Saturday, November 23, 2024
Saturday, November 23, 2024

Karnataka Assembly Elections ಚಿಕ್ಕಮಗಳೂರು ಕಾಂಗ್ರೆಸ್ ಕಚೇರಿಯಲ್ಲಿ ವಿವಿಧ ಮುಖಂಡರ ಪಕ್ಷ ಸೇರ್ಪಡೆ

Date:

Karnataka Assembly Elections ಸ್ವಾತಂತ್ರ್ಯ ಪೂರ್ವದ ನಂತರ ಜವಾಹರ್‌ಲಾಲ್ ನೆಹರು ಅವರಿಂದ ಹಿಡಿದು ಮನಮೋಹನ್‌ಸಿಂಗ್‌ತನಕ ಅನೇಕ ಕಾಂಗ್ರೆಸ್‌ನ ಪ್ರಧಾನಿ ಮಂತ್ರಿಗಳು ದೇಶಕ್ಕಾಗಿ ದುಡಿಯುವ ಜೊತೆಗೆ ಪ್ರಾಣವನ್ನು ಲೆಕ್ಕಿಸದೇ ದೇಶದ ಅಭಿವೃದ್ದಿ ಹಾಗೂ ಜನತೆಯ ಶ್ರೇಯೋಭಿವೃದ್ದಿಗಾಗಿ ಕಾರ್ಯನಿರ್ವಹಿಸಿದ್ದರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮೂಗ್ತಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ನೆಲ್ಲೂರು, ಮತ್ತಾವರ ಹಾಗೂ ದುಂಬಗೆರೆಯ ಹಾಲಿ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ವಿವಿಧ ಪಕ್ಷವನ್ನು ತೊರೆದು ಮರಳಿಗೆ ಕಾಂಗ್ರೆಸ್ ಕುಟುಂಬಕ್ಕೆ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಇದುವರೆಗೂ ಯಾವುದೇ ಶಾಶ್ವತ ಕಾಮಗಾರಿಗಳು ನಡೆದಿಲ್ಲ. ಸಗೀರ್ ಅಹ್ಮದ್ ಅವರ ಅವಧಿಯಲ್ಲಿ ಕುಡಿಯುವ ನೀರು, ಬಸ್ ನಿಲ್ದಾಣ ಸೇರಿದಂತೆ ಜನಸಾಮಾನ್ಯರಿಗೆ ಅನುಕೂಲವಾಗುವ ಕೆಲಸ ಗಳಾಗಿವೆ. ಆದಾದ ಬಳಿಕ ಬಿಜೆಪಿಯ ಶಾಸಕರು ರಾಜಕೀಯ ಮಾಡಿಕೊಂಡು ಅಭಿವೃದ್ದಿ ಹೊಂದುವುದರ ಜೊತೆಗೆ ಕ್ಷೇತ್ರದಲ್ಲಿ ಸ್ವಯಂ ಘೋಷಿತ ಮುಖ್ಯಮಂತ್ರಿ ಎಂದು ಹೇಳಿಕೊಂಡು ಹಗಲು ಕನಸು ಕಾಣುತ್ತಿದ್ದಾರೆ ಎಂದರು.

ಬಿಜೆಪಿಯ ಕೇಂದ್ರ ಸರ್ಕಾರ ಈಗಾಗಲೇ ಹಲವಾರು ಸರ್ಕಾರಿ ಸ್ವೌಮ್ಯದ ಕಂಪನಿಗಳನ್ನು ಮಾರಾಟ ಮಾಡಿವೆ. ಜನಸಾಮಾನ್ಯರ ದಿನೋಪಯೋಗಿ ವಸ್ತುಗಳ ಬೆಲೆಏರಿಸಿ ಬದುಕಲಾರದ ಸ್ಥಿತಿಗೆ ತಂದೊಡ್ಡಲಾಗಿದೆ. ಇದನ್ನೆಲ್ಲಾ ಮತದಾರರು ಅರಿತುಕೊಂಡು ಮೇ.10 ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ಅಭಿವೃದ್ದಿ ಪರ ನಿಲ್ಲುವಂತಾಗಬೇಕು ಎಂದರು.

Karnataka Assembly Elections ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ ಎಂದು ಕೆಲವು ಬಿಜೆಪಿ ನಾಯಕರುಗಳು ಹೇಳಿಕೆ ನೀಡುತ್ತಿದ್ದು ಇದು ಸತ್ಯವಲ್ಲ. ಪಕ್ಷದಲ್ಲೂ ಅತಿಹೆಚ್ಚು ಮಂದಿ ಹಿಂದೂ ಸಮಾಜದವರಿದ್ದಾರೆ. ಅವರಲ್ಲಿರುವುದು ಜಾತ್ಯಾತೀತ ಹಾಗೂ ಹೊಂದಾಣಿಕೆಯೊಂದಿಗೆ ಬಾಳುವ ಸಂಸ್ಕೃತಿ.

ಆದರೆ, ಬಿಜೆಪಿಯಲ್ಲಿ ಹಿಂದುತ್ವ ಹೆಸರೇಳಿಕೊಂಡು ರಾಜಕೀಯ ಬಿಟ್ಟರೇ ಬರ‍್ಯಾವ ಸಂಸ್ಕೃತಿಗೆ ಅಷ್ಟೇನೇ ಪ್ರಾಮುಖ್ಯತೆ ನೀಡಿಲ್ಲ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷವು ಸಕುಟುಂಬವಿದ್ದಂತೆ. ಯಾವ ಸಮುದಾಯ ವನ್ನು ಕಡೆಗಣಿಸದೇ ಒಂದೇ ದಾರಿಯಲ್ಲಿ ಸಾಗುವ ಪಕ್ಷವಾಗಿದೆ. ಬಹುತತ್ವದಲ್ಲಿ ಏಕತೆಯನ್ನು ಕಾಣುವ ಪಕ್ಷವೆಂ ದರೆ ಕಾಂಗ್ರೆಸ್. ಇಲ್ಲಿ ಪ್ರೀತಿಯಿಂದ ಚುನಾವಣೆ ಎದುರಿಸಿದರೆ, ಬಿಜೆಪಿಯಲ್ಲಿ ದ್ವೇಷದಿಂದ ಚುನಾವಣೆ ಎದುರಿಸುತ್ತಿದ್ದು ಮತದಾರರು ಅರಿಯಬೇಕಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷವು ಜನಸಾಮಾನ್ಯರ ಬದುಕನ್ನು ಕಟ್ಟಿಕೊಡುವ ಪಕ್ಷ. ಆ ನಿಟ್ಟಿನಲ್ಲಿ ಮತದಾರರು ಒಂದು ನಿರ್ಣಯವನ್ನು ಕೈಗೊಳ್ಳಬೇಕು. ಜಿಲ್ಲೆ ಹಾಗೂ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ಭ್ರಷ್ಟಚಾರ ಮುಕ್ತ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಕಾರ್ಮಿಕರ ದಿನಾಚರಣೆ ದಿನವಾದ ಇಂದು ವಿವಿಧ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದು ಸಂತಸದ ವಿಷಯ. ಕಾರ್ಯಕರ್ತರು ತಮ್ಮ ವ್ಯಾಪ್ತಿಯ ಪ್ರತಿ ಮನೆಗಳಿಗೆ ತೆರಳಿ ಉತ್ತಮ ಆಡಳಿತ ಬೇಕಾದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಶ್ರಮವಹಿಸಬೇಕು ಎಂದರು.

ಇದೇ ವೇಳೆ ಗ್ರಾ.ಪಂ. ಸದಸ್ಯ ಪ್ರಭಾಕರ್ ಅವರೊಂದಿಗೆ ಗ್ರಾಮಸ್ಥರಾದ ಲಕ್ಷಣಗೌಡ, ದೇವರಾಜ್, ಪುಟ್ಟ ಸ್ವಾಮಿ, ರಾಜು, ಅರುಣ್, ಕುಮಾರ್, ನಗುನಂದನ್, ಧರ್ಮ, ದೊಡ್ಡತಮ್ಮ, ಚಂದ್ರಯ್ಯ, ಹರೀಶ್, ಲೋಕೇಶ್, ಶಂಕರಯ್ಯ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ವಿವಿಧ ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಕಾಂಗ್ರೆಸ್ ಕಸಾಬ ಹೋಬಳಿ ಅಧ್ಯಕ್ಷ ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ರಮೇಶ್, ಕಾರ್ಯದರ್ಶಿ ಪ್ರಕಾಶ್‌ರೈ, ಗ್ರಾ.ಪಂ. ಮಾಜಿ ಅಧ್ಯಕ್ಷ ಹೇಮಂತ್‌ಶೆಟ್ಟಿ, ಸದಸ್ಯ ರಂಗಸ್ವಾಮಿ, ಮುಖಂಡರುಗಳಾದ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...