Sorab Assembly Election ವಿಧಾನಸಭಾ ಚುನಾವಣೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೊರಬ ವಿಧಾನ ಕ್ಷೇತ್ರ ಬಂಗಾರಪ್ಪನವರ ರಾಜಕೀಯದ ತವರೂರು ಎಂದೇ ಪ್ರಸಿದ್ದಿ ಪಡೆದಿದೆ. ಬಂಗಾರಪ್ಪನವರ ಇಬ್ಬರು ಮಕ್ಕಳು ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಅವರ ರಾಜಕೀಯ ಆಶ್ರಯ ಪಡೆದಿರುವ ಕ್ಷೇತ್ರವಿದು.
ಈ ಕ್ಷೇತ್ರದಲ್ಲಿ ಯಾವ ಪಕ್ಷಗಳು ಗೆಲುವು ಸಾಧಿಸುತ್ತವೆ ಎಂಬುದಕ್ಕಿಂತ ಬಂಗಾರಪ್ಪನವರ ಮಕ್ಕಳು ಯಾವ ಯಾವ ಪಕ್ಷದಲ್ಲಿದ್ದಾರೆ ಎಂಬುದು ಮುಖ್ಯ.
ಮಧು ಬಂಗಾರಪ್ಪ ಅವರು ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದ್ರು. ದೀರ್ಘ ಕಾಲದಲ್ಲಿ ಕಾಂಗ್ರೆಸ್ ನಲ್ಲಿದ್ದ ಕುಮಾರ್ ಬಂಗಾರಪ್ಪನವರು ಬಿಜೆಪಿಗೆ ಸೇರ್ಪಡೆಯಾದರು..
ಪ್ರತಿ ಬಾರಿಯ ಚುನಾವಣೆಯಲ್ಲಿ ಬಂಗಾರಪ್ಪ ಅವರ ಮಕ್ಕಳದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಅವರ ಸ್ಪರ್ಧೆಯಿಂದಾಗಿ ಸೊರಬ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ.
2018ರಲ್ಲಿ ಸೊರಬ ಕ್ಷೇತ್ರದ ಫಲಿತಾಂಶವನ್ನು ನೋಡುವುದಾದರೆ…
2018ರ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಕುಮಾರ್ ಬಂಗಾರಪ್ಪ ಅವರು ಸ್ಪರ್ಧಿಸಿದ್ದರು. ಇವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರು ಸ್ಪರ್ಧಿಸಿದ್ದರು.
72,091 ಮತಗಳನ್ನು ಬಿಜೆಪಿ ಅಭ್ಯರ್ಥಿಯಾದ ಕುಮಾರ್ ಬಂಗಾರಪ್ಪ ಅವರು ಗಳಿಸಿದ್ದರು.
58,805 ಮಧು ಬಂಗಾರಪ್ಪನವರು ಪಡೆದಿದ್ದರು. ಇವರಿಬ್ಬರ ನಡುವೆ ಸುಮಾರು 13 ಸಾವಿರ ಮತಗಳ ಅಂತರದಲ್ಲಿ ಕುಮಾರ್ ಬಂಗಾರಪ್ಪ ಅವರು ಗೆಲುವನ್ನು ಸಾಧಿಸಿದ್ದರು.
2018ರಲ್ಲಿ ಸೊರಬ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 1,84,585 ಮತಗಳು. ಇದರಲ್ಲಿ ಪುರುಷ ಮತದಾರರ ಸಂಖ್ಯೆ 93911.
ಒಟ್ಟು ಮಹಿಳಾ ಮತದಾರರ ಸಂಖ್ಯೆ 90662.
ತೃತೀಯ ಲಿಂಗಿ ಮತದಾರರ ಸಂಖ್ಯೆ 12.
ಒಟ್ಟು ನೋಟಾ ಓಟುಗಳು 1039.
Sorab Assembly Election ಸೊರಬ ಕ್ಷೇತ್ರದಲ್ಲಿ ಸುಮಾರು ಐದು ಬಾರಿ ಬಂಗಾರಪ್ಪ ಅವರ ಮಕ್ಕಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈಗ 2023ನೇ ವಿಧಾನಸಭಾ ಚುನಾವಣೆಯಲ್ಲಿ ಆರನೇ ಬಾರಿ ಈ ಸಹೋದರರು ಸ್ಪರ್ಧೆಯ ಅಖಾಡಕ್ಕಿಳಿಯಲಿದ್ದಾರೆ.
ಇನ್ನೂ 2023ರ ಸೊರಬ ಕ್ಷೇತ್ರದ ಒಟ್ಟು ಮತದಾರರು 1,84,621.
ಈ ಕ್ಷೇತ್ರದ ಒಟ್ಟು ಮತಗಟ್ಟೆಗಳ ಸಂಖ್ಯೆ 239.
2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರು ಜಯ ಗಳಿಸಿದ್ದರು. ಈ ಬಾರಿಯ 2023ನೇ ವಿಧಾನಸಭಾ ಚುನಾವಣೆಯ ಯುದ್ಧದಲ್ಲಿ ಜಯಮಾಲೆ ಯಾರು ಪಡೆಯುತ್ತಾರೆ ಎಂದು ಕಾದು ನೋಡಬೇಕಾಗಿದೆ.