Congress Karnataka ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯ ಅಧ್ಯಕ್ಷರಾಗಿದ್ದ
ಅವಧಿಯಲ್ಲಿ ಕಾರ್ಖಾನೆಯ ಅಭಿವೃದ್ದಿಪಡಿಸುವ ಬದಲಿಗೆ ಬಾಳೆ ತೋಟಕ್ಕೆ ಆನೆ
ನುಗ್ಗಿದಂತೆ ಕಾರ್ಖಾನೆಗೆ ದುರ್ಘಗತಿ ಕಾಣಿಸಿದ ಮೇಲೆಯೆ ಅಧಿಕಾರಕ್ಕೆ ಬಂದ
ಭಾರತೀಯ ಜನತಾ ಪಕ್ಷದ ಅನೈತಿಕ ಸರ್ಕಾರದಲ್ಲಿ ಆರಗ
ಜ್ಞಾನೇಂದ್ರರವರು ಗೃಹ ಸಚಿವರಾಗಿದ್ದರು ಎನ್ನುವುದನ್ನು
ಮರೆಯಬಾರದೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ವಕ್ತಾರರಾದ
ವೈ.ಬಿ.ಚಂದ್ರಕಾಂತ್ ಎದುರೇಟು ನೀಡಿದ್ದಾರೆ.
ಕಾಂಗ್ರೇಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವ
ಉದ್ದೇಶದಿಂದ ಹುಟ್ಟಿ 130 ವರ್ಷಗಳು ಕಳೆದಿವೆ.
Congress Karnataka ಕಾಂಗ್ರೇಸ್ ಪಕ್ಷ 60
ವರ್ಷಗಳಿಗೂ ಹೆಚ್ಚು ಅವಧಿ ದೇಶದ ರಕ್ಷಣೆ ಮತ್ತು
ಅಭಿವೃದ್ದಿಯನ್ನು ಗಮನದಲ್ಲಿ ಇಟ್ಟುಕೊಂಡು ಧಕ್ಷತೆಯಿಂದ ಅಧಿಕಾರ
ನಡೆಸಿದೆ. ಕಾಂಗ್ರೇಸ್‌ಗೆ ಅನೈತಿಕತೆ ಅಂದರೆ ಏನೆಂದು ಗೊತ್ತಿಲ್ಲ. ಆದರೆ,
ಕಳೆದ 09ವರ್ಷಗಳಿಂದ ಪ್ರಧಾನಿ ಆಗಿರುವ ನರೇಂದ್ರ ಮೋದಿಯವರು
ಕಂಡಕಂಡವರಿಗೆ ಮೂರು ಕಾಸಿಗೆ ಮಾರಾಟ ಮಾಡಿದ ಆಸ್ತಿಗಳೆಲ್ಲವು
ಕಾಂಗ್ರೇಸ್ ಸರ್ಕಾರ ಕಷ್ಷಪಟ್ಟು ಮಾಡಿಟ್ಟಿದ್ದ ಆಸ್ತಿಗಳಾಗಿವೆ.
ಮೋದಿಯವರು
ದೇಶದ ಆಸ್ಥಿಗಳನ್ನು ಮಾರಾಟ ಮಾಡಿ ದೇಶವನ್ನು ದಿವಾಳಿ ಅಂಚಿಗೆ ತಂದ
ಕೀರ್ತಿಗೆ ಪಾತ್ರರಾಗಿದ್ದಾರೆ. ಜ್ಞಾನೇಂದ್ರರವರು ಇಂತಹ ಪಕ್ಷದಲ್ಲಿ
ಇದ್ದುಕೊಂಡು ಕಾಂಗ್ರೇಸ್ ಪಕ್ಷಕ್ಕೆ ಬುದ್ದಿ ಹೇಳುವುದು ಎಷ್ಷು ಸರಿ.
ರಾಜ್ಯದಲ್ಲಿ ಈ ಬಾರಿ ಕಾಂಗ್ರೇಸ್ ಪಕ್ಷ ಆಡಳಿತಕ್ಕೆ ಬಂದರೆ ರಾಜ್ಯದ ಜನರಿಗೆ ಯಾವ
ಸೌಲಭ್ಯಗಳನ್ನು ಕೊಡಬಹುದು ಎನ್ನುವ ಬಗ್ಗೆ ಸರಿಯಾದ ಜ್ಞಾನ
ಇಟ್ಟುಕೊಂಡೆ ಪ್ರಾಮಾಣಿಕವಾದ ಭರವಸೆಗಳನ್ನು ನೀಡಿದೆ.
ದೇಶದ ಜನರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು
ಆಡಳಿತ ನಡೆಸುತ್ತಿರುವ ಮೋದಿಯವರು ಜನಗಳಿಗೆ ಮೂಲಭೂತವಾಗಿ
ದೊರಕಿಸಿಕೊಡಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡದೇ ಜನರನ್ನು
ತೆರಿಗೆ ರೂಪದಲಿ ಜೀವಂತ ಸುಲಿಯುತ್ತಿದ್ದಾರೆ.
ಪ್ರಕೃತಿ ವಿಕೋಪದಂತಹ
ಸಂದರ್ಭಗಳಲ್ಲಿ ಕೂಡ ಮೋದಿಯವರು ಕರ್ನಾಟಕಕ್ಕೆ ಏಕೆ ಕಾಲಿಡಲಿಲ್ಲ.
ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಕೇಂದ್ರದಿಂದ ಏಕೆ
ಪರಿಹಾರ ಹಣ ತರಿಸಲು ವಿಫಲರಾದರು. ತೀರ್ಥಹಳ್ಳಿ ಕ್ಷೇತ್ರಕ್ಕೆ ಪ್ರಕೃತಿ
ವಿಕೋಪದ ಸಂದರ್ಭದಲ್ಲಿ ಎಷ್ಟು ಜನ ಸಂತ್ರಸ್ಥರಿಗೆ ಹಣ ಬಿಡುಗಡೆ
ಮಾಡಿಸಿದರೆಂದು ಅಂಕಿ ಅಂಶಗಳ ಸಹಿತ ಆರಗ ಜ್ಞಾನೇಂದ್ರರವರು ಹೇಳಲಿ.
ಇದಾವುದನ್ನು ಮಾಡದೆ ಈಗ ಚುನಾವಣೆ ಸಂದರ್ಭದಲ್ಲಿ ಗೆಲ್ಲುವ
ಉದ್ದೇಶದಿಂದ ದೊಂಬರಾಟ ಮಾಡುತ್ತಿದ್ದಾರೆಂದು ವಕ್ತಾರರಾದ
ವೈ.ಬಿ.ಚಂದ್ರಕಾಂತ್ ಆರೋಪಿಸಿದ್ದಾರೆ.
ರಾಜ್ಯದ ವಾರ್ಷಿಕ ಬಜೆಟ್ 3.09 ಕೋಟಿ ಇರುವಾಗ ಕಾಂಗ್ರೇಸ್ ಸರ್ಕಾರ
ಕೈಗೊಳ್ಳಲಿರುವ ಯೋಜನೆಗಳಿಗೆ 02 ಲಕ್ಷ ಕೋಟಿ ಹಣ
ಬೇಕಾಗಬಹುದೆಂದು ಆರಗ ಜ್ಞಾನೇಂದ್ರರವರು ನೀಡಿರುವ ಹೇಳಿಕೆತಲೆಬುಡವಿಲ್ಲದ ತಪ್ಪು ಲೆಕ್ಕಾಚಾರದ ಹೇಳಿಕೆಯಾಗಿದೆ ಎಂದಿದ್ದಾರೆ.
ತೀರ್ಥಹಳ್ಳಿ
ಕ್ಷೇತ್ರದ ಪ್ರಜ್ಞಾವಂತ ಮತದಾರರು ಬಿ.ಜೆ.ಪಿ.ಗೆ ಯಾವುದೆ ಸೊಪ್ಪು
ಹಾಕದೆ, ಪ್ರಾಮಾಣಿಕ ಹಾಗೂ ದಕ್ಷ ರಾಜಕಾರಣಿ ಆಗಿರುವ ಮಾಜಿ ಸಚಿವ ಕಿಮ್ಮನೆ
ರತ್ನಾಕರ್ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ
ಗೆಲ್ಲಿಸುವುದರಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವೆ ಆಡಳಿತಕ್ಕೆ
ಬರುವುದರಲ್ಲಿ ಯಾವುದೆ ಅನುಮಾನ ಇಲ್ಲವೆಂದು ಜಿಲ್ಲಾ ಕಾಂಗ್ರೇಸ್
ವಕ್ತಾರರಾದ ವೈ.ಬಿ.ಚಂದ್ರಕಾಂತ್ ಸವಾಲು ಹಾಕಿದ್ದಾರೆ.