Badminton Asia Championships ಭಾರತದ ಸಾತ್ವಿಕ್ ಸಾಯಿರಾಜ್ ರಣಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಏಷಿಯಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ನ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇದರ ಜೊತೆಗೆ ವರ್ಷದ ನಂತರ ದೇಶಕ್ಕೆ ಚಿನ್ನದ ಪದಕ ಒಲಿದು ಬಂದಿದೆ. ದುಬೈನಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ 16-21, 21-17,21-19ರಿಂದ ಮಲೇಷ್ಯಾದ ಆಂಗ್ ಯೇವ್ ಸಿನ್ ತಿಯೋ ಎಯಿ ಅವರನ್ನು ಮಣಿಸಿತು.
ಚಾಂಪಿಯನ್ಶಿಪ್ನ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ಬಲಿದ ಪ್ರಥಮ ಚಿನ್ನದ ಪದಕ ಇದಾಗಿದೆ.
1971ರಲ್ಲಿ ದಿನೇಶ್ ಖನ್ನಾ ಅವರು ಥಾಯ್ಲೆಂಡ್ ನ ಸಂಗೊಬ್ ರತ್ತನುಸೋರ್ನ್ ಅವರನ್ನು ಸೋಲಿಸಿ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.
Badminton Asia Championships ರೋಚಕ ಹೋರಾಟದಲ್ಲಿ ಗೆದ್ದ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ನ ಪುರುಷರ ಡಬಲ್ಸ್ ವಿಭಾಗದ ಚಾಂಪಿಯನ್ ಗಳಾಗಿ ಹೊರಹೊಮ್ಮಿದರು.
ದುಬೈನಲ್ಲಿ ನಡೆದ ಟು ನಿಯರ್ ಫೈನಲ್ ಪಂದ್ಯದಲ್ಲಿ ಆರಂಭದ ಹಿನ್ನಡೆಯಿಂದ ಪುಟಿದೆದ್ದ ಭಾರತದ ಆಟಗಾರರು, ಮಲೇಷ್ಯಾದ ಆಂಗ್ ಯೆವ್ ಸಿನ್ ತಿಯೊ ಎ ಯಿ ಅವರನ್ನು ಸೋಲಿಸಿದರು.