IMA Shivamogga ಏಪ್ರಿಲ್ 6, 2023 ರಂದು ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯಿಂದ ಸೈಕಲ್ ಜಾಥಾ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್ ಸದಸ್ಯರೂ ಪಾಲ್ಗೊಂಡಿದ್ದರು . ಐಎಂಎ ಹಾಲ್ನಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಎಸ್ಪಿ ಮಿಥುನಕುಮಾರ್ ಅವರು ಹಸಿರು ಭಾವುಟದಿಂದ ಸೈಕಲ್ ಜಾಥಾಗೆ ಚಾಲನೆ ನೀಡುತ್ತಾ ಉದ್ಘಾಟಿಸಿದರು.
ಬದಲಾದ ಜೀವನಶೈಲಿಯ ಪ್ರಭಾವದಿಂದ ಇಂದಿನ ದಿನಗಳಲ್ಲಿ ಆರೋಗ್ಯ ಹದಗೆಡುತ್ತಿದೆ . ಅದಕ್ಕೋಸ್ಕರ ಎಲ್ಲ ವಯಸ್ಸಿನವರೂ ಸೇರಿ ತಮ್ಮ ದಿನಚರಿಯಲ್ಲಿ ದೈಹಿಕ ಚಟುವಟಿಕೆಗೆ ಸಮಯ ಕಲ್ಪಿಸಿಕೊಂಡು ನಿರಂತರವಾಗಿ ಅದನ್ನು ಪಾಲಿಸ ಬೇಕು . ವ್ಯಾಯಾಮ ಉತ್ತಮ ಆರೋಗ್ಯಕ್ಕೆ ರಹದಾರಿ ಎಂಬ ಮುಖ್ಯವಾದ ಸಂದೇಶವನ್ನು ಕೊಟ್ಟರು.
IMA Shivamogga ಐಎಂಎ ಅಧ್ಯಕ್ಷರಾದ ಡಾ . ಅರುಣ್.ಎಂ.ಎಸ್ ಅವರು ಜಾಗತಿಕವಾಗಿ ಆಚರಿಸಲ್ಪಡುವ ವಿಶ್ವ ಆರೋಗ್ಯ ದಿನಾಚರಣೆ ಜನರಲ್ಲಿ ಉತ್ತಮ ಆರೋಗ್ಯಕ್ಕಾಗಿ ಪಾಲಿಸಬೇಕಾದ ಸೂತ್ರಗಳ ಬಗ್ಗೆ ಜಾಗೃತಗೊಳಿಸಲು ಅವಕಾಶ ಕಲ್ಪಿಸುತ್ತದೆ. ಆರೋಗ್ಯವು ಜೀವನದ ಮೂಲತತ್ವ, ಅದು ಇಲ್ಲದೆ ಎಲ್ಲವೂ ನಿಷ್ಪ್ರಯೋಜಕ ಎಂದು ನುಡಿದರು . ಸೈಕಲ್ ಜಾಥಾ ಆರೋಗ್ಯ ಘೋಷಣೆಗಳೊಂದಿಗೆ ನಗರದ ಜೈಲ್ ಸರ್ಕಲ್ ,ಲಕ್ಷ್ಮಿ ಚಿತ್ರಮಂದಿರ , ಉಷಾ ನರ್ಸಿಂಗ್ ಹೋಂ , ಸವಳಂಗ ರಸ್ತೆ – ಈ ಪ್ರಮುಖ ಬೀದಿಗಳ ಮೂಲಕ ತೆರಳಿ ಅಬ್ಬಲಗೆರೆ ಈಶ್ವರ ವನದಲ್ಲಿ ತೆರವುಕಂಡಿತು.
ಪ್ರಮುಖರಾದ ಡಾ . ಶ್ರೀಕಾಂತ್ ಹೆಗ್ಡೆ , ಡಾ . ಪರಮೇಶ್ವರ್ , ಡಾ . ವಿನಾಯಕ್ ಬಾಬು , ಡಾ . ಚಂದ್ರಪ್ರಕಾಶ್ , ಡಾ . ಶಂಭುಲಿಂಗ , ಡಾ . ಕೌಸ್ತುಭ ಹಾಗು ಶ್ರೀ . ವಿಜಯಕುಮಾರ್ , ಶ್ರೀ . ಗಿರೀಶ್ , ಶ್ರೀ. ನವ್ಯಶ್ರೀ ನಾಗೇಶ್ ಉಪಸ್ಥಿತರಿದ್ದರು . ಐಎಂಎ ಕಾರ್ಯದರ್ಶಿ ಡಾ . ರಕ್ಷಾ ರಾವ್ ಸ್ವಾಗತ ಕೋರಿ ನಿರೂಪಿಸಿದರು . ಎಸ್ ಸಿ ಸಿ ಅಧ್ಯಕ್ಷ ಶ್ರೀ . ಶ್ರೀಕಾಂತ್ ವಂದನಾರ್ಪಣೆ ಮಾಡಿದರು.
ಹಿರಿಯ ಕಿರಿಯ ಐಎಂಎ ಹಾಗು ಎಸ್ ಸಿ ಸಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು .