Ambedkar Jayanti ಚಿಕ್ಕಮಗಳೂರು ತಾಲ್ಲೂಕಿನ ತೇಗೂರು ಗ್ರಾಮದಲ್ಲಿ ಅಂಬೇಡ್ಕರ್ ಸ್ವಸಹಾಯ ಸಂಘ ಹಾಗೂ ಜೈ ಮಾರುತಿ ಯುವಕರ ಸಂಘದ ವತಿಯಿಂದ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಭಾವಚಿತ್ರಕ್ಕೆ ಮಹಿಳೆಯರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮೂಲಕ ಸಡಗರ ದಿಂದ ಆಚರಿಸಿದರು.
ನಂತರ ಮಾತನಾಡಿದ ಸ್ವಸಹಾಯ ಸಂಘದ ಅಧ್ಯಕ್ಷೆ ಅರುಣಾಕ್ಷಿ ಅಂಬೇಡ್ಕರ್ ಅವರು ಭಾರತದ ಆಶಾಕಿರಣ, ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ. ಅವರ ಸಂವಿಧಾನದಂತೆ ನಾವೆಲ್ಲರೂ ಕಾರ್ಯಪ್ರವೃತ್ತರಾಗಿ ಪ್ರಗತಿ ಪಥದತ್ತ ನಡೆಯಲು ಮುಂದಾಗಬೇಕು ಎಂದು ಹೇಳಿದರು.
ವಿದೇಶದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲ ಭಾರತೀಯರು ಅಂಬೇಡ್ಕರ್ ಅವರು. ಸುಮಾರು 64 ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದರು. ಹಾಗೂ ಒಂಬತ್ತು ಭಾಷೆಗ ಳನ್ನು ಬಲ್ಲವರಾಗಿದ್ದರು. ವಿಶ್ವದರ್ಜೆಯ ವಕೀಲರಾಗಿ ಸಮಾಜ ಸುಧಾರಕರಾಗಿ ಕಾರ್ಯನಿರ್ವಹಿಸಿದ್ದರು ಎಂದು ತಿಳಿಸಿದರು.
ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಲು ಮಹಾನ್ ಹೋರಾಟ ನಡೆಸಿದ ದೇಶದ ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್. ಅವರ ಜೀವನ ಚರಿತ್ರೆಯನ್ನು ಅಭ್ಯಾಸಿಸುವ ಮೂಲಕ ಅವರ ಆದರ್ಶ, ಆಶಯ ಹಾಗೂ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಜೈ ಮಾರುತಿ ಯುವಕರ ಸಂಘದ ಯುವಕರು ಹಾಗೂ ಗ್ರಾಮಸ್ಥರು ಅಂಬೇ ಡ್ಕರ್ ಭಾವಚಿತ್ರ ವನ್ನು ಗ್ರಾಮದ ಸುತ್ತಮುತ್ತಲು ಮೆರವಣಿಗೆ ನಡೆಸಿದರು.
Ambedkar Jayanti ಈ ಸಂದರ್ಭದಲ್ಲಿ ಜೈ ಮಾರುತಿ ಯುವಕರ ಸಂಘದ ಆನಂದ್, ಗಿರೀಶ್, ಚೇತನ್, ಮಧು, ನವೀನ್, ಚಂದ್ರು, ಮಂಜು, ಗ್ರಾಮಸ್ಥರಾದ ಶಿವಯ್ಯ, ನಟರಾಜ್, ಸ್ವಸಹಾಯ ಸಂಘದ ಉಪಾಧ್ಯಕ್ಷೆ ರೇಣುಕಾ, ಸದಸ್ಯರಾದ ಭವ್ಯ, ಹೇಮ, ವಸಂತ, ಜಯಮ್ಮ, ಪೂರ್ಣಿಮಾ, ಭಾಗ್ಯಮ್ಮ, ರೇಖಾ, ಮಂಜುಳಾ, ನಂಜಮ್ಮ, ಕವಿತಾ, ಶಂಕರಮ್ಮ, ಸವಿತಾ, ಮಂಜುಳಾ, ಮಾಲತಿ, ನೀಲಮ್ಮ, ಯಶೋಧ, ಹಾಲಮ್ಮ, ಓಂಕಾರಮ್ಮ, ಧನಲಕ್ಷ್ಮೀ ಇನ್ನೂ ಮುಂತಾದವರು ಉಪಸ್ಥಿತರಿದ್ದರು.