಾನೆ.
ಬ್ರಹ್ಮದೇವರು ತಥಾಸ್ತು ಎಂದು ಹೇಳಿ ಅದೃಶ್ಯರಾಗುತ್ತಾರೆ.ಹೇಳಿಕೇಳಿ ಹಿರಣ್ಯಕಶಿಪು ರಾಕ್ಷಸ,ಮೇಲಾಗಿ ಹರಿಯ ಪರಮ ದ್ವೇಷಿಯೂ
ಆಗಿದ್ದನು.ಬ್ರಹ್ಮದೇವರು ಕೊಟ್ಟ ವರದಿಂದ ಇನ್ನೇನುನನಗೆಯಾರಿಂದಲೂಸಾವುಬರುವುದಿಲ್ಲ,ಏನುಬೇಕಾದರೂ ದುಷ್ಟ ಕೆಲಸಗಳನ್ನು ಮಾಡಿ ಜಯಿಸ ಬಹುದು ಎಂದು ಅಹಂಕಾರದಿಂದ ಬೀಗುತ್ತಾನೆ.
ಹಿರಣ್ಯ ಕಶಿಪು ತಪಸ್ಸಿಗೆ ಹೋಗುವಾಗ ಅವನ ಹೆಂಡತಿ ಕಯಾದು ಗರ್ಭಿಣಿಯಾಗಿರುತ್ತಾಳೆ. ಅವಳು ನಾರದರ ಆಶ್ರಮದಲ್ಲಿ ಇರುತ್ತಾಳೆ.ಅವಳ ಹೊಟ್ಟೆಯೊಳಗಿರುವವನು ಶ್ರೀಹರಿಯ ಪರಮ ಭಕ್ತ ಪ್ರಹ್ಲಾದ.ಕಯಾದುವಿಗೆ ನವಮಾಸಗಳು ಕಳೆದು ಗಂಡುಮಗುವಿನ ತಾಯಿಯಾಗುತ್ತಾಳೆ.
ಹಿರಣ್ಯ ಕಶಿಪುವಿಗೆ ತನಗೆ ಹರಿಯನ್ನು ಎದುರಿಸಲು
ತನ್ನಮಗನೂ ಜೊತೆಗೆ ಸಿಗುತ್ತಾನೆ ಎಂದು ಬಹಳ ಖುಷಿಯಾಗುತ್ತದೆ. ತಪಸ್ಸು ಮುಗಿಸಿಕೊಂಡು ನಾರದರ ಆಶ್ರಮದಿಂದ ಹೆಂಡತಿ ಮಗುವನ್ನು ಕರೆದುಕೊಂಡು ಅರಮನೆಗೆ ಬರುತ್ತಾನೆ.
ಹುಟ್ಟಿದ ಮಗುವಿಗೆ ಪ್ರಹ್ಲಾದ ಎಂದು ಹೆಸರಿಡುತ್ತಾರೆ.ತಂದೆ ಹರಿಯ ಪರಮ ದ್ವೇಷಿ,ಮಗ
ಹರಿಯ ಪರಮ ಭಕ್ತ.ಹಿರಣ್ಯ ಕಶಿಪುವಿಗೆ ಹರಿಯ
ಮೇಲಿನ ದ್ವೇಷ ಎಷ್ಟಿತ್ತೆಂದರೆ ಹರಿಯ ಭಕ್ತನಾಗಿದ್ದ ತನ್ನ ಸ್ವಂತ ಮಗನನ್ನೂ ಕೂಡ ಹಿಂದೆ ಮುಂದೆ
ಯೋಚಿಸದೆ ಕೊಲ್ಲಿಸಲು ಮುಂದಾಗುತ್ತಾನೆ.
ಬೆಟ್ಟದಿಂದ ತಳ್ಳಿಸುತ್ತಾನೆ,ಆನೆಗಳಿಂದ ತುಳಿಸುತ್ತಾನೆ.ವಿಷ ಸರ್ಪಗಳಿಂದ ಕಚ್ಚಿಸುವಂತೆ ಮಾಡುತ್ತಾನೆ.ಕಡೆಗೆ ಪ್ರಹ್ಲಾದನ ಹೆತ್ತ ತಾಯಿ ಕಯಾದುವಿನಿಂದಲೇ ವಿಷವನ್ನು ಪ್ರಹ್ಲಾದನಿಗೆ
ಕುಡಿಸುವಂತೆ ಮಾಡುತ್ತಾನೆ.ಕಾಪಾಡುವವನು ಶ್ರೀಹರಿ ಇದ್ದ ಮೇಲೆ ಯಾವ ಭಯ,ಪ್ರಹ್ಲಾದನಿಗೆ
ಹಿರಣ್ಯ ಕಶಿಪು ಕೊಟ್ಟ ಸಂಕಷ್ಟಗಳನ್ನೆಲ್ಲಾ ಶ್ರೀಹರಿ ಪರಿಹರಿಸುತ್ತಾನೆ.ಹಿರಣ್ಯಕಶಿಪುವಾದರೋ ಸಿಟ್ಟಿನಿಂದ ಹೆಚ್ಚಿದ ರಕ್ತದೊತ್ತಡಕ್ಕೆ ಒಳಗಾಗಿ ,ಮಗನನ್ನು ಹಿಡಿದು ನಿನ್ನ ಹರಿಯು ಎಲ್ಲ ಕಡೆಯೂ ಇದ್ದಾನೆಯೋ?ಎಂದು ಕೇಳಿದಾಗ ಪ್ರಹ್ಲಾದನು ಅಷ್ಟೇ ಶಾಂತನಾಗಿ “ಹೌದಪ್ಪಾ ಶ್ರೀಹರಿಯು ಎಲ್ಲಕಡೆಯೂ ಇದ್ದಾನೆ,ಅವನಿಲ್ಲದ ಜಾಗವೇ ಇಲ್ಲ”
ಎಂದು ಹೇಳುತ್ತಾನೆ.
Shree Lakshmi Narasimha ಹಿರಣ್ಯಕಶಿಪು ತನ್ನ ಅರಮನೆಯ ಕಂಬಗಳನ್ನು ತೋರಿಸುತ್ತ ,ಇದರಲ್ಲಿ
ಇರುವನೋ ನಿನ್ನ ಶ್ರೀಹರಿ ಎಂದು ಒಂದು ಕಂಬವನ್ನು ತೋರಿಸಿದಾಗ,ಪ್ರಹ್ಲಾದನು ಖಂಡಿತವಾಗಿಯೂ ಇದ್ದಾನೆ ಎಂದು ಹೇಳುತ್ತಾನೆ.
ಹಿರಣ್ಯಕಶಿಪು ತನ್ನ ಗದೆಯಿಂದ ಆ ಕಂಬಕ್ಕೆ ಪ್ರಹಾರ ಮಾಡುತ್ತಾನೆ.ಕಂಬ ಸೀಳಿ ಭಯಂಕರ ಶಬ್ದದೊಂದಿಗೆ ಶ್ರೀಹರಿಯು ನೃಸಿಂಹಾವತಾರದಿಂದ
ಹೊರ ಬಂದುಹಿರಣ್ಯಕ ಶಿಪುವನ್ನು ಸಂಹಾರ ಮಾಡುತ್ತಾನೆ. ನರಸಿಂಹ ದೇವರ ಉಗ್ರರೂಪವನ್ನು ಶಾಂತ ಮಾಡಲುಲಕ್ಷ್ಮೀದೇವಿಯಿಂದಲೂಸಾಧ್ಯವಾಗುವುದಿಲ್ಲ.ಕಡೆಗೆ ಬಾಲಕ ಪ್ರಹ್ಲಾದನ ಭಕ್ತಿಯ ಪ್ರಾರ್ಥನೆಗೆ ಮನಸೋತು ಶಾಂತನಾಗುತ್ತಾನೆ.ಪ್ರಹ್ಲಾದನ ಪ್ರಾರ್ಥನೆ ಮೇರೆಗೆ ಹಿರಣ್ಯಕಶಿಪುವಿಗೆ ಮೋಕ್ಷವನ್ನು ದಯಪಾಲಿಸುತ್ತಾನೆ.
ಕೋಪ,ಅಹಂಕಾರ,ಅಸೂಯೆ ತುಂಬಿರುವ ಹಿರಣ್ಯ
ಕಶಿಪುವನ್ನು ನಮ್ಮೊಳಗಿನಿಂದ ಹೊರಹಾಕಿ ಓಡಿಸೋಣ.ಶಾಂತಿ,ಸಮಾಧಾನ,ಸಂತೋಷ,ತೃಪ್ತಿ
ಯ ಲಕ್ಷ್ಮೀನರಸಿಂಹನನ್ನು ನಮ್ಮೊಳಗೆ ತುಂಬಿಕೊಂಡು ಶ್ರೀಲಕ್ಷ್ಮೀನರಸಿಂಹಸ್ವಾಮಿಯ ಅನುಗ್ರಹ ಪಡೆಯೋಣ.
ಲೇ: ಎನ್.ಜಯಭೀಮ್ ಜೊಯ್ಸ್, ಶಿವಮೊಗ್ಗ