ಕೋವಿಡ್ ಪೂರ್ವ ಪರಿಸ್ಥಿತಿಯಲ್ಲಿದ್ದ ಶಿಕ್ಷಣದ ಗುಣಮಟ್ಟ ಈಗ ಮತ್ತಷ್ಟು ಉತ್ತಮವಾಗಿದೆ ಎಂದು ಭಾರತೀಯ ಯುವಜನತೆ ಅಭಿಪ್ರಾಯಪಟ್ಟಿದೆ. ಯುನಿಸೆಫ್ ಗ್ಯಾಲಪ್ ಇಂಟರ್ನ್ಯಾಷನಲ್ ಸರ್ವೇ ಪ್ರಕಾರ ಈ ಅಭಿಪ್ರಾಯ ಹೊರಹೊಮ್ಮಿದೆ.
ಜಗತ್ತಿನ 21 ರಾಷ್ಟ್ರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಭಾರತದ 1500 ಜನರನ್ನು ಈ ಬಗ್ಗೆ ಸಮೀಕ್ಷೆಗೆ ಒಳಪಡಿಸಲಾಗಿತ್ತು. 40 ವರ್ಷಕ್ಕೂ ಮೀರಿದ ಶೇ. 45 ಮಂದಿ ಶಿಕ್ಷಣವು ಜೀವನದ ಯಶಸ್ಸನ್ನು ನಿರ್ಧರಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ. ಶೇ.58 ರಷ್ಟು ಯುವಜನರ ಪ್ರಕಾರ ಇಂದಿನ ಎಳೆಯರು ಬಹಳಷ್ಟು ಒತ್ತಡಕ್ಕೆ ಈಡಾಗುತ್ತಿದ್ದಾರೆ ಎಂದಿದ್ದಾರೆ. 15 ರಿಂದ 24 ವರ್ಷದೊಳಗಿನ ಯುವಜನತೆ ಇಂದಿನ ಶೈಕ್ಷಣಿಕ ಗುಣಮಟ್ಟ ಹಿಂದಿಗಿಂತಲೂ ಉತ್ತಮವಾಗಿದೆ ಎಂದಿದ್ದಾರೆ.ಈ ಯುವ ಜನತೆಗೆ ಜಗತ್ತು ಪ್ರಶಸ್ತವಾಗಿದೆ ತಿಳಿಸಿದ್ದಾರೆ ಎಂಬ ವಿಷಯವನ ಭಾರತದ ಯುನಿಸೆಫ್ ಪ್ರತಿನಿಧಿಯಾಗಿರುವ ಯಸುಮಾಸ ಕಿಮುರ ಹೇಳಿದ್ದಾರೆ.
ಈ ವರದಿಯ ಪ್ರಕಾರ ಶೇ.55 ರಷ್ಟು ಯುವಜನ ಹವಾಮಾನ ವೈಪರೀತ್ಯದ ಬಗ್ಗೆ ತಿಳಿದುಕೊಂಡಿದ್ದಾರೆ. ಶೇ.65 ರಷ್ಟು ಯುವಜನತೆ ರಾಜಕಾರಣಿಗಳು ಮಕ್ಕಳ ಅಭಿಪ್ರಾಯಗಳನ್ನು ಆಲಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಬಹುಪಾಲು ಶೇ.57 ರಷ್ಟು ಯುವಜನತೆ ಹೆಣ್ಣುಮಕ್ಕಳ ಮದುವೆ ವಯಸ್ಸು 18ಕ್ಕೂ ಹೆಚ್ಚಿರಬೇಕು ಎಂದು ಬಯಸುತ್ತಾರೆ.
ಮತ್ತಷ್ಟು ಕುತೂಹಲಕರ ಸಮೀಕ್ಷೆ ಎಂದರೆ ಶೇ.57 ರಷ್ಟು ಯುವಜನತೆ ನಿತ್ಯ ಇಂಟರ್ನೆಟ್ ಬಳಸುತ್ತಾರೆ ಎಂದು ವಿವಿಧ ಸಮೀಕ್ಷೆಗಳ ಮೂಲಕ ತಿಳಿದುಬಂದಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.